ಪ್ರಾಮಾಣಿಕರ ಬಗ್ಗೆ ಮಾತಾಡಿದರೆ ಹುಚ್ಚ ಅಂತಾರೆ: ನ್ಯಾ.ಸಂತೋಷ್ ಹೆಗ್ಡೆ
ಪ್ರಸ್ತುತ ಪ್ರಾಮಾಣಿಕರ ಬಗ್ಗೆ ಮಾತನಾಡಿದರೆ ಅವನೊಬ್ಬ ಹುಚ್ಚ ಎನ್ನುತ್ತಾರೆ. ಸಮಾಜದಲ್ಲಿ ಶ್ರೀಮಂತಿಕೆಗಾಗಿ ಪೈಪೋಟಿ ಶುರುವಾಗಿದೆ, ಹಣ ಲೂಟಿ ಮಾಡುವ ಸಂಪ್ರದಾಯ ಪ್ರಾರಂಭವಾಗಿದೆ. ದುರಾಸೆ ಎನ್ನುವ ರೋಗಕ್ಕೆ ಮದ್ದು ಇಲ್ಲದಂತಾಗಿದೆ, ಭ್ರಷ್ಟಾಚಾರ ವ್ಯಾಪಾಕವಾಗಿ ತಾಂಡವವಾಡುತ್ತಿದೆ ಎಂದು ನಿವೖತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
ಕೊಳ್ಳೇಗಾಲ (ಡಿ.16): ಪ್ರಸ್ತುತ ಪ್ರಾಮಾಣಿಕರ ಬಗ್ಗೆ ಮಾತನಾಡಿದರೆ ಅವನೊಬ್ಬ ಹುಚ್ಚ ಎನ್ನುತ್ತಾರೆ. ಸಮಾಜದಲ್ಲಿ ಶ್ರೀಮಂತಿಕೆಗಾಗಿ ಪೈಪೋಟಿ ಶುರುವಾಗಿದೆ, ಹಣ ಲೂಟಿ ಮಾಡುವ ಸಂಪ್ರದಾಯ ಪ್ರಾರಂಭವಾಗಿದೆ. ದುರಾಸೆ ಎನ್ನುವ ರೋಗಕ್ಕೆ ಮದ್ದು ಇಲ್ಲದಂತಾಗಿದೆ, ಭ್ರಷ್ಟಾಚಾರ ವ್ಯಾಪಾಕವಾಗಿ ತಾಂಡವವಾಡುತ್ತಿದೆ ಎಂದು ನಿವೖತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. ಮಾನಸ ಕ್ಯಾಂಪಸ್ ನಲ್ಲಿ ಅಯೋಜಿಸಲಾಗಿದ್ದ 3 ದಿನಗಳ ಕಾಲ ನಡೆಯುವ ಮಾನಸೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪ್ರಾಮಾಣಿಕತೆ ಬಗ್ಗೆ ಮಾತನಾಡಿದರೆ ಅವನೊಬ್ಬ ಹುಚ್ಚ ಎನ್ನುತ್ತಾರೆ. ಮತ್ತಷ್ಟು ಬೇಕೆನ್ನುವ ಆಸೆಯಿಂದಾಗಿ ಸಮಾಜದಲ್ಲಿ ಹಗರಣಗಳಾಗುತ್ತಿವೆ. 1950ರ ದಶಕದಲ್ಲಿ ದೇಶದಲ್ಲಿ ಯೋಧರಿಗೆ ಜೀಪ್ ಪೂರೈಸುವ ಗುತ್ತಿಗೆಯ ಜೀಪ್ ಹಗರಣದಿಂದ 50 ಲಕ್ಷ ರು. ಲೂಟಿಯಾಯಿತು. ಬೋಪೋರ್ಸ್ ಹಗರಣದಲ್ಲೂ ದೇಶಕ್ಕಾದ ನಷ್ಟ 64 ಕೋಟಿ ರು., ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದ 70 ಸಾವಿರ ಕೋಟಿ ರು. ಹಗರಣವಾಯಿತು. 