ಸ್ವಾತಂತ್ರ್ಯ ಕಳೆದುಕೊಂಡ ಕಾರಣದ ಅರಿವಿರಲಿ: ಸಿ.ಟಿ.ರವಿ

ಯಾವ ಕಾರಣಕ್ಕೆ ನಾವು ಸ್ವಾತಂತ್ರ್ಯ ಕಳೆದುಕೊಂಡಿದ್ದೆವು ಎಂಬುದನ್ನು ಅರಿಯದಿದ್ದರೆ ಈಗಲೂ ನಾವು ಪಡೆದ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು. 

If you dont know why you lost your freedom you will lose it again says ct ravi gvd

ಮೈಸೂರು (ಆ.17): ಯಾವ ಕಾರಣಕ್ಕೆ ನಾವು ಸ್ವಾತಂತ್ರ್ಯ ಕಳೆದುಕೊಂಡಿದ್ದೆವು ಎಂಬುದನ್ನು ಅರಿಯದಿದ್ದರೆ ಈಗಲೂ ನಾವು ಪಡೆದ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು. ಜೆಎಸ್‌ಎಸ್‌ ಮಹಾವಿದ್ಯಾಪೀಠವು ಊಟಿ ರಸ್ತೆಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಮೇಲೆ ಅನೇಕ ದಾಳಿಗಳಾದರೂ ಆರಂಭದಲ್ಲಿ ಅದನ್ನು ಸಮರ್ಥವಾಗಿ ಎದುರಿಸಿತ್ತು. ಆದರೆ ಕಾಲಕ್ರಮೇಣ ಸಂಘಟಿತ ಪ್ರಯತ್ನದ ಕೊರತೆಯಿಂದ ಸ್ವಾತಂತ್ರ್ಯ ಕಳೆದುಕೊಳ್ಳುವಂತಾಯಿತು. 

ಭಾರತ ಶೌರ್ಯ ತುಂಬಿದ್ದ ನಾಡು. ಶಕರು ಸೇರಿದಂತೆ ಅನೇಕ ವಂಶಗಳು ಇದ್ದವು. ಮಂಗೋಲಿಯನ್ನರ ಬರ್ಭರ ದಾಳಿಯನ್ನು ಜೀರ್ಣಿಸಿಕೊಂಡ ದೇಶ ನಮ್ಮದು ಎಂದರು. ಆದರೆ ಆ ನಂತರ ಸ್ವಾತಂತ್ರ್ಯ ಕಳೆದುಕೊಳ್ಳಲು ಏನು ಕಾರಣ ಎಂಬುದನ್ನು ನಾವು ಅರಿಯದಿದ್ದರೆ ಗಳಿಸಿರುವ ಸ್ವಾತಂತ್ರ್ಯ ಉಳಿಸಿಕೊಳ್ಳಲು ಆಗದು. ಭಾರತದಲ್ಲಿ ಸಾಮರ್ಥ್ಯ ಮತ್ತು ಶ್ರೀಮಂತಿಗೆ ಕೊರತೆ ಇರಲಿಲ್ಲ. ಸುಮಾರು ಮೂರ್ನಾಲ್ಕು ಸಾವಿರ ವರ್ಷಗಳ ಕಾಲ ಶ್ರೀಮಂತಿಕೆಯನ್ನು ಭಾರತ ಉಳಿಸಿಕೊಂಡು ಬಂದಿತ್ತು ಎಂದು ಅವರು ಹೇಳಿದರು. ಜಗತ್ತಿನಲ್ಲಿ ಜನ ಭಾರತದ ವಸ್ತುಗಳಿಗೆ ಹಾತೊರೆಯುತ್ತಿದ್ದರು. ಈಗಲೂ ನಿಧಿ ಆಸೆಗಾಗಿ ಭೂಮಿಯನ್ನು ಹಗೆಯಲಾಗುತ್ತದೆ. 

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸನ್ನಡತೆಯಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ

ನಾವು ಭೂಮಿ ಪೂಜೆ ಮಾಡಬೇಕಾದರೆ ಪಂಚರತ್ನಗಳನ್ನು ಹಾಕುತ್ತೇವೆ. ಅಂದರೆ ಪಂಚರತ್ನ ದ್ಯೂತಕವಾಗಿ ಕೆಲವು ವಸ್ತುಗಳನ್ನಷ್ಟೇ ಹಾಕುತ್ತೇವೆ. ಆದರೆ ಹಿಂದೆ ಭೂಮಿ ಪೂಜೆಗೆ ಪಂಚರತ್ನಗಳನ್ನೇ ಸುರಿಯುತ್ತಿದ್ದರು. ಅದನ್ನು ನೋಡಿಕೊಂಡು ನಿಧಿಗಾಗಿ ಹಗೆಯಲಾಗುತ್ತದೆ. ಅಷ್ಟು ಶ್ರೀಮಂತಿಕೆ ಇತ್ತು ಎಂದು ಅವರು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ವೈ.ಸಿ. ರೇವಣ್ಣ, ಶಾಸಕ ಸಿ.ಎಸ್‌. ನಿರಂಜನಕುಮಾರ್‌, ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ. ಬೆಟಸೂರಮಠ್‌ ಮೊದಲಾದವರು ಇದ್ದರು.
 
ಸಿಎಂ ಬದಲು ಕಪೋಲಕಲ್ಪಿತ ವರದಿ: ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ ಅವರು ಕುಳಿತ ಮೂರು ತಿಂಗಳಿಂದಲೆ ಸಿಎಂ ಬದಲಾವಣೆ ಚರ್ಚೆ ಶುರು ಮಾಡಿದ್ದರು. ನೀವು ಹೇಳಿದ ವರದಿಯೇ ಸತ್ಯವಾಗಿದ್ದರೆ ಇಷ್ಟೊತ್ತಿಗೆ 10 ಸಾರಿ ಸಿಎಂ ಬದಲಾಗಬೇಕಿತ್ತು. ಇದು ಕಪೋಲಕಲ್ಪಿತ ವರದಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವ​ರು, ಅಮಾವಾಸ್ಯೆ ಹುಣ್ಣಿಮ್ಮೆಗೆ ಯಾರಾರ‍ಯರಿಗೊ ಏನೇನೊ ಅನಿಸುತ್ತದೆ. ಅನಿಸಿದವರೆಲ್ಲರೂ ಸರಿ ಇದ್ದಾರೆ ಎಂದು ಹೇಳಲು ಸಾಧ್ಯವಾ? ಅದು ಅವರಿಗಿರುವ ರೋಗ ಎಂದರು.

ಆಡಳಿತದ ಹಿತಕ್ಕೆ ಹೋಟೆಲ್‌ನಲ್ಲಿರುತ್ತಿದ್ದ ಎಚ್‌ಡಿಕೆ: ಅಶ್ವತ್ಥ್‌ಗೆ ಸಾ. ರಾ. ಮಹೇಶ್‌ ತಿರುಗೇಟು

ಆಗ ಸಚಿವ ಮಾಧುಸ್ವಾಮಿ ಧ್ವನಿಗೂಡಿಸಿ, ಸರ್ಕಾರ ಮಾಡಿ ಜವಾಬ್ದಾರಿ ಇದ್ದವರು ಒಂದು ಸರ್ಕಾರದ ಬಗ್ಗೆ ಈ ರೀತಿ ಮಾತನಾಡಿ, ಅಧಿಕಾರಿಗಳ ಮೇಲೆ ಸರ್ಕಾರಕ್ಕಿರುವ ಹತೋಟಿ ಕಡಿಮೆ ಮಾಡುವ ಕೆಲಸ ಮಾಡಬಾರದು. ಸಿಎಂ ಬದಲಾಗುತ್ತಾರೆ ಎಂದು ಪದೆಪದೇ ಹೇಳುವುದು ಆಡಳಿತಶಾಹಿಗಳಿಗೆ ಎಲ್ಲೋ ಒಂದೆಡೆ ಬಿಕ್ಕಟ್ಟು ಕಡಿಮೆ ಮಾಡುವ ಸ್ಥಿತಿ ನಿರ್ಮಾಣ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಒಳಿತಲ್ಲ ಎಂದರು.

Latest Videos
Follow Us:
Download App:
  • android
  • ios