ಜಾತ್ಯತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ: ಶಾಸಕ ಸಾ.ರಾ.ಮಹೇಶ್
ನನ್ನ ಹತ್ತೊಂಬತ್ತು ವರ್ಷಗಳ ಸೇವೆಯಲ್ಲಿ ಸರ್ಕಾರದ ಅನುದಾನ ಮತ್ತು ನನ್ನ ವೈಯಕ್ತಿಕ ಸಹಾಯದಿಂದ ತಾಲೂಕಿನಲ್ಲಿ ಪಕ್ಷಾತೀತ, ಜಾತ್ಯತೀತ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಸಾಲಿಗ್ರಾಮ (ನ.06): ನನ್ನ ಹತ್ತೊಂಬತ್ತು ವರ್ಷಗಳ ಸೇವೆಯಲ್ಲಿ ಸರ್ಕಾರದ ಅನುದಾನ ಮತ್ತು ನನ್ನ ವೈಯಕ್ತಿಕ ಸಹಾಯದಿಂದ ತಾಲೂಕಿನಲ್ಲಿ ಪಕ್ಷಾತೀತ, ಜಾತ್ಯತೀತ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ತಾಲೂಕಿನ ಲಕ್ಕಿಕುಪ್ಪೆ ಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀಮಾರಮ್ಮ ದೇವಸ್ಥಾನ ಉದ್ಘಾಟಿಸಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡೋಣ ಇತರೆ ದಿನಗಳಲ್ಲಿ ಎಲ್ಲರೂ ಸಾಮರಸ್ಯದ ಬದುಕು ಮಾಡೋಣ, ಯಾವುದೇ ಜಾತಿ ಭೇದ ಧರ್ಮಗಳಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವನೇ ರಾಜಕೀಯದಲ್ಲಿ ನಿರಂತರವಾಗಿ ಉಳಿಯುವುದು ಭರವಸೆ ಕೊಟ್ಟು ಕಣ್ಮರೆ ಆಗುವವರು ಸಾರ್ವಜನಿಕರ ಸೇವೆಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ನಿರಂತರವಾಗಿ ಯಾವುದಾದರೂ ಒಂದು ಗ್ರಾಮಗಳಲ್ಲಿ ನಿತ್ಯ ನಿಮ್ಮ ಕೈಗೆ ಸಿಗುತ್ತೇನೆ, ಕೆಲವರು ನಾಲ್ಕುವರೆ ವರ್ಷಗಳಿಂದ ಜನರಿಂದ ದೂರ ಇರುತ್ತಾರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸುತ್ತುತ್ತಾರೆ, ನಾನು ಶಾಸಕನಾಗಿ ಬರುವುದಕ್ಕಿಂತ ಮೊದಲು ಎಷ್ಟುಜನ ಶಾಸಕರು, ಸಚಿವರಾಗಿದ್ದರು ಅವರು ನಿಮ್ಮ ಗ್ರಾಮವನ್ನು ಎಷ್ಟುಅಭಿವೃದ್ಧಿ ಮಾಡಿದ್ದರು. ನಾನು ಏನು ಅಭಿವೃದ್ದಿ ಮಾಡಿದ್ದೇನೆ ಎಂದು ಒಮ್ಮೆ ಯೋಚಿಸಿ ಎಂದರು. 12 ಲಕ್ಷ ರು. ವೆಚ್ಚದಲ್ಲಿ ಗ್ರಾಮದೇವತೆ ಮಾರಮ್ಮ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಆದರೆ ದೇವಸ್ಥಾನದ ಮೇಲೆ ಗೋಪುರ ಮಾಡಿದರೆ ಮತ್ತಷ್ಟುಲಕ್ಷಣವಾಗಿ ಕಾಣುತ್ತದೆ. ಹಾಗಾಗಿ ಗ್ರಾಮದಿಂದ ಯಾರೂ ಕೂಡ ಹಣ ಹಾಕಬೇಡಿ. ನಾನು ವೈಯಕ್ತಿಕವಾಗಿ ಈ ದೇವಸ್ಥಾನದ ಗೋಪುರವನ್ನು ಮಾಡಿಸಿಕೊಡುತ್ತೇನೆ ಎಂದು ಅವರು ಭರವಸೆ ನೀಡಿದರು.