2 ಜಿ ಹಗಣದಿಂದ 16 ಲಕ್ಷದ 76 ಸಾವಿರ ಕೋಟಿ ರು., ಟೊಲ್ ಗೇಟ್‌ನಲ್ಲಿ 1 ಲಕ್ಷದ 86 ಸಾವಿರ ಕೋಟಿ ರು. ಲೂಟಿಯಾಗಿದೆ. ಇದರಿಂದ ಬಡವರಿಗೆ ಅನ್ಯಾಯವಾಯಿತು. ರಾಷ್ಟ್ರ, ರಾಜ್ಯದ ಅಭಿವೖದ್ದಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
ರಾಮನಗರಕ್ಕೆ ಕಾವೇರಿ ತರುವ ಆಲೋಚನೆ ಡಿಕೆಶಿಯದ್ದು: ಸಂಸದ ಡಿ.ಕೆ.ಸುರೇಶ್
ಸಾನಿಧ್ಯ ವಹಿಸಿದ್ದ ಸಾಲೂರು ಬೖಹನ್ ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿಜಿ ಮಾತನಾಡಿ, ‘ಪ್ರಸ್ತುತ ಶಿಕ್ಷಣ ಪಡೆಯುವುದು ದೊಡ್ಡದಲ್ಲ, ಸಂಸ್ಕಾರ ಕಲಿಸುವ ಶಿಕ್ಷಣ ಪ್ರಸ್ತುತ ಅಗತ್ಯವಿದ್ದು ಸಂಸ್ಕಾರವಂತ ಶಿಕ್ಷಣ ಕಲಿಸುವಲ್ಲಿ ಮಾನಸ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ತನ್ನದೆ ಆದ ಶಕ್ತಿ ಇದ್ದು ನಿಮ್ಮ ಪ್ರತಿಭೆ ಜೊತೆ ಮೌಲ್ಯಯುತ ಶಿಕ್ಷಣ ಕಲಿತು ಸಾಧಕರಾಗಬೇಕು. ಪಿಯುಸಿ ಶಿಕ್ಷಣ ವಿದ್ಯಾಥಿ೯ ಜೀವನದ ಪ್ರಮುಖ ಘಟ್ಟವಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯನ ಶೀಲರಾಗಬೇಕು’ ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ, ಇಸ್ರೋ ವಿಜ್ಞಾನಿ ಎಂ ವಿ ರೂಪ, ಪ್ರೊ.ಶಿವರಾಜಪ್ಪ, ರೂಪ ದತ್ತೇಶ್, ರಾಣಿ, ವಸಂತ, ಸಂಸ್ಥೆಯ ಅಧ್ಯಕ್ಷ ನಾಗರಾಜು, ಡಾ. ನಾಗಭೂಷಣ, ಮಾನಸ ಬಾಬು, ಪ್ರಾಂಶುಪಾಲರುಗಳಾದ ಚನ್ನಶೆಟ್ಟಿ, ಕೖಷ್ಣೆಗೌಡ, ಧನಂಜಯ್, ಮಂಗಳದೇವಿ, ಶಂಕರ್ ಇದ್ದರು.
