Asianet Suvarna News Asianet Suvarna News

ಕ್ಷೇತ್ರ ಬದಲಾಯಿಸುತ್ತಾರಾ ಮಾಜಿ ಸಿಎಂ ಎಚ್‌ ಡಿ ಕೆ?

  • ಮಾಗಡಿ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ನಾಡುವುದಿಲ್ಲ
  • ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ
I will not contest From Magadi says HD kumaraswamy snr
Author
Bengaluru, First Published Jul 23, 2021, 9:47 AM IST
  • Facebook
  • Twitter
  • Whatsapp

 ಮಾಗಡಿ (ಜು.23): ಇಲ್ಲಿನ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ನಾಡುವುದಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ವೈಜಿಗುಡ್ಡ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಮಾಗಡಿಯಿಂದ ನಾನು ಸ್ಪರ್ಧೆ ಮಾಡಿದರೆ ಶಾಸಕ ಎ. ಮಂಜುನಾಥ ಅವರನ್ನು ಎಲ್ಲಿಗೆ ಕಳಿಸಲು ಸಾಧ್ಯ..?

ಚನ್ನಪಟ್ಟಣದಲ್ಲಿ ಅಂದು ಸಮಸ್ಯೆ ಇದ್ದು ಈ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ನಿಂತುಕೊಳ್ಳುವ ಪರಿಸ್ಥಿತಿ ಬಂದು ಎಂದರು.

ಅಂತಹ ಪರಿಸ್ಥಿತಿ ಮಾಗಡಿಯಲ್ಲಿ ಇಲ್ಲ ಇಲ್ಲಿನ ಜನತೆ ನಮ್ಮ ಪರವಾಗಿದ್ದಾರೆ. ಶಾಸಕ ಎ, ಮಂಜುನಾಥ್ ಅವರೇ ಮುಂದುವರಿಯಲಿದ್ದಾರೆ ಎಂದರು. 

HDK ಬಗ್ಗೆ ಮಾತಾಡಲು ನೈತಿಕತೆ ಇಲ್ಲ: ರಾಕ್‌ಲೈನ್‌ ಏನು ಶಾಸಕರಾ? ಸಂಸದರಾ?, ಶರವಣ

ಸಂಸ್ಕರತ ವಿಶ್ವವಿದ್ಯಾಲಯ  ನಿರ್ಮಾಣವನ್ನು ಮಾಗಡಿಯಲ್ಲಿ 369 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಎಷ್ಟು ಮಂದಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ರೈತಾಪಿ ಮಕ್ಕಳನ್ನು ಕಳಿಸುತ್ತಾರೆ. ನಾನು ಸಂಸ್ಕೃತ ಭಾಷೆ ವಿರೋಧಿಯಲ್ಲ. ತಾಲೂಕಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಅದನ್ನು ಸ್ಥಾಪಿಸುವಂತೆ ವಿದ್ಯಾರ್ಥಿ ವೇದಿಕೆ ಕಿರಣ್ ಮನವಿ ಮಾಡಿದರು. 

ಈ ವೇಳೆ ಕುಮಾರಸ್ವಾಮಿ ಮಾತನಾಡಿ ಸಂಸ್ಕೃತ ವಿಶ್ವವಿದ್ಯಾಲಯ ಇಲ್ಲಿಗೆ ಅವಶ್ಯಕತೆ ಇಲ್ಲದಿದ್ದತರ ಬೇರೆಡೆ ಮಾಡಲಿ , ಮಕ್ಕಳಿಗೆ ಅನುಕೂಲವಾಗುವ ಕಾಲೇಜು ಮಾಡಲಿ ಎಂದರು. 

Follow Us:
Download App:
  • android
  • ios