ಕರಾಳ ಕೊರೋನಾದಿಂದ ದೂರ ಇರಲು ನೀವೇನು ಮಾಡಬೇಕು..?

ಕರಾಳ ಕೊರೋನಾ ಮಹಾಮಾರಿ ಎಲ್ಲೆಡೆ  ಹೆಚ್ಚವಾಗುತ್ತಲೇ ಇದೆ. ದಿನದಿನವೂ ಸೋಂಕು - ಸಾವು ಏರುತ್ತಿದೆ. ಇದೇ ವೇಳೆ  ಕೊರೋನಾದಿಂದ ನಿಮ್ಮನ್ನ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು? ಇಲ್ಲಿದೆ ಸಲಹೆ

how To protect From Covid 19 Doctors Advice for People snr

ಮೈಸೂರು (ಮೇ.02):  ಕೊರೋನಾ ಸಂದರ್ಭದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆ ಮತ್ತು ಆಹಾರ ಸಮತೋಲನ ಅಗತ್ಯ ಎಂದು ಸಿಗ್ಮ ಆಸ್ಪತ್ರೆಯ ಡಾ.ಎನ್‌. ಸುಮನ್‌ಜೈನ್‌ ಮತ್ತು ಆಹಾರ ತಜ್ಞೆ ಬಿ. ಚೈತ್ರಾ ತಿಳಿಸಿದ್ದಾರೆ.

ಕಳೆದ ಕೆಲವು ದಶಕಗಳಲ್ಲಿ ನಿಯಮಿತ ದೈಹಿಕ ಚಟುವಟಿಕೆಗೆ ಸಂಬಂಧಿಸಿದಂತೆ ವ್ಯಾಪಕವಾದ ಆರೋಗ್ಯ ಪ್ರಯೋಜನವನ್ನು ವೈಜ್ಞಾನಿಕ ಪುರಾವೆಗಳು ದೃಢಪಡಿಸಿದೆ.

ನಿಯಮಿತ ದೈಹಿಕ ಚಟುವಟಿಕೆಯು ಮೇಲ್ಭಾಗದ ಶ್ವಾಸೇಂದ್ರೀಯ ದಾರಿಗಳಲ್ಲಿ ಸೋಂಕನ್ನು ಕಡಿಮೆ ಮಾಡುತ್ತದೆ. ವ್ಯಾಯಾಮದಿಂದ ರಕ್ತದ ಪ್ಲಾಸ್ಮಾ ಹೆಚ್ಚಾಗಿ ನ್ಯೂಟ್ರೊಫಿಲ್‌ ಕಣಗಳು ಏರಿಕೆ ಆಗುತ್ತದೆ. ಇಯೋಸಿನೊಫಿಲ್‌ ಕಣ ಕಮ್ಮಿ ಆಗುತ್ತದೆ. ಆದ್ದರಿಂದ ಶರೀರದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ವೈರಾಣುಗಳ ವಿರುದ್ಧ ಹೋರಾಡಿ ರಕ್ತದಲ್ಲಿ ವೈರಸ್‌ ನಿಯಂತ್ರಿಸುತ್ತದೆ.

'ಇಲ್ಲಿದೆ ಹೆಮ್ಮಾರಿಗೆ ಮದ್ದು ಅರೆಯುವ ಅಸ್ತ್ರ : ಕೊರೋನಾದಿಂದ ತಪ್ಪಿಸಿಕೊಳ್ಳಲು ಸುಲಭ ವಿಧಾನ' ..

ಅಂತೆಯೇ ಸಮತೋಲನ ಆಹಾರ ಪದ್ಧತಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದಂತಹ ಪೌಷ್ಟಿಕಾಂಶಗಳಾದ ಪೋ›ಟೀನ್‌, ಕಾರ್ಬೋಹೈಡ್ರೇಟ್‌, ವಿಟಮಿನ್‌ ಲವಣಾಂಶಗಳು, ಸತ್ವಗಳು ಒಳಗೊಂಡಿದ್ದು ಇವು ಕೊರೋನ ವೈರಾಣು ವಿರುದ್ಧ ಹೋರಾಡಲು ಉಪಯುಕ್ತವಾಗಿದೆ. ಆದ್ದರಿಂದ ಜನಸಾಮಾನ್ಯರು ಉತ್ತಮ ಆಹಾರ ಪದ್ಧತಿ ಮತ್ತು ಇದರ ಜೊತೆಗೆ ಕೊರೋನಾ ಲಸಿಕೆ ಪಡೆದು ಆರೋಗ್ಯಕರ ಜೀವನ ನಡೆಸುವಲ್ಲಿ ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios