ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ನಡೆದಿದ್ದ ವರ್ಗಾವಣೆ ಪರ್ವ, ಇದೀಗ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲೂ ಸಹ ಅಧಿಕಾರಿಗಳ ಎತ್ತಂಗಡಿ ಕಾರ್ಯ ಮುಂದುವರಿದಿದ್ದು, ಇದೀಗ ಬಿಬಿಎಂಪಿ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಬಿಬಿಎಂಪಿ ನೂತನ ಕಮೀಷನರ್ ಆಗಿ ಆರ್ ಅಶೋಕ್ ಆಪ್ತರನ್ನು ನೇಮಿಸಲಾಗಿದೆ.

ಬೆಂಗಳೂರು, (ಆ.17): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಮಂಜುನಾಥ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಭಾರೀ ಮಳೆಯಾದರೆ ಬೆಂಗಳೂರಿನ 182 ಏರಿಯಾಗಳು ಡೇಂಜರಸ್

ಬಿಬಿಎಂಪಿ ನೂತನ ಕಮಿಷನರ್ ಆಗಿ ಬಿಜೆಪಿ ಶಾಸಕ ಆರ್. ಅಶೋಕ್ ಪರಮಾಪ್ತರಾಗಿರುವ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸರ್ಕಾರದಿಂದ ಅಧಿಕೃತ ಅದೇಶವೊಂದೇ ಬಾಕಿ ಇದೆ.

ಇಂದಿರಾ ಕ್ಯಾಂಟೀನ್‌ ಭವಿಷ್ಯವೇನು?

1990ನೇ ಬ್ಯಾಚಿನ ಐಎಎಸ್​ ಅಧಿಕಾರಿಯಾಗಿರುವ ಗೌರವ್ ಗುಪ್ತಾ ಸರ್ಕಾರದ ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿರುವ ಅನುಭವ ಇದೆ.