ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್‌ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಮಿಸಸ್‌ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್‌ ಗ್ಲಾಮರಸ್‌ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

ಹುಬ್ಬಳ್ಳಿ (ಸೆ.19): ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್‌ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಚೆನ್ನೈ ನಗರದಲ್ಲಿ ನಡೆದ ಮಿಸಸ್‌ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್‌ ಗ್ಲಾಮರಸ್‌ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿಸಸ್‌ ಇಂಡಿಯಾ ಪೇಜೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ದೀಪಾಲಿ ಫಡ್ನೀಸ್‌ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಂದಿನಿ ಎಂಬಿಎ ಪದವೀಧರೆ ಆಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಪ್ರತಿಷ್ಠಿತ ಎನ್‌ಜಿಒ ಕಂಪನಿಗಳ ರಾಯಭಾರಿ ಆಗಿಯೂ ಸಮಾಜ ಸೇವೆ ಗೈಯುತ್ತಿದ್ದಾರೆ. ಇವರ ಎಲ್ಲ ಕಾರ್ಯ ಕೆಲಸಗಳಿಗೆ ಇವರ ಪತಿ ಚಂದ್ರಶೇಖರಗೌಡ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಮಿಸಸ್‌ ಕರ್ನಾಟಕ-2019ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಿಯೇಟಿವ್‌ ಕ್ವೀನ್‌ ಆಗಿ ಹೊರಹೊಮ್ಮಿದ್ದರು. ಇವರಿಗೆ ಮೆಂಟರ್‌ ಆಗಿ ಪ್ರತಿಭಾ ಸಂಶಿಮಠ ಕಾರ್ಯ ನಿರ್ವಹಿಸಿದ್ದರು.