ಬೆಳಗಾವಿ(ಆ.15): ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಲು ಬಂದಿದ್ದ ಮಹಿಳೆಯ ಸಂಬಂಧಿಯಿಂದ 2 ಲಕ್ಷ ರು. ಚೆಕ್‌ ಮುಂಗಡವಾಗಿ ಪಡೆದುಕೊಂಡಿದ್ದು, ಮಾತ್ರವಲ್ಲ. ಆ ಮಹಿಳೆ ಅಸುನೀಗಿದ ನಂತರ ಆ ಖಾಸಗಿ ಆಸ್ಪತ್ರೆ ಸಿಬ್ಬಂದಿ ಮೃತಪಟ್ಟಮಹಿಳೆ ಮೈಮೇಲಿದ್ದ ಚಿನ್ನವನ್ನೂ ಬಿಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. 

ನಂತರ ಚಿನ್ನಾಭರಣವನ್ನು ಪೊಲೀಸರ ಮಧ್ಯಸ್ಥಿಕೆಯಿಂದ ಮೃತ ಮಹಿಳೆಯ ವಾರಸುದಾರರಿಗೆ ಆಸ್ಪತ್ರೆ ಸಿಬ್ಬಂದಿ ಒಪ್ಪಿಸಿರುವ ಘಟನೆ ಬೆಳಗಾವಿ ನಗರದ ಮಾಧ್ವ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

ವೈದ್ಯರು ಕೊರೋನಾ ಚಿಕಿತ್ಸೆಗೆ ನಿರಾಕರಿಸಿದರೆ ಈ ನಂಬರ್‌ಗೆ ಕರೆ ಮಾಡಿ ಹೇಳಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ 68 ವರ್ಷದ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕುಟುಂಬಸ್ಥರು ತಕ್ಷಣ ಆ್ಯಂಬುಲೆನ್ಸ್‌ ಮೂಲಕ ಗುರುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಮುಂಗಡ ಹಣ ಪಾವತಿಸದ ಹೊರತು ದಾಖಲು ಮಾಡಿಕೊಳ್ಳಲ್ಲ ಅಂದಿದ್ದಾರೆ. ಆಗ, 2 ಲಕ್ಷ ರು. ಮೌಲ್ಯದ ಚೆಕ್‌ ನೀಡಲಾಗಿದೆ.

ಕೊರೋನಾ ಅಟ್ಟಹಾಸ: ಸಾಯುವ ಮುನ್ನ ಪತ್ರಕರ್ತ ಕಣ್ಣೀರು, ವಿಡಿಯೋ ವೈರಲ್‌ ..

 ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಈ ವೇಳೆ ಒಟ್ಟು 20 ಗ್ರಾಂ ಬಂಗಾರದ ಆಭರಣಗಳನ್ನು ರೋಗಿಯ ಮನೆಯವರಿಗೆ ತಿಳಿಯದಂತೆ ಆಸ್ಪತ್ರೆಯ ಸಿಬ್ಬಂದಿ ತೆಗೆದುಕೊಂಡಿದ್ದಾರೆ. ನಂತರ ಖಡೇಬಜಾರ ಪೊಲೀಸ್‌ ಮಧ್ಯಸ್ಥಿಕೆಯಲ್ಲಿ ಬಂಗಾರವನ್ನು ಮರಳಿಸಿ, 2 ಲಕ್ಷ ರು. ಮೌಲ್ಯದ ಚೆಕ್‌ ಹಿಂತಿರುಗಿಸಿದ್ದಾರೆ.