ದೇವರ ರೂಪದಲ್ಲಿ ಬಂದ ಬೆಂಗ್ಳೂರು ಪೊಲೀಸ್ರು: ಸಾವಿನಿಂದ ನವ ದಂಪತಿ ಪಾರು
3 ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದ ನವ ದಂಪತಿ ಸಾಯಲು ನಿಶ್ಚಯ ಮಾಡಿಕೊಂಡು ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾರೆ. ಇನ್ನೇನು ಸಾವಿನ ಮನೆ ಪ್ರವೇಶಿಸುತ್ತಿದ್ದಾರೆ ಎನ್ನುಷ್ಟರಲ್ಲಿ ದೇವರಂತೆ ಬಂದ ಬೆಂಗಳೂರು ಪೊಲೀಸರು ನವ ದಂಪತಿಯ ಜೀವ ಉಳಿಸಿ ಮಾದರಿಯಾಗಿದ್ದಾರೆ.
ಬೆಂಗಳೂರು, [ಡಿ.04]: ನಮ್ಮನ್ನ ಕಾಯಲು ಮೇಲೊಬ್ಬ ಇದ್ದಾನೆ ಅಂತಾರೆ. ಅಂದ್ರೆ ಮೇಲಿರುವ ದೇವರು ಬೇರೆ ರೂಪದಲ್ಲಿ ಬಂದು ಕಾಪಾಡ್ತಾನೆ ಎನ್ನುವ ಮಾತು ಹಳ್ಳಿ ಜನರು ಮಾತಾಡುವುದು ಹೆಚ್ಚು. ಅದು ಈಗ ನಿಜವೆನಿಸಿದೆ. ಹೇಗಂತೀರಾ? ಮುಂದೆ ಓದಿ.....
ಘಟನೆ ನಡೆದು ಎಲ್ಲಾ ಮುಗಿದ ಬಳಿಕ ಪೊಲೀಸರು ಸ್ಥಳಕ್ಕೆ ಬರ್ತಾರೆ ಎಂದು ಎಲ್ಲರೂ ಮೂಗು ಮುರಿಯುತ್ತಾರೆ. ಆದ್ರೆ, ಬೆಂಗಳೂರಿನಲ್ಲಿ ಪೊಲೀಸರ ಸಮಯ ಪ್ರಜ್ಞೆಯಿಂದ ನವ ದಂಪತಿ ಜೀವ ಉಳಿದಿದೆ.
ಉಗ್ರರ ವಾಸ್ತವ್ಯ : ಬೆಂಗಳೂರಿನ ಪಿಜಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ಹೌದು....ಬೆಂಗಳೂರಿನ ಗಿರಿನಗರ ಪೊಲೀಸರ ಸಮಯ ಪ್ರಜ್ಞೆಯಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ನವ ದಂಪತಿ ಸಾವಿನಿಂದ ಪಾರಾಗಿದ್ದಾರೆ. ಬಾಲಾಜಿ , ಸೌಮ್ಯ ಸಾವಿನಿಂದ ಪರಾದ ದಂಪತಿ. ಗಿರಿನಗರದ ತಮ್ಮ ಮನೆಯಲ್ಲಿ ಮಂಗಳವಾರ ರಾತ್ರಿ ಈ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.
3 ತಿಂಗಳ ಹಿಂದೆ ಅಷ್ಟೇ ಮದುವೆಯಾಗಿದ್ದ ಈ ನವ ಜೋಡಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಿಂದ ಕೂಡಲೇ ಸ್ಥಳಕ್ಕಾಗಮಿಸಿದ ಗಿರಿನಗರ ಪೊಲೀಸರು, ಬಾಲಾಜಿ ಮತ್ತು ಸೌಮ್ಯರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಕುಟುಂಬದವರಂತೆ ಅಲ್ಲೇ ಉಳಿದು ಚಿಕಿತ್ಸೆ ಕೊಡಿಸಿದ್ದಾರೆ.
ಇಬ್ಬರಿಗೂ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರಗೆ ದಾಖಲಿಸಿದಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದ್ರೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ.
ದೇಶ ಕಟ್ಟಲು ಹೊರಟ ನಿತ್ಯಾನಂದ, ದೊರೆ ನಡೆ ಅದೆಷ್ಟು ಚೆಂದ: ಟಾಪ್ 10 ಸುದ್ದಿ!
ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ ಬಳಿಕ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿಯಲಿದೆ. ಸರಿಯಾದ ಸಮಯಕ್ಕೆ ಪೊಲೀಸರು ಬಾರದೇ ಹೋಗಿದ್ದರೆ, ಸುಂದರ ಸಂಸಾರ ಮಾಡಬೇಕೆಂಬ ಕನಸಿನೊಂದಿಗೆ 3 ತಿಂಗಳ ಹಿಂದೆ ಅಷ್ಟೇ ಮದ್ವೆ ಮಾಡಿಕೊಂಡಿದ್ದ ನವ ದಂಪತಿಗಳ ಜೀವ ಹೋಗುತ್ತಿತ್ತು.
ಆದ್ರೆ, ಗಸ್ತಿನಲ್ಲಿದ್ದ ಗಿರಿನಗರ ಸಬ್ ಇನ್ಸ್‌ಪೆಕ್ಟರ್ ವಿನಯ್ ಮತ್ತು ಸಿಬ್ಬಂದಿ ದಂಪತಿಯನ್ನ ಕೂಡಲೇ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದಾರೆ. ಇವರ ಕಾರ್ಯಕ್ಕೆ ಏನು ಕೊಟ್ಟರೂ, ಏನು ಹೇಳಿದ್ರೂ ಕಡಿಮೆನೇ. ಯಾಕಂದ್ರೆ ಇನ್ನೇನು ಸಾವಿನ ಮನೆಯೊಳಗೆ ಕಾಲಿಡುತ್ತಿರುವಾಗಲೇ 'ಫಿನಿಕ್ಸ್'ನಂತೆ ಬಂದು ಜೀವ ಉಳಿಸಿದ್ದಾರೆ.
Realy great Job. Well done Keep the good work.....