ಮಂಡ್ಯ(ನ.28): ಕೆ. ಸಿ. ನಾರಾಯಣ ಗೌಡ ಚುನಾವಣೆಯಲ್ಲಿ ಗೆದ್ದರೆ ಕೆ. ಆರ್. ಪೇಟೆಯನ್ನು ಕಾಮಾಟಿಪುರ ಮಾಡ್ತಾರೆ ಎಂಬ ಮಾಜಿ ಸಚಿವ ಡಿ. ಸಿ. ತಮ್ಮಣ್ಣ ಹೇಳಿಕೆಗೆ ನಾರಾಯಣ ಗೌಡ ಉತ್ತರಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಾಜಿ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಡಿ.ಸಿ.ತಮ್ಮಣ್ಣರಿಂದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಿರುಗೇಟು ನೀಡಿದ್ದು, ಬಾಂಬೆ ಮಾದರಿ ಕಾಮಾಟಿಪುರ ಮಾಡ್ತಾನೆ ಎಂದು ತಮ್ಮಣ್ಣ ಹೇಳಿದ್ದರು.

BSY ಪ್ಯಾಂಟ್, ಶರ್ಟನ್ನು ವಿಶ್ವನಾಥ್‌ ಹರಿದು ಹಾಕ್ತಾರೆ: ಡಿಕೆಶಿ

ನಾನು ಮುಂಬೈನಲ್ಲಿದ್ರು‌ ಆ ಏರಿಯಾ ನನಗೆ ಗೊತ್ತಿಲ್ಲ. ಆ ಏರಿಯಾ ಅವ್ರಿಗೆ ಗೊತ್ತಿದೆ ಅಂದ್ರೆ ಅವರಿಗೆ ಅನುಭವವಿರಬೇಕು. ಅವರ ಅಳಿಯ ರಮೇಶ್‌ಗೆ ಕೇಳಿ ನೋಡಿ ನಾರಾಯಣಗೌಡ ಏನು ಎಂದು. ನಾರಾಯಣ ಗೌಡ ಏನು ಎಂಬುದು ಮುಂಬೈನ ಹೊರನಾಡ ಕನ್ನಡಿಗರಿಗೆ, ಗುಜರಾತಿ ಮಾರ್ವಾಡಿ ಕನ್ನಡಿಗರಿಗೆ ಗೊತ್ತಿದೆ. ಕಾಮಾಟಿಪುರವನ್ನ ಇವರು ಮಾಡಲು ಹೊರಟಿದ್ದಾರೋ, ನಾನು ಮಾಡಲು ಹೊರಟ್ಟಿದ್ದೀನೋ ಎಂದು ಪ್ರಶ್ನಿಸಿದ್ದಾರೆ.

ಎಚ್‌ಡಿಕೆ ಕಣ್ಣೀರಿಗೆ ಜನ ಕೊಚ್ಚಿ ಹೋಗಲ್ಲ: ಡಿವಿಎಸ್‌ ಟಾಂಗ್..!

ಇಂತವರಿಗೆ ಜನರೇ ತಕ್ಕಪಾಠ ಕಲಿಸಬೇಕಾಗುತ್ತೆ. ಇವರು ನನ್ನ ತಂದೆ ಸಮಾನ ಎಂದು ಸಿಎಂ ಹತ್ತಿರ ಹೋಗಿ ಮೀಟ್ ಮಾಡಿಸ್ತಿದ್ದೆ. ತಮ್ಮಣ್ಣನವರು ಒಬ್ಬ ಆಫೀಸರ್, ಒಬ್ಬ ಜಂಟಲ್ ಮನ್ ಎನ್ನುತ್ತಿದ್ದೆ. ಈಗ ಅವರ ತಲೇಲಿ ಈ ಭಾವನೆ ಇರೋದು ನೋಡಿದ್ರೆ ಇವರಿಗೆ ಅದರ ಬಗ್ಗೆ ಗೊತ್ತಿದೆ. ಇವರ ಬಾಯಲ್ಲಿ ಈ ಮಾತುಗಳು ಬಂದಿದೆ ಅಂದ್ಮೇಲೆ ಆ ಭಗವಂತ ಈತನಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಬುಧವಾರ ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ತಮ್ಮಣ್ಣ ಅವರು, ಕೆ. ಆರ್. ಪೇಟೆ ಅಭಿವೃದ್ಧಿಯಾಗಲು ದೇವೇಗೌಡ ಹಾಗೂ ರೇವಣ್ಣ ಕಾರಣ. ನಾರಾಯಣ ಗೌಡ ಅವರನ್ನು ಗೆಲ್ಲಿಸಿದರೆ ಕೆ. ಆರ್. ಪೇಟೆಯನ್ನು ಕಾಮಾಟಿಪುರ ಮಾಡಿಹಾಕುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಉಪಚುನಾವಣೆ: ಮಂಡ್ಯದಲ್ಲಿ 52 ಲಕ್ಷ ರೂಪಾಯಿ ವಶ