Asianet Suvarna News Asianet Suvarna News

'ವಾರ್ ರೂಂಗೆ ತೆರಳಿ ತೇಜಸ್ವಿ ಕ್ಷಮೆ' ಸುದ್ದಿ ಇಲ್ಲದವರು ಮಾಡಿದ ಕೆಲಸ!

ವಾರ್ ರೂಂಗೆ ತೆರಳಿ ಕ್ಷಮೆ ಕೋರಿದ ತೇಜಸ್ವಿ ಸೂರ್ಯ ಸುದ್ದಿ ವೈರಲ್/ ಇದೊಂದು ಸತ್ಯಕ್ಕೆ ದೂರವಾದ ಮಾಹಿತಿ/ ಸುದ್ದಿ ಇಲ್ಲದವರು ಸುಳ್ಳು ಸುದ್ದಿ ಕ್ರಿಯೆಟ್ ಮಾಡುತ್ತಿದ್ದಾರೆ/ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ  ಬೆಂಗಳೂರು ದಕ್ಷಿಣ ಸಂಸದ

When one has no news they create fake news Bengaluru South MP Tejasvi Surya mah
Author
Bengaluru, First Published May 7, 2021, 2:47 PM IST

ಬೆಂಗಳೂರು(ಮೇ 07) ಬೆಡ್ ಬುಕಿಂಗ್ ದಂಧೆಯ ಕರಾಳ ಮುಖವನ್ನು ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ ಘಟನೆಯ ನಂತರ ವಾರ್ ರೂಂ ಗೆ ತೆರಳಿ ಕ್ಷಮೆಎಯಾಚಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಟ್ವೀಟ್ ಮೂಲಕ ತೇಜಸ್ವಿ ತಿಳಿಸಿದ್ದಾರೆ. 

ಪ್ರಕರಣವನ್ನು ಬಯಲಿಗೆ ತರುವುದು ನನ್ನ ಉದ್ದೇಶವಾಗಿತ್ತು. ಇದಿರಿಂದ ಯಾವುದೆ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ತೇಜಸ್ವಿ ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ಕಾಂಗ್ರೆಸ್ ಮುಖಂಡರೊಂದಿಗೆ ಬೆಡ್ ಬುಕಿಂಗ್ ದಂಧೆಕೋರ್ತಿ

 ಯಾರಿಗೆ ಸುದ್ದಿ ಇರುವುದಿಲ್ಲವೋ ಅವರು ಸುಳ್ಳು ಸುದ್ದಿಯನ್ನು ಸೃಷ್ಟಿ ಮಾಡಿ ಬಿತ್ತರಿಸುತ್ತಾರೆ ಎಂದು ತೇಜಸ್ವಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಹಣ ಉಳ್ಳವರು ಏಜೆಂಟರ ಮೂಲಕ ಬೆಡ್ ಬುಕ್ ಮಾಡಿಕೊಳ್ಳುತ್ತಿದ್ದು ಇದರಿಂದ ಸಾಮಾನ್ಯ ನಾಘರಿಕರು ತೊಂದರೆ ಪಡುವಂತಾಗಿದೆ. ಅನೇಕ ಜೀವಗಳು ಬಲಿಯಾಗಿವೆ. ನಾಳ್ಕು ಸಾವಿರಕ್ಕೂ ಅಧಿಕ ಬೆಡ್ ಬುಕ್ ಆಗಿತ್ತು ಎಂದು ದಾಖಲೆಗಳ ಮೂಲಕ ತೇಜಸ್ವಿ ಬಹಿರಂಗ ಮಾಡಿದ್ದರು. 

 

Follow Us:
Download App:
  • android
  • ios