ತೃಪ್ತಿ, ಮಾನವೀಯತೆಯಿಂದ ಸಾರ್ಥಕ ಜೀವನ: ‘ತೖಪ್ತಿ ಇದ್ದರೆ ದುರಾಸೆ ಬರಲ್ಲ, ವಿದ್ಯಾರ್ಥಿಗಳು ತೖಪ್ತಿ ಎಂಬ ಮೌಲ್ಯ ಅಳವಡಿಸಿಕೊಳ್ಳಿ, ತೖಪ್ತಿ ಇಲ್ಲದಿದ್ದರೆ ಸಂತಸ ಇರದು, ತೖಪ್ಪಿ ಎನ್ನುವ ಗುಣ ನಿಮ್ಮಲ್ಲಿದ್ದರೆ ಬಹಳ ಕಾಲ ಸಂತೋಷ, ಸಮೃದ್ಧಿಯಲ್ಲಿರಲು ಸಾಧ್ಯ, ದೊಡ್ಡ ಹುದ್ದೆಯಲ್ಲಿರಬೇಕು, ಹಣ ಸಂಪಾದಿಸಬೇಕೆಂಬ ಅಭಿಲಾಷೆ ಸರಿ, ಆದರೆ ಮತ್ತೊಬ್ಬರ ಹೊಟ್ಟೆ ಹೊಡೆದು ಸಂಪಾದಿಸುವುದು ಸರಿಯಲ್ಲ, ಯುವ ಪೀಳಿಗೆ ತೃಪ್ತಿ ಮತ್ತು ಮಾನವೀಯ ಮೌಲ್ಯವೆಂಬ ಗುಣಗಳನ್ನು ಅಳವಡಿಸಿಕೊಂಡರೆ ಸಾರ್ಥಕ ಜೀವನ ಸಾಧ್ಯ. ಜತೆಗೆ ಶಾಂತಿ ಸೌಹಾರ್ದ ದೇಶ ನಿರ್ಮಾಣ ಸಾಧ್ಯವಾಗಲಿದೆ. ಇದ್ದುದ್ದರಲ್ಲೆ ತೖಪ್ತಿ ಹೊಂದಿದರೆ ದೇಶ, ಸಮಾಜದ ಉನ್ನತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಗತ್ತನ್ನು ಬದಲಿಸುವ ಶಕ್ತಿ ಯುವಕರಿಗಿದೆ. ಈ ನಿಟ್ಟಿನಲ್ಲಿ ಬುದ್ಧನ ದಯೆ, ಸಿಂಹದ ಶಕ್ತಿ ಹೊಂದಬೇಕು, ಪ್ರತಿಯೊಬ್ಬರಲ್ಲೂ ಅಪಾರ ಜ್ಞಾನವಿದೆ. ಸಾಧನೆ ಮಾಡಬೇಕೆನ್ನುವ ಛಲವಿದ್ದಲ್ಲಿ ಉನ್ನತ ಸಾಧನೆ ಸಾಧ್ಯ. ಕೌಹಳ, ಗಾಲವ ಮಹರ್ಷಿಗಳ ಜನ್ಮತಾಣ ಹೆಮ್ಮೆಯ ಕೊಳ್ಳೇಗಾಲ. ಇಂತಹ ಪರಿಸರದಲ್ಲಿ ಶುದ್ಧಗಾಳಿ ದೊರಕುತ್ತಿದೆ. ಕವಿ ಸಂತರೂ, ಪುಣ್ಯ ಪುರುಷರು ನಡೆದಾಡಿದ ಪವಿತ್ರ ತಾಣ ಚಾಮರಾಜನಗರ ಜಿಲ್ಲೆ.
-ಡಾ. ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಬೆಂಗಳೂರು.
ರಾಜ್ಯವೇ ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ಎಷ್ಟು ಸರಿ: ಡಿಕೆಶಿ
ನನ್ನ ಅಧಿಕಾರ ಅವಧಿಯಲ್ಲಿ ಒಂದು ಪೈಸೆ ಲಂಚ ಪಡೆದವನಲ್ಲ, ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ, ಲೋಕಾಯುಕ್ತರಾಗಿದ್ದ ವೇಳೆ ಅನೇಕ ಹಗರಣಗಳನ್ನು ಕಂಡೆ, ಎಲ್ಲಾ ಅನ್ಯಾಯಗಳು ಆಳುವ ಆಡಳಿತ ವ್ಯವಸ್ಥೆಯಿಂದಲೆ ನಡೆಯುತ್ತಿದೆ.ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು.
-ಸಂತೋಷ್ ಹೆಗಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ.