ಕೋಲಾರ(ಅ.01): ಸರ್ಕಾರಿ ಶಾಲೆಗಳೆಂದರೆ ನನಗೆ ಪಂಚ ಪ್ರಾಣ. ಶಾಲೆಗಳ ಅಭಿವೃದ್ಧಿಗೆ ಹಣವನ್ನು ತರುವ ಜವಾಬ್ದಾರಿ ನನ್ನದು, ಅಧಿಕಾರಿಗಳಾದ ನೀವು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕೆಂದು ಮಾಜಿ ಸ್ಪೀಕರ್‌ ಹಾಗು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ತಿಳಿಸಿದರು.

ಅಗತ್ಯ ಸೌಲಭ್ಯ ಕಲ್ಪಿಸಿ

ಶ್ರೀನಿವಾಸಪುರ ಪಟ್ಟಣದ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಮೊದಲು ಆ ಶಾಲೆಗೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಬೇಕು. ಆಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಮುಖ್ಯವಾಗಿ ಗ್ರಂಥಾಲಯ, ಶೌಚಾಲಯ, ಕ್ರೀಡಾಂಗಣ, ಅಗತ್ಯವಾಗಿ ಶಾಲಾ ಕೊಠಡಿಗಳು ಎಷ್ಟುಬೇಕು ಎಂಬುದು ಪಟ್ಟಿಮಾಡಿ ನನಗೆ ಕೊಡಿ ಸರ್ಕಾರದಿಂದ ಹಣವನ್ನು ಒದಗಿಸುವ ಕೆಲಸ ಮಾಡುತ್ತೇನೆಂದರು.

ದಂಡ ವಿಧಿಸಿದ ಪೊಲೀಸ್‌ ಮೇಲೆ ಹಲ್ಲೆ: ಠಾಣೆಯಲ್ಲಿ ಅಡಗಿದ ASI

ಈಗಿನ ಗುತ್ತಿಗೆದಾರರಿಗೆ ಜಾಗ ಸಿಕ್ಕಿದರೆ ಸಾಕು ಅವರಿಗೆ ಇಷ್ಟಬಂದಂತೆ ಕೊಠಡಿಗಳನ್ನು ನಿರ್ಮಿಸಿ ಹೋಗುತ್ತಾರೆ ಕೆಲವು ದಿವಸಗಳ ನಂತರ ಅದು ಸೋರುತ್ತದೆ. ಗುತ್ತಿಗೆದಾರರು ಪ್ರಮಾಣಿಕವಾಗಿ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ ಕಟ್ಟಡ ನಿರ್ಮಿಸಿದಾಗ ಅವರಿಗೂ ಒಳ್ಳೆಯ ಹೆಸರು ಬರುತ್ತದೆ ಆದರೆ ಆವಸರದ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸುತ್ತಾರೆ. ಗುತ್ತಿಗೆದಾರರು ಜವಾಬ್ದಾರಿತವಾಗಿ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಹಾಯಕ ನಿರ್ದೇಶಕರಿಗೆ ಎಚ್ಚರಿಕೆ

ರೇಷ್ಮೆ ಇಲಾಖೆ ಬಗ್ಗೆ ಸಾಕಷ್ಟುದೂರುಗಳು ಬರುತ್ತಿವೆ. ರೈತರು ಕಚೇರಿಗೆ ತಿರುಗಾಡದಂತೆ ಸೌಲಭ್ಯಗಳನ್ನು ಒದಗಿಸಿ ನಿಮಗೂ ಒಳ್ಳೆಯ ಹೆಸರು ಬರುತ್ತದೆ. ನಿಮ್ಮ ಬಗ್ಗೆ ಹಲವಾರು ದೂರುಗಳು ನನ್ನ ಗಮನಕ್ಕೆ ಬರುತ್ತಿವೆ ಜವಾಬ್ದಾರಿಯಿಂದ ಕೆಲಸ ಮಾಡಿ ಎಂದು ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್‌ಗೆ ಎಚ್ಚರಿಕೆ ನೀಡದರು.

ನಾನು ಮೆತ್ತಗೆ ಮಾತನಾಡಿದರೆ ಕೇಳುವುದಿಲ್ಲ ಏರು ಧ್ವನಿಯಲ್ಲಿ ಮಾತನಾಡಿದರೆ ರಮೇಶ್‌ ಕುಮಾರ್‌ ಹೀಗೆ ಮಾತನಾಡುತ್ತಾರೆಂದು ಅಧಿಕಾರಿಗಳು ಟೀಕಿಸುತ್ತಾರೆæ. ಸಾರ್ವಜನಿಕರು ಕಚೇರಿಗೆ ಅಲೆದಾಡಬಾರದು ಅವರ ಕೆಲಸಗಳು ಅಲ್ಲಿಯೇ ಆಗಬೇಕೆಂಬುದು ನನ್ನ ಉದ್ದೇಶ. ಕೆಲಸ ಮಾತ್ರ ಆಗುತ್ತಿಲ್ಲ ಎಂದು ಅಧಿಕಾರಿಗಳಿಗಳಿಗೆ ಚುಚ್ಚಿದರು. ಯಾವ ಹಳ್ಳಿಯಲ್ಲಿ ಯಾವ ಕೆಲಸ ಬೇಕೆಂದರೂ ಅಧಿಕಾರಿಗಳು ನಿಗಾ ವಹಿಸಿ ಪಟ್ಟಿಯನ್ನು ಸಿದ್ದಪಡಿಸಿ ನನಗೆ ಕೊಡಿ ದಸರಾ ಹಬ್ಬ ಮುಗಿದ ಮೇಲೆ ಹಂತ ಹಂತವಾಗಿ ನಾನೇ ಕಾಮಗಾರಿಗೆ ಚಾಲನೇ ನೀಡುತ್ತೇನೆಂದರು.

13ರಂದು ವಾತ್ಮೀಕಿ ಜಯಂತಿ

ಇದೇ ಸಮಯದಲ್ಲಿ 13 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು. ಇದೇ 13 ರಂದು ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ Pಚೇರಿಗಳಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಿ ಎಂದರು.

ಡಿಕೆಶಿ ಬಂಧನ ವಿರೋಧಿಸಿದಕ್ಕೆ ಕಾಂಗ್ರೆಸ್‌ ಶಾಸಕನ ಮೇಲೆ IT ದಾಳಿ: ಹೀಗೊಂದು ಗುಲ್ಲು

ತಾಪಂ ಅಧ್ಯಕ್ಷ ನರೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ್‌ ಅಶೋಕ್‌, ಜಿಪಂ ಮಾಜಿ ಅಧ್ಯಕ್ಷ ಶ್ರೀನಿವಾಸನ್‌, ಜಿಪಂ ಸದಸ್ಯ ಗೋವಿಂದಸ್ವಾಮಿ, ರಾಯಲ್ಪಾಡ್‌ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಸಂಜಯ್‌ರೆಡ್ಡಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಎಸ್‌.ಆನಂದ್‌, ಪುರಸಭೆ ಮುಖ್ಯಾಧಿಕಾರಿ ಮೋಹನ್‌ ಕುಮಾರ್‌, ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯಪಾಲಯ ಅಭಿಯಂತರರು ಎಲ್‌.ಕೆ. ಶ್ರೀನಿವಾಸಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.