ಮೈಮರೆತರೆ ಮೇ 3ರ ನಂತರವೂ ಲಾಕ್‌ಡೌನ್
ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಿಸಿದ್ದು, ಪ್ರತಿಯೊಬ್ಬರೂ ಈ ಆದೇಶ ಪಾಲಿಸದಿದ್ದರೆ ಮೇ 3ರ ನಂತರವೂ ಲಾಕ್ ಡೌನ್ ವಿಸ್ತರಣೆ ಆದರೂ ಅಚ್ಚರಿ ಇಲ್ಲ ಎಂದು ದಾವಣಗೆರೆ ಉತ್ತರ ಕ್ಷೇತ್ರ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಎಚ್ಚರಿಸಿದ್ದಾರೆ.
ದಾವಣಗೆರೆ(ಏ.23): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಿಸಿದ್ದು, ಪ್ರತಿಯೊಬ್ಬರೂ ಈ ಆದೇಶ ಪಾಲಿಸದಿದ್ದರೆ ಮೇ 3ರ ನಂತರವೂ ಲಾಕ್ ಡೌನ್ ವಿಸ್ತರಣೆ ಆದರೂ ಅಚ್ಚರಿ ಇಲ್ಲ ಎಂದು ದಾವಣಗೆರೆ ಉತ್ತರ ಕ್ಷೇತ್ರ ಶಾಸಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಎಚ್ಚರಿಸಿದರು.
ನಗರದ 25ನೇ ವಾರ್ಡ್‌ನ ಡಿಸಿಎಂ ಲೇಔಟ್‌ನ ರಾಜನಹಳ್ಳಿ ಹನುಮಂತಪ್ಪ ಉದ್ಯಾನ ವನದಲ್ಲಿ ಅಗತ್ಯವುಳ್ಳವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ತೀವ್ರವಾಗಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು ನಿರ್ಲಕ್ಷಿಸದೇ ಪ್ರತಿಯೊಬ್ಬರೂ ಲಾಕ್ ಡೌನ್ ನಿಯಮಾವಳಿ ತಪ್ಪದೇ ಪಾಲಿಸಿಸಬೇಕು ಎಂದರು.
ಚಿತ್ರದುರ್ಗದಲ್ಲಿ 297 ಭಿಕ್ಷುಕರ ಆರೋಗ್ಯ ತಪಾಸಣೆ
ಕೋವಿಡ್-19 ವೈರಸ್ ಇಡೀ ಜಗತ್ತಿಗೆ ದೊಡ್ಡ ಸವಾಲಾಗಿದೆ. ದೇಶದಲ್ಲಿ ಸಾಕಷ್ಟುಮುಂಜಾಗ್ರತೆ ವಹಿಸಿ, ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಆದರೂ ಸೋಂಕು ಹರಡುವುದು ಮಾತ್ರ ಇಂದಿಗೂ ನಿಂತಿಲ್ಲ. ಲಾಕ್ ಡೌನ್ ಇದ್ದರೂ ಅಗತ್ಯ ಸೇವೆ, ವಸ್ತುಗಳ ಪೂರೈಕೆಗೆ ಸರ್ಕಾರಗಳು ಕ್ರಮ ಕೈಗೊಂಡಿವೆ. ಹೀಗಿದ್ದರೂ ಜನರು ಲಾಕ್ ಡೌನ್, ನಿಷೇಧಾಜ್ಞೆ, ಕಫä್ರ್ಯ ಜಾರಿಯಲ್ಲಿದ್ದರೂ ಬೀದಿಗೆ ಬರುತ್ತಿದ್ದಾರೆ. ವೈರಸ್ ನಿಯಂತ್ರಣ, ನಿರ್ಮೂಲನೆಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೇಯರ್ ಬಿ.ಜಿ.ಅಜಯಕುಮಾರ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ, ಉತ್ತರ ಬಿಜೆಪಿ ಅಧ್ಯಕ್ಷ ಸಂಗನಗೌಡ, ದಕ್ಷಿಣ ಅಧ್ಯಕ್ಷ ಆನಂದ ರಾವ್ ಸಿಂಧೆ, ವಾಣಿ ನಾಗಭೂಷಣ್ ಇತರರು ಇದ್ದರು.
ಲಾಕ್‌ಡೌನ್: ಮೀನು ಮಾರಿ ಎರಡು ದಿನದಲ್ಲಿ ಆರು ಲಕ್ಷ ಆದಾಯ..!
ಲಾಕ್ ಡೌನ್ ಆದೇಶ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿದ್ದರೆ ಏ.14ಕ್ಕೆ ಕೊರೋನಾ ನಿಯಂತ್ರಣಕ್ಕೆ ಬಂದು, ಜನಜೀವನ ಸಹಜವಾಗಿರುತ್ತಿತ್ತು. ಆದರೆ, ಜನರ ನಿರ್ಲಕ್ಷ್ಯದ ಪರಿಣಾಮ ಸೋಂಕು ಹೆಚ್ಚಾಗಿ, ಮೇ 3ರವರೆಗೂ ಎರಡನೇ ಹಂತದ ಲಾಕ್ ಡೌನ್ ಜಾರಿಗೊಂಡಿತು. ಈಗಲೂ ಕಾಲ ಮಿಂಚಿಲ್ಲ. ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಜರ್ ಬಳಸಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ ತಿಳಿಸಿದ್ದಾರೆ.