ಮನೆ ಹಂಚಿಕೆ; ಕುಣಿಗಲ್‌ ಶಾಸಕರಿಂದ ತಾರತಮ್ಯ: ನಾಳೆ ಪ್ರತಿಭಟನೆ

  • ಮನೆ ಹಂಚಿಕೆಯಲ್ಲಿ ಶಾಸಕರಿಂದ ತಾರತಮ್ಯ
  • ಕಾಂಗ್ರೆಸ್‌ ಗ್ರಾಪಂಗೆ ಹೆಚ್ಚು ಮನೆಗಳ ಮಂಜೂರು: ಜಗದೀಶ್‌
  • ರಂನಗಾಥ್‌ರ ನಡೆ ಖಂಡಿಸಿ ಡಿಸಿಗೆ ದೂರು
House sharing; Discrimination by Kunigal MLA rav

ಕುಣಿಗಲ್‌ (ಸೆ.20) : ಶಾಸಕರು ಮನೆ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ, ನಿಯಮಗಳನ್ನು ಪಾಲಿಸದೆ ಪರಿಶಿಷ್ಟಜಾತಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ತಾರತಮ್ಯ ಮಾಡಿ ಕಾಂಗ್ರೆಸ್‌ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಮನೆ ಮಂಜೂರು ಮಾಡಿ, ಜೆಡಿಎಸ್‌ ಆಡಳಿತ ನಡೆಸುವ ಗ್ರಾಮ ಪಂಚಾಯಿತಿಗಳನ್ನು ಕಡೆಗಣಿಸಿದ್ದಾರೆ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಬಿ.ಎನ್‌ ಜಗದೀಶ್‌ ನಾಗರಾಜಯ್ಯ ಆರೋಪಿಸಿದರು.

ಬಂಗಾರಪೇಟೆ: 5 ವರ್ಷದಿಂದ ಕುಂಟುತ್ತಿರುವ ಗುಂಪು ಮನೆ ನಿರ್ಮಾಣ

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಶಾಸಕ ಡಾ. ರಂಗನಾಥ್‌ ತಾಲೂಕಿಗೆ ಅಂಬೇಡ್ಕರ್‌ ಹಾಗೂ ಬಸವ ವಸತಿ ಯೋಜನೆಯಲ್ಲಿ ಒಂದು ಸಾವಿರ ಮನೆಗಳು ಬಂದಿದ್ದು, ಈಗಾಗಲೇ 900 ಮನೆಗಳಿಗೆ ರಾಜೀವ್‌ ಗಾಂಧಿ ವಸತಿ ನಿಗಮವು ಅನುಮೋದನೆ ನೀಡಿದೆ. ಸರ್ಕಾರದ ನಿಯಮದಂತೆ ಪರಿಶಿಷ್ಟಜಾತಿ ಮತ್ತು ವರ್ಗ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗೆ ನೀಡಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಕಾಂಗ್ರೆಸ್‌ ಆಡಳಿತ ನಡೆಸುತ್ತಿರುವ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಮನೆಯನ್ನು ನೀಡಿ, ಜೆಡಿಎಸ್‌ ಹಾಗೂ ಬಿಜೆಪಿ ಆಡಳಿತ ನಡೆಸುವ ಗ್ರಾಮ ಪಂಚಾಯಿತಿಗಳನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.

