ತುಮಕೂರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ ಬೆಂಗಳೂರಿಗೆ ಹೋಗಬೇಕಾಗುತ್ತೇ: ಪುಟ್ಟರಾಜು

ತುಮಕೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಸ್‌.ಪಿ. ಮುದ್ದಹನುಮೇಗೌಡ ಗೆದ್ದರೆ ರಾಯದುರ್ಗ ರೈಲ್ವೆಗೆ ಮತ್ತೆ ಮರು ಜೀವ ಬರುತ್ತದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಮಾಜಿ ಅಧ್ಯಕ್ಷ ಪುಟ್ಟರಾಜು ಹೇಳಿದರು.

If the BJP candidate wins in Tumkur, he will have to go to Bangalore: Puttaraju snr

ಹೊಳವನಹಳ್ಳಿ: ತುಮಕೂರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಸ್‌.ಪಿ. ಮುದ್ದಹನುಮೇಗೌಡ ಗೆದ್ದರೆ ರಾಯದುರ್ಗ ರೈಲ್ವೆಗೆ ಮತ್ತೆ ಮರು ಜೀವ ಬರುತ್ತದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಮಾಜಿ ಅಧ್ಯಕ್ಷ ಪುಟ್ಟರಾಜು ಹೇಳಿದರು.

ಕ್ಯಾಮೇನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಮುದ್ದ ಹನುಮೇಗೌಡ ಗೆಲುವಿಗೆ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಬೆಂಬಲವಾಗಿ ನಿಂತಿದ್ದಾರೆ. ಕೊರಟಗೆರೆ ಕ್ಷೇತ್ರದ ಕಸಬಾ, ಹೊಳವನಹಳ್ಳಿ, ಪುರವಾರ ಹೋಬಳಿಯ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ. ಎಸ್‌ಪಿಎಂ ಗೆಲುವಿಗೆ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ಮಾಡಿಸಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡ ಶಿವಕುಮಾರ್ ಮಾತನಾಡಿ, ಕರ್ನಾಟಕದ 28 ಲೋಕಸಭಾ ಗೆಲುವಿಗೆ 5 ಗ್ಯಾರಂಟಿಗಳು ಸಹಕಾರಿಯಾಗಲಿವೆ. ಮುದ್ದಹನುಮೇಗೌಡ ಗೆಲುವು ಸಾಧಿಸುತ್ತಾರೆ. ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಹೆಚ್ಚಿನ ಮತ ಪಡೆಯಲಿದೆ ಎಂದು ಹೇಳಿದರು. ಮುಖಂಡರಾದ ನರಸಿಂಹರಾಜು, ಹನುಮಂತರಾಜು, ಗಂಗಣ್ಣ, ನರಸಿಂಹಯ್ಯ, ನಾಗರಾಜು, ರಂಗಧಾಮಯ್ಯ, ಹನುಮಂತರಾಯಪ್ಪ, ಲಕ್ಷ್ಮಮ್ಮ, ನಟರಾಜು, ದೇವರಾಜು, ರಂಗನಾಥ, ಲಕ್ಷ್ಮೀನರಸಪ್ಪ, ಮಂಜುನಾಥ ಇದ್ದರು.

Latest Videos
Follow Us:
Download App:
  • android
  • ios