ಆತ್ಮಹತ್ಯೆ ಯೋಚನೆ ಬಂದರೆ ಒಳಮನಸ್ಸು ಕೇಳಿ: ಜೋಗತಿ ಮಂಜಮ್ಮ

ಆತ್ಮಹತ್ಯೆಯಂತಹ ಯೋಚನೆಗಳು ಬಂದಾಗ ಆಂತರ್ಯದ ಮಾತನ್ನು ಕೇಳಿ ಮನಸ್ಸನ್ನು ಹಗುರಾಗಿಸಿಕೊಂಡು ಸುಮ್ಮನೇ ಒಂದಿಷ್ಟುಸಮಯ ಕಳೆದುಬಿಡಬೇಕು ಎಂದು ಪದ್ಮಶ್ರೀ ಜೋಗತಿ ಮಂಜಮ್ಮ ಹೇಳಿದರು. 

If you have thoughts of suicide ask your innermost thoughts Says Jogati Manjamma gvd

ಬೆಂಗಳೂರು (ಜೂ.11): ಆತ್ಮಹತ್ಯೆಯಂತಹ ಯೋಚನೆಗಳು ಬಂದಾಗ ಆಂತರ್ಯದ ಮಾತನ್ನು ಕೇಳಿ ಮನಸ್ಸನ್ನು ಹಗುರಾಗಿಸಿಕೊಂಡು ಸುಮ್ಮನೇ ಒಂದಿಷ್ಟು ಸಮಯ ಕಳೆದುಬಿಡಬೇಕು ಎಂದು ಪದ್ಮಶ್ರೀ ಜೋಗತಿ ಮಂಜಮ್ಮ ಹೇಳಿದರು. ಚರ್ಚ್‌ ಸ್ಟ್ರೀಟ್‌ನ ‘ದಿ ಬುಕ್‌ ವರ್ಮ್‌’ನಲ್ಲಿ ಶನಿವಾರ ಹರ್ಷಾ ಭಟ್‌ ವಿರಚಿತ ‘ಫ್ರಮ್‌ ಮಂಜುನಾಥ್‌ ಟು ಮಂಜಮ್ಮ’ ಇಂಗ್ಲಿಷ್‌ ಕೃತಿ ಲೋಕಾರ್ಪಣೆ ಹಾಗೂ ಸಾಹಿತಿ ವಸುಧೇಂದ್ರ ಅವರದೊಂದಿಗಿನ ಸಂವಾದ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಮನೆಯಿಂದ ಹೊರದಬ್ಬಿದ ನಂತರ ಸಾಮೂಹಿಕ ಅತ್ಯಾಚಾರ ಎದುರಿಸಿದ ಸಂದರ್ಭದಲ್ಲಿ ಮನಸ್ಸು ಕೆಟ್ಟಿತ್ತು. ಹಿಂದೊಮ್ಮೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ನಾನು ಮತ್ತೊಮ್ಮೆ ರೈಲ್ವೆ ಹಳಿಯ ಮೇಲೆ ಮಲಗಿ ಸಾಯಲು ನಿರ್ಧರಿಸಿದ್ದೆ. ಆದರೆ, ಆಂತರ್ಯದ ಮಾತು ಕೇಳಿ ಒಂದು ಚೊಂಬು ನೀರು ಕುಡಿದು ಸುಮ್ಮನೆ ನಿದ್ರಿಸಿಬಿಟ್ಟೆ. ಅಂದಿನಿಂದ ಹೆಜ್ಜೆ ಮುಂದಿಡುವುದನ್ನು ಅಭ್ಯಾಸ ಮಾಡಿಕೊಂಡೇ ಹೊರತು ಅತ್ಮಹತ್ಯೆಯಂತಹ ಯೋಚನೆ ಮಾಡಿಲ್ಲ. ಶಾಲಾ, ಕಾಲೇಜು ಮಕ್ಕಳು ಕೂಡ ಇಂತಹ ಯೋಚನೆ ಬಂದಾಗ ಹೊರ ಮನಸ್ಸಿನ ಯೋಚನೆ ಬಿಟ್ಟು ಒಳಮನಸ್ಸಿನ ಮಾತು ಕೇಳಿ ನಿಮ್ಮನ್ನು ನೀವು ಹಗುರಾಗಿಸಿಕೊಳ್ಳಿ ಎಂದರು.