ಖನಿಜ ಮತ್ತು ಭೂವಿಜ್ಞಾನ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಪಡಿಸುವಂತೆ ಡಿಎಂಎಫ್‌ ಇಲಾಖೆಯು ಎರಡು ಕೋಟಿ ಹಣ ಬಿಡುಗಡೆ ಮಾಡಿದ್ದು ಗಣಿಗಾರಿಕೆ ನಡೆಯುವ ಶಾಸಕರ ಒಡೆತನದ ನಿಡಸಾಲೆ ಗ್ರಾಮ ಸೇರಿದಂತೆ ಟಿ ಹೊಸಹಳ್ಳಿ, ಸಂತೆಮತೂರು, ಹಂದಲ್ಲ ಕುಪ್ಪೆ ಈ ಭಾಗದಲ್ಲಿ ಹೆಚ್ಚು ಗಣಿಗಾರಿಕೆ ನಡೆಯುತ್ತಿದ್ದು, ಆ ಭಾಗದ ಪರಿಸರ ಐದು ಹತ್ತು ಕಿಲೋ ಮೀಟರ್‌ ಅಂತರದಲ್ಲಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ಚರಂಡಿ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಹಣವನ್ನು ಶಾಸಕರು ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಮನಸ್ಸು ಇಚ್ಛೆ ನೀಡುತ್ತಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಖನಿಜ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದ್ದು, ಬಿಜೆಪಿ ಸ್ಥಳೀಯ ನಾಯಕರಿಗೆ ಸರಿದಾರಿಗೆ ತರುವ ಧ್ವನಿ ಎತ್ತದೇ ಮುಂದಿನ ಶಾಸಕರ ಚುನಾವಣೆಗೆ ಟಿಕೆಟ್‌ಗಾಗಿ ಪೈಪೋಟಿ ಆರಂಭಿಸಲು ಹೋರಾಟ ನಡೆಸುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿ ಕಾಂಗ್ರೆಸ್‌ ಶಾಸಕರಿಂದ ಕುಂಠಿತಗೊಂಡು ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳಲು ವಿಫಲಗೊಂಡಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಯಡಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್‌, ಕೆ. ಹೊನ್ನಮಾಚಮಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್‌, ಸಂತೆಮಾವುತರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಾಸೇಗೌಡ, ಹೇರೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಲಲಿತಮ್ಮ, ಪುರಸಭಾ ಮಾಜಿ ಸದಸ್ಯ ಜಗದೀಶ್‌, ಭಕ್ತರಹಳ್ಳಿ ಮೊಮ್ಮದ್‌ ಗೌಸ್‌, ಮಹೇಶ್‌, ಮಾಜಿ ಗ್ರಾಪಂ ಅಧ್ಯಕ್ಷ ಮಂಜುನಾಥ್‌, ತರೀಕೆರೆ ಪ್ರಕಾಶ್‌ ಉಪಸ್ಥಿತರಿದ್ದರು.

MANN KI BAAT; ಕೋಲಾರದ ಬೃಹತ್ ತ್ರಿವರ್ಣ ಧ್ವಜ ಬಗ್ಗೆ ಮೋದಿ ಶ್ಲಾಘನೆ

ಕಾಂಗ್ರೆಸ್‌ ಆಡಳಿತ ನಡೆಸುವ ಡಿ.ಹೊಸಹಳ್ಳಿ, ಕೊತ್ತಗೆರೆ, ಹುಲಿಯೂರುದುರ್ಗ, ಪಂಚಾಯಿತಿಗಳಿಗೆ ಶಾಸಕರು ಹೆಚ್ಚಿನ ಮನೆಯಲ್ಲಿ ನೀಡಿ ಜೆಡಿಎಸ್‌ ಹಾಗೂ ಬಿಜೆಪಿ ಅಧಿಕಾರ ನಡೆಸುವ ಪಂಚಾಯಿತಿಗಳನ್ನು ಕಡೆಗಣಿಸಿದ್ದಾರೆ, ಈಗಾಗಲೇ ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ನ್ಯಾಯ ಪಾಲಿಸದೆ ಇರುವುದರಿಂದ ಬರುವ ಬುಧವಾರದಂದು ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಲಾಗುವುದು.

ಬಿ.ಎನ್‌.ಜಗದೀಶ್‌ ನಾಗರಾಜಯ್ಯ ತಾಲೂಕು ಅಧ್ಯಕ್ಷ, ಜೆಡಿಎಸ್‌

Latest Videos
Follow Us:
Download App:
  • android
  • ios