ರಂಗಾಯಣದಿಂದ ‘ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ನ.13ರಂದು ಬಿಡುಗಡೆ
ಗ್ರಾಮದ ಸಮಿತಿಯವರು ಅಪ್ಪು ಅವರ ಟೀ ಶರ್ಚ್ ಧರಿಸಿದ್ದೀರಿ, ಆದರೆ ಅದು ಮಾನವೀಯತೆ ಮತ್ತು ಸ್ವಾಭಿಮಾನದ ಸಂಕೇತ. ಅಪ್ಪು ಅವರ ಆದರ್ಶಗಳನ್ನು ಪ್ರತಿಯೊಬ್ಬ ಯುವಕರು ತಮ್ಮಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಸಾಮರಸ್ಯದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಉಳಿದಿದ್ದರೆ ನನಗೆ ತಿಳಿಸಿ ಅದನ್ನು ಶೀಘ್ರದಲ್ಲೇ ಮಾಡಿಸಿಕೊಡುತ್ತೇನೆ ಎಂದು ತಿಳಿಸಿದರು. ತಹಸೀಲ್ದಾರ್ ಮೋಹನ್‌ಕುಮಾರ್, ಸಿಪಿಐ ಶ್ರೀಕಾಂತ್, ಜೆಸಿಬಿ ಸತೀಶ್, ಹರದನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಿನಿ ರಮೇಶ್. ಸದಸ್ಯರಾದ ಲೋಕೇಶ್ ಗೋಪಾಲ್, ಮಹದೇವ್, ಪ್ರದೀಪ್, ಲೋಕೇಶ್ ಇದ್ದರು.
ದೇವಸ್ಥಾನ, ಸಮುದಾಯ ಭವನ ಹೆಚ್ಚು ನಿರ್ಮಾಣ: ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನಲ್ಲಿ ದೇವಸ್ಥಾನಗಳಿಗೆ ಹೆಚ್ಚು ಅನುದಾನ ನೀಡಿ ಹಲವಾರು ಗ್ರಾಮಗಳಲ್ಲಿ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಸಾಲಿಗ್ರಾಮ ತಾಲೂಕು ಲಕ್ಕಿ ಕುಪ್ಪೆ ಗ್ರಾಮದ ಶ್ರೀ ಲಕ್ಷ್ಮೇದೇವಿ ದಿಂಡಮ್ಮ ದೇವಸ್ಥಾನದ ಐದು ಲಕ್ಷದ ಅನುದಾನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಹಿರಿಮೆಗೆ ಕುಂದಾಗದಂತೆ ನೋಡಿಕೊಳ್ಳಬೇಕಿದೆ: ಸಚಿವ ಸೋಮಶೇಖರ್
ಲಕ್ಕಿಕುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಅನುದಾನ ನೀಡಿದ್ದು, ಪಿಡಿಒ ಅವರಿಗೆ ಗ್ರಾಮಸ್ಥರ ಸಲಹೆ ಪಡೆದು ಸೂಕ್ತ ನಿವೇಶನವನ್ನು ಗುರುತಿಸಿ ಕೊಡಬೇಕು ಎಂದರು. ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ಲಕ್ಷ್ಮೇ ದೇವಿ ದಿಂಡಮ್ಮ ದೇವಸ್ಥಾನದ ಕ್ಕೆ ಐದು ಲಕ್ಷ ಅನುದಾನ ನೀಡಿದ್ದು, ಇನ್ನೂ ಹೆಚ್ಚಿನ ಅನುದಾನ ನೀಡುತ್ತೇನೆ ಎಂದರು. ತಹಸೀಲ್ದಾರ್ ಮೋಹನ್ ಕುಮಾರ್, ಜಿಪಂ ಎಇ ವಿನೀತ್, ಸಹಾಯಕ ಎಂಜಿನಿಯರ್ ಸ್ವಾಮಿ, ಸಿಪಿಐ ಶ್ರೀಕಾಂತ್, ಜೆಸಿಬಿ ಸತೀಶ್, ಗ್ರಾಪಂ ಅಧ್ಯಕ್ಷೆ ನಂದಿನಿ ರಮೇಶ್, ಸದಸ್ಯರಾದ ಗೋಪಾಲ್ ಸತೀಶ್ ಲತಾ, ಮಹದೇವ, ರೇಣುಕಮ್ಮ ಇದ್ದರು.