ಬೆಳಗಾವಿ, [ಡಿ.04]:  ಮಗುವಿಗೆ ಮದ್ಯ ಕುಡಿಸಿ ಕಿಡ್ನಾಪ್ ಗೆ ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ.

ಈ ಘಟನೆ ಇಂದು [ಬುಧವಾರ] ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನಡೆದಿದೆ. ಬೀದರ್ -ಬಾಲ್ಕಿ ಮೂಲದ ಆರೋಪಿಗಳು  ರಾಯಬಾಗ ತಾಲೂಕಿನ ಮುಗಳಖೋಡ ಮೂಲದ ಬಾಲಕನನ್ನು ಕಿಡ್ನಾಪ್ ಗೆ ಯತ್ನಿಸಿದ್ದಾರೆ.

ವೈರಲ್ ಮಾಡ್ತೀನಿ, ಹಣ ಕೊಡಿ; ನಗ್ನ ವಿಡಿಯೋ ಮಾಡಿ ಮಹಿಳೆಯಿಂದ ರೇಪ್ ಬೆದರಿಕೆ!

ಬಾಲಕನನ್ನು ಕರೆದುಕೊಂಡು ಹೋಗುವಾಗ ಸಂಶಯಗೊಂಡ ಸ್ಥಳೀಯರು, ಆರೋಪಿಗಳನ್ನು ತಡೆದು ವಿಚಾರಿಸಿದಾಗ ಇದೊಂದು ಕಿಡ್ನಾಪ್ ಪ್ರಕರಣವಾಗಿರಬಹುದೆಂದು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯಕ್ಕೆ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಬಾಲಕನಿಗೆ ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನನ್ನು ಅಪಹರಣ ಮಾಡಲು ಯತ್ನಿಸಿದ್ದಾರೆಂದು ಮೇಲ್ನೊಟಕ್ಕೆ ತಿಳಿದುಬಂದಿದೆ. 

ಆರೋಪಿಗಳ ಹೆಸರು ಮತ್ತು ಬಾಲಕನ ಹೆಸರು ಮಾತ್ರ ಇನ್ನೂ ತಿಳಿದುಬಂದಿಲ್ಲ. ಆದ್ರೆ, ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಬಳಿಕ ಪ್ರಕರಣ ಸತ್ಯಾಸತ್ಯತೆ ತಿಳಿಯಲಿದೆ.