ಆ.1ರಿಂದ ಗೃಹಜ್ಯೋತಿ ಯೋಜನೆ ಆರಂಭಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ಜೋಗತಿ, ಜೋಗಮ್ಮ, ಜೋಗಪ್ಪ, ಮುತ್ತು ಕಟ್ಟುವ ಸಂಸ್ಕೃತಿಯ ಬಗ್ಗೆ ವಿವರಿಸಿದ ಅವರು, ಸಾಂಸ್ಕೃತಿಕ ವಿಚಾರಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಮನೆಯಿಂದ ಹೊರಬರುವಾಗ ತಂದೆ ಹೇಳಿದ್ದ ಗೌರವ ಕಾಪಾಡಿಕೊಳ್ಳುವ ವಿಚಾರವನ್ನು ಜೀವನದುದ್ದಕ್ಕೂ ತಪ್ಪದೆ ಪಾಲಿಸಿದ್ದೇನೆ. ನಮ್ಮ ಆತ್ಮಗೌರವವನ್ನು ಕಳೆದುಕೊಳ್ಳುವಂತಹ ಇನ್ನೊಬ್ಬರ ಎದುರು ತಪ್ಪಿತಸ್ಥರಾಗಿ ತಲೆ ತಗ್ಗಿಸುವಂತಹ ಕೆಲಸದತ್ತ ಚಿತ್ತ ಹರಿಸಬಾರದು ಎಂದರು.

ಪುಸ್ತಕದ ಲೇಖಕಿ ಹರ್ಷಾ ಭಟ್‌ ಮಾತನಾಡಿ, ಮಂಜಮ್ಮನವರು ಹೇಳುತ್ತಿದ್ದ ಸೂಕ್ಷ್ಮ ವಿಚಾರಗಳನ್ನು ಆಂಗ್ಲ ಭಾಷೆಗೆ ಇಳಿಸುವುದು ಸವಾಲಿನ ಕೆಲಸವಾಗಿತ್ತು. ಅದರ ಜೊತೆಗೆ ಮಂಜುನಾಥದಿಂದ ಮಂಜಮ್ಮನಾಗಿ ಬದಲಾದ ಪಥವನ್ನು ಬರೆಯುವುದು ಸುಲಭವಾಗಿರಲಿಲ್ಲ. ಇದು ಕೇವಲ ಒಬ್ಬ ಪುರುಷ ಮಹಿಳೆಯಾಗಿ ಬದಲಾದ ಕತೆ ಅಲ್ಲ, ತನ್ನ ಸುತ್ತಲು ಇರುವವರಿಗೆ ತಾಯಿಯಾಗಿ ಪೊರೆವ ಮಾತೃಸ್ವರೂಪವನ್ನು ಅಕ್ಷರಕ್ಕೆ ಇಳಿಸುವ ಸಂಗತಿ. ನನ್ನಿಂದ ಸಾಧ್ಯವಾದಷ್ಟರ ಮಟ್ಟಿಗೆ ಮಂಜಮ್ಮನವರ ಆತ್ಮಕಥನಕ್ಕೆ ಜೀವ ಕೊಟ್ಟಿದ್ದೇನೆ ಎಂದು ಹೇಳಿದರು.

ಹಜ್‌ ಭವನಕ್ಕೆ ಸಿದ್ದರಾಮಯ್ಯ 5000 ಕೋಟಿ ನೀಡಿಲ್ಲ: ಜಮೀರ್‌ ಅಹಮದ್‌ ಖಾನ್‌

ಸಾಹಿತಿ ವಸುಧೇಂದ್ರ ಮಾತನಾಡಿ, ಈಗಾಗಲೇ ಹಿಂದಿಯಲ್ಲಿ ‘ಮಿ ಹಿಜಡಾ, ಮಿ ಲಕ್ಷ್ಮಿ’ ಕೃತಿ, ಕನ್ನಡದಲ್ಲಿ ‘ನಾನು ಅವನಲ್ಲ ಅವಳು’ ಚಲನಚಿತ್ರಗಳು ಬಂದಿವೆ. ಸಾಂಸ್ಕೃತಿಕ ಸ್ಪರ್ಷ ಹಾಗೂ ಇತರೆ ವಿಚಾರಗಳಿಂದ ಈ ಕೃತಿ ಭಿನ್ನವಾಗಿದೆ. ಲೇಖಕಿ ಹರ್ಷಾ ಭಟ್‌ ಅವರು ಮಂಜಮ್ಮ ಅವರ ಆತ್ಮಚರಿತ್ರೆಯನ್ನು ಯಶಸ್ವಿಯಾಗಿ ಕೃತಿರೂಪಕ್ಕೆ ಇಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios