ತನ್ನ ಹೆಂಡ್ತಿ ಜೊತೆ ರೌಡಿಶೀಟರ್‌ ಅಕ್ರಮ ಸಂಬಂಧ ಇಟ್ಕೊಂಡಿದ್ದ. ಅದನ್ನ ನೋಡಿ ಸಹಿಸಿಕೊಳ್ಳಲಾಗದ ಗಂಡ ಆತನನ್ನು ಮನಬಂದಂತೆ ಕೊಚ್ಚಿ ಕಲ್ಲಿನಿಂದ ಚಚ್ಚಿ ಕೊಂದು ಹಾಕಿದ್ದಾನೆ.

ವಿಜಯಪುರ (ಏ.11): ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ರೌಡಿಶೀಟರ್ ಓರ್ವನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಜಯಪುರ ಹೊರವಲಯದ ಇಟ್ಟಂಗಿಹಾಳ ರಸ್ತೆ ಬಳಿ ಜಮೀನಿನಲ್ಲಿ ಶನಿವಾರ ರಾತ್ರಿ ವೇಳೆ ದಸ್ತಗೀರಸಾಬ ಮಮದಾಪುರ(45) ಎಂಬಾತನನ್ನು ಕೊಲೆ ಮಾಡಲಾಗಿದೆ. 

ಅಣ್ಣಪ್ಪಗೌಡ ಬಾಗಾಯತ ಹಾಗೂ ಆತನ ಸಹಚರರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲಿನಿಂದ ಚಚ್ಚಿ ದಸ್ತಗೀರಸಾಬನನ್ನು ಕೊಲೆ ಮಾಡಿದ್ದಾರೆ.

ರೌಡಿನೇ ಬೇಕೆಂದು ಮದ್ವೆಯಾಗಿ ಪ್ರಿಯಕರನೊಂದಿಗೆ ಚಕ್ಕಂದ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸುಂದರಿ ..

ಅಣ್ಣಪ್ಪ ಗೌಡನ ಪತ್ನಿಯೊಂದಿಗೆ ದಸ್ತಗೀರಸಾಬ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯ ಮೇರೆಗೆ ಕೊಲೆ ಮಾಡಲಾಗಿದೆ. 

ಕಳೆದ ಹದಿನೈದು ದಿನಗಳ‌ ಹಿಂದೆಯೂ ಸಹ ದಸ್ತಗೀರಸಾಬ್ ಕೊಲೆಗೆ ಯತ್ನ ನಡೆದಿತ್ತು. ಆದರೆ ಅಂದು ಕೊಲೆ ಯತ್ನ ಮಿಸ್ ಆಗಿದ್ದು ಇಂದು ಜಮೀನಲ್ಲೇ ಕೊಲೆ ಮಾಡಲಾಗಿದೆ. 

ಸ್ಥಳಕ್ಕೆ ಆದರ್ಶನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ಸಂಬಂಧ ಆರೋಪಿ ಅಣ್ಣಪ್ಪಗೌಡ ಬಾಗಾಯತನನ್ನು ಬಂಧಿಸಲಾಗಿದೆ.