Asianet Suvarna News Asianet Suvarna News

ಐಎಎಸ್  ಅಧಿಕಾರಿ ಮೇಲೆ ಹಲ್ಲೆಗೆ ಮುಂದಾದವರ ಮೇಲೆ ಎಫ್‌ಐಆರ್ ದಾಖಲಿಸಿ

ಬೆಡ್ ಬುಕಿಂಗ್ ಮಾಫಿಯಾ ಪ್ರಕರಣ/ ಸಿಎಂಗೆ ಮನವಿ ಮಾಡಿಕೊಂಡ ಐಎಎಸ್ ಅಧಿಕಾರಿಗಳು/ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ/ ಎಲ್ಲ ಒತ್ತಡ ನುಂಗಿಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇವೆ

 

IAS officers association urges to book fir against who manhandled BBMP war room mah
Author
Bengaluru, First Published May 7, 2021, 11:08 PM IST

ಬೆಂಗಳೂರು ( ಮೇ 07)  ಬಿಬಿಎಂಪಿ ವಾರ್ ರೂಂನಲ್ಲಿ ಅಧಿಕಾರಿಗಳ ಕಾರ್ಯಕ್ಕೆ ಅಡ್ಡ ಬಂದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತೀಯ ಆಡಳಿತ ಸೇವಾ ಅಧಿಕಾರಿಗಳ ಸಂಘ ಕರ್ನಾಟಕ ಒತ್ತಾಯಿಸಿದೆ.

ಬಿಬಿಎಂಪಿ ವಾರ್ ರೂಂನಿಂದಲೇ ಬೆಡ್  ಬುಕಿಂಗ್ ದಂಧೆ ನಡೆಯುತ್ತಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಜನಪ್ರತಿನಿಧಿಗಳು ವಾರ್ ರೂಂಗೆ ಭೇಟಿ ನೀಡಿದ್ದ ವೇಳೆ ವಾಘ್ವಾದ ನಡೆದಿತ್ತು. ಅಲ್ಲಿನ ಜವಾಬ್ದಾರಿ ಹೊತ್ತುಕೊಂಡಿದ್ದ ಐಎಎಸ್ ಅಧಿಕಾರಿ ವಿ. ಯಶವಂತ್ ಅವರ ಮೇಲೆ ದೌರ್ಜನ್ಯವಾಗಿದ್ದು ಸಂಘ ಘಟನೆಯನ್ನು ಖಂಡಿಸಿದೆ.

ವಾರ್ ರೂಂಗೆ ತೆರಳಿ ತೇಜಸ್ವಿ ಕ್ಷಮೆ.. ಸುದ್ದಿ ಇಲ್ಲದವರು ಮಾಡಿದ ಕೆಲಸ

ಕೊರೋನಾದ ಸಂಕಷ್ಟ ಸಮಯದಲ್ಲಿ ಐಎಎಸ್ ಅಧಿಕಾರಿಗಳು ವಾರಿಯರ್ಸ್ ಆಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅನೇಕ ಒತ್ತಡಗಳನ್ನು ತಾಳಿಕೊಂಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಮಾಡುವುದು ಎಷ್ಟು ಸರಿ? ಎಂದು ಸಂಘ ಪ್ರಶ್ನೆ ಮಾಡಿದೆ.

ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ  ಕಾನೂನು  ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದೆ. 

IAS officers association urges to book fir against who manhandled BBMP war room mah

Follow Us:
Download App:
  • android
  • ios