ಹಾಸನ(ಡಿ.05): ಸರಸವಾಡುತ್ತಿದ್ದ ಜೋಡಿ ನಡುವಲ್ಲೇ ಕಲಹ ಮಾಡಿಕೊಂಡು ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೆತ್ತಲ್ಲೆಯಾಗಿದ್ದವನನ್ನು ಬಡಿದುಕೊಂದು ಮಹಿಳೆ ಬೆತ್ತಲೇಯಾಗಿಯೇ ಓಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸರಸವಾಡುವಾಗಲೇ ಕಲಹ ಮಾಡಿಕೊಂಡು ಗೆಳೆಯನ ಕೊಂದ ಘಟನೆ ಹಾಸನದಲ್ಲಿ ನಡೆದಿದೆ. ಬೆತ್ತಲೆಯಿದ್ದವನನ್ನ ಬಡಿದು ಕೊಂದ ಮಹಿಳೆ ಬೆತ್ತಲೆಯಾಗೇ ಓಡಿ ಹೋಗಿದ್ದಾಳೆ. ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ‌ ಘಟನೆ ನಡೆದಿದ್ದು, ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು: ಸತ್ತು 9 ತಿಂಗಳ ನಂತರ ಸೌದಿಯಿಂದ ಬಂತು ಮೃತದೇಹ..!

ಡಿಸೆಂಬರ್ 1 ರ ರಾತ್ರಿ ನಡೆದಿದ್ದ ಹತ್ಯೆ ಪ್ರಕರಣವನ್ನು ಹೊಳೆನರಸೀಪುರ ಪೊಲೀಸರು ಬೇಧಿಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅರಕಲಗೂಡು ತಾಲೂಕಿನ ಬಸವಾಪಟ್ಟಣ ನಿವಾಸಿ ಮಂಜು(43) ಕೊಲೆಯಾದ ದುರ್ದೈವಿ. ಹೊಳೆನರಸೀಪುರದ ವಸಂತಾ ಎಂಬಾಕೆ ಜೊತೆ ಮಂಜು ಅನೈತಿಕ ಸಂಬಂಧ ಹೊಂದಿದ್ದ. ರಾತ್ರಿ ಒಟ್ಟಿಗೇ ಕುಡಿದು ತಿಂದು ಸರಸದಲ್ಲಿ ತೊಡಗಿರುವಾಗಲೇ ಮಂಜು ಮೇಲೆ ವಸಂತಾ ಹಲ್ಲೆ ಮಾಡಿದ್ದಾಳೆ.

ಬೈ ಎಲೆಕ್ಷನ್ ಗದ್ದಲಲ್ಲಿ ಮಗುವಿಗೆ ಮದ್ಯ ಕುಡಿಸಿ ಕಿಡ್ನಾಪ್‌ಗೆ ಯತ್ನ

ಇಬ್ಬರೂ ಬೆತ್ತಲೆ ಇರುವಾಗಲೇ‌ ಜೋಡಿ ಬಡಿದಾಡಿಕೊಂಡಿದ್ದಾರೆ. ಯುವಕನಿಗೆ ದೊಣ್ಣೆಯಿಂದ ತಲೆಗೆ ಹೊಡೆದು ಬೆತ್ತಲಾಗೇ ಮಹಿಳೆ ಓಡುತ್ತಿರೊ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ಅತಿಯಾದ ರಕ್ತಸ್ರಾವದಿಂದ ಮಂಜು ಮೃತಪಟ್ಟಿದ್ದಾನೆ.

ಡಿಸೆಂಬರ್ 2ರ ಸೋಮವಾರ ಪುರಸಭೆ ಮಳಿಗೆ ಮುಂದೆ ಮಂಜು ಮೃತದೇಹ ಬೆತ್ತಲಾಗಿ ಪತ್ತೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ದೇವರ ರೂಪದಲ್ಲಿ ಬಂದ ಬೆಂಗ್ಳೂರು ಪೊಲೀಸ್ರು: ಸಾವಿನಿಂದ ನವ ದಂಪತಿ ಪಾರು