ರೇವಣ್ಣ ನನಗೆ ಬಾಂಬೆ ತೋರಿಸೋ ಅಗತ್ಯ ಇಲ್ಲ ಎಂದ ಕೆಸಿಎನ್
ರೇವಣ್ಣ ಅವರು ನನಗೆ ಬಾಂಬೆ ತೋರಿಸೋ ಅಗತ್ಯ ಇಲ್ಲ. ಅವರಿಗೆ ಬಾಂಬೆ ತೋರಿಸಿದ್ದೇ ನಾನು ಎಂದು ಕೆ.ಆರ್. ಪೇಟೆ ಶಾಸಕ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಎಚ್. ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ(ಡಿ.15): ರೇವಣ್ಣ ಅವರು ನನಗೆ ಬಾಂಬೆ ತೋರಿಸೋ ಅಗತ್ಯ ಇಲ್ಲ. ಅವರಿಗೆ ಬಾಂಬೆ ತೋರಿಸಿದ್ದೇ ನಾನು ಎಂದು ಕೆ.ಆರ್. ಪೇಟೆ ಶಾಸಕ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ.
ಮಂಡ್ಯದ ಕೆ.ಆರ್. ಪೇಟೆಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ ಎಚ್. ಡಿ. ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಜೆಡಿಎಸ್ ಸಭೆಯಲ್ಲಿ ರೇವಣ್ಣ ಅವರು ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದಾರೆ.
ರೇವಣ್ಣ ಒಬ್ಬರೇ ಅಭಿವೃದ್ಧಿ ಮಾಡೋದು ಕಲಿತಿಲ್ಲ. ನಾವು ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ಅವರಿಗೆ ಅವರ ತಂದೆ ಒಂದು ಸ್ಥಾನ ಮಾನದಲ್ಲಿ ತಂದು ಕೂರಿಸಿದ್ರು. ನನಗೆ ಈ ತಾಲೂಕಿನ ಪುಣ್ಯಾತ್ಮರು ಸ್ಥಾನ ತುಂಬಿದ್ದಾರೆ. ನನಗೆ ಭಯ ಭಕ್ತಿ ಇದೆ. ಶೀಘ್ರದಲ್ಲೇ ಅಭಿವೃದ್ಧಿ ಮಾಡಿ ಅವರಿಗೆ ತೋರಿಸುತ್ತೇವೆ ಎಂದು ಹೇಳಿದ್ದಾರೆ.
ಅವರು ನಮ್ಮ ತಾಲೂಕಿಗೆ ಏನು ಅಭಿವೃದ್ಧಿ ಮಾಡಿದ್ದಾರೆ. ಅವರು ಹೇಳಲಿ ಇಂತಹದ್ದು ಮಾಡಿದ್ದೀನಿ ಎಂದು. ಮೂರು ತಿಂಗಳಲ್ಲಿ ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬರಲಿ. ಮೂರು ತಿಂಗಳಲ್ಲಿ ನಾನು ಅಭಿವೃದ್ಧಿ ಮಾಡಿರುವುದನ್ನು ತೋರಿಸುತ್ತೇನೆ ಎಂದು ರೇವಣ್ಣಗೆ ಶಾಸಕ ನಾರಾಯಣಗೌಡ ವಾರ್ನ್ ಮಾಡಿದ್ದಾರೆ.
ರೇವಣ್ಣ ಹಾಸನ ಜಿಲ್ಲೆ ನೋಡಿಕೊಳ್ಳಲಿ, ನಮ್ಮ ಜಿಲ್ಲೆಯನ್ನು ನೋಡುವ ಅವಶ್ಯಕತೆ ಇಲ್ಲ
ರೇವಣ್ಣ ಅವರು ಹಾಸನ ಜಿಲ್ಲೆಯನ್ನು ನೋಡಿಕೊಳ್ಳಲಿ. ನಮ್ಮ ತಾಲೂಕು ಮತ್ತೆ ನಮ್ಮ ಜಿಲ್ಲೆಯನ್ನು ನೋಡುವ ಅವಶ್ಯಕತೆ ಇಲ್ಲ. ನಮ್ಮ ತಾಲೂಕು ಶಾಂತಿ ಆಗಿ ಇತ್ತು, ಈಗ ಗೊಂದಲ ಮಾಡಿ ಹೋಗಿದ್ದಾರೆ. ರೇವಣ್ಣನಿಂದ ಪಾಠ ಕಲಿಯುವುದು ಮುಗಿಯಿತು. ನಾನು ಅವರ ಪಕ್ಷದಲ್ಲಿ ಇದ್ದಾಗ ಅವರು ನಮ್ಮ ಗುರುಗಳಾಗಿದ್ರು. ಈಗ ಅವರ ಮಾತು ಕೇಳುವ ಅವಶ್ಯಕತೆ ನಮಗಿಲ್ಲ. ಈಗ ನಮಗೆ ನಮ್ಮ ಹೈಕಮಾಂಡ್ ಇದೆ ಎಂದಿದ್ದಾರೆ.
ರೇವಣ್ಣ ಗೌರವವಾಗಿಯೇ ಇದ್ರೆ ಒಳ್ಳೆಯದು
ರೇವಣ್ಣ ಅವರು ಹಿರಿಯರು ಗೌರವ ಇದೆ. ರೇವಣ್ಣ ಗೌರವವಾಗಿಯೇ ಇದ್ರೆ ಒಳ್ಳೆಯದು. ಗೂಂಡಾಟ, ಒಡೆದಾಟ, ಮಚ್ಚು, ಕೊಡಲಿ ಅವುಗಳನ್ನಾ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ಅಕ್ಕ-ಪಕ್ಕದ ಜಿಲ್ಲೆಯನ್ನು ಶಾಂತಿಯಿಂದ ತೆಗೆದುಕೊಂಡು ಹೋಗಬೇಕು. ಮಕ್ಕಳನ್ನು ಹೊಡೆದಾಟಕ್ಕೆ ಮುಂದೆ ಬಿಡಬಾರದು. ನಾನು ರೇವಣ್ಣ ಅವರಿಗೆ ರಿಕ್ವೆಸ್ಟ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.