ಮಂಡ್ಯ(ನ.28): ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ತಮ್ಮನ್ನು ಬೆಳೆಸಿದ ಕಾಂಗ್ರೆಸ್‌, ನಂತರ ಅಂತ್ಯ ಕಾಲದಲ್ಲಿ ಕೈಹಿಡಿದ ಜೆಡಿಎಸ್‌ ಅನ್ನೂ ಬಿಡಲಿಲ್ಲ. ಇನ್ನು ಬಿಜೆಪಿ ಮತ್ತು ಅದರ ನಾಯಕರನ್ನು ಬಿಡುತ್ತಾರಾ? ಯಡಿಯೂರಪ್ಪರನ್ನು ಬಿಡುತ್ತಾರಾ? ಪ್ಯಾಂಟ್‌-ಶರ್ಟ್‌ ಎಲ್ಲ ಹರಿದು ಹಾಕ್ತಾರೆ ನೋಡ್ತಾ ಇರಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬಿಳಿಕೆರೆಯಲ್ಲಿ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರಲ್ಲಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಒಬ್ಬನೇ ಒಬ್ಬ ಅನರ್ಹ ಶಾಸಕರೂ ಗೆಲ್ಲಲ್ಲ ಎಂದಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಹೊರಟ ಡಿಕೆಶಿ ಮಾರ್ಗಮಧ್ಯೆ ಗರಂ ಆದ್ರು

ನ್ಯಾಯಾಲಯದಲ್ಲಿ ಅನರ್ಹರು ಎಂಬ ಹಣೆಪಟ್ಟಿಇರಿಸಿಕೊಂಡು ಮತ್ತೆ ಜನರ ಬಳಿ ಮತ ಕೇಳಲು ಬಂದಿರುವ ಇವರನ್ನು ಜನತೆ ತಿರಸ್ಕರಿಸಲಿದ್ದಾರೆ. ಯಾತಕ್ಕಾಗಿ ಇವರು ರಾಜೀನಾಮೆ ನೀಡಿದರು? ರಾಜ್ಯದ ಭವಿಷ್ಯಕ್ಕಾಗಿಯೇ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್‌, ಕೇವಲ ಸ್ವಾರ್ಥ ಸಾಧನೆ, ಅಧಿಕಾರ ಲಾಭಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ನಮ್ಮ ಸಮೀಕ್ಷೆಯಲ್ಲಿ ಬಿಜೆಪಿ ಒಂದೂ ಸ್ಥಾನ ಗೆಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಮಂಡ್ಯ: ವಾಹನ ತಪಾಸಣೆ ಮಾಡದ ಪೇದೆಗಳ ಅಮಾನತು

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಅನರ್ಹರು ಒಂದು ಸೀಟು ಕೂಡ ಗೆಲ್ಲಬಾರದು ಎಂದಿದ್ದಾರೆ. ಹುಣಸೂರಿನ ಬಿಜೆಪಿ ಅಭ್ಯರ್ಥಿ ಇದೀಗ ಪ್ರತಿಪಕ್ಷಗಳ ನಾಯಕರನ್ನು ಹೊಗಳಿ ಮಾತನಾಡುವ ಕಾರ್ಯ ಶುರು ಮಾಡಿಕೊಂಡಿದ್ದಾರೆ. ಇವರ ಬಣ್ಣಬಣ್ಣದ ಮಾತುಗಳಿಗೆ ಜನ ಮರುಳಾಗುವುದಿಲ್ಲ. ಪಕ್ಷಾಂತರಿಗಳಿಗೆ ಜನತೆ ಬುದ್ಧಿ ಕಲಿಸುತ್ತಾರೆ ಎಂದಿದ್ದಾರೆ.

ಎಚ್‌ಡಿಕೆ ಕಣ್ಣೀರಿಗೆ ಜನ ಕೊಚ್ಚಿ ಹೋಗಲ್ಲ: ಡಿವಿಎಸ್‌ ಟಾಂಗ್..!

ಡಿಸೆಂಬರ್ 5ರಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.