ಹೊಸಕೋಟೆ(ಡಿ.05): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಹೊಸಕೋಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಮತ ಚಲಾಯಿಸುವಂತಿಲ್ಲ. ಯಾಕೆ ಅಂತೀರಾ..? ಈ ಇಬ್ಬರು ಅಭ್ಯರ್ಥಿಗಳ ಮತ ಬೇರೆ ಕ್ಷೇತ್ರದಲ್ಲಿದೆ.

ಬೈ ಎಲೆಕ್ಷನ್ ಮತದಾನ ಹಿನ್ನೆಲೆ ಎಲ್ಲಡೆ ಅಭ್ಯರ್ಥಿಗಳು ತಮ್ಮ ಹಕ್ಕು ಚಲಾಯಿಸಿದ್ದು, ಹೊಸಕೋಟೆ ಅಖಾಡದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಪರ ಮತ ಚಲಾಯಸಿಕೊಳ್ಳುವ ಅವಕಾಶವಿಲ್ಲ. ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಅವರಿಗೆ ಹೊಸಕೋಟೆಯಲ್ಲಿ ಮತ ಚಲಾಯಿಸುವಂತಿಲ್ಲ.

ಮತದಾರರಿಗೆ ಮಂಡಕ್ಕಿ, ಬಾಳೆ ಹಣ್ಣು ಹಂಚಿದ 'ಕೈ' ಅಭ್ಯರ್ಥಿ ಮಂಗಸೂಳಿ

ಗರುಡಾಚಾರ್ ಪಾಳ್ಯದಲ್ಲಿ ಎಂಟಿಬಿ ನಾಗರಾಜ್ ಅವರು ಮತಚಲಾಯಿಸಬೇಕಿದ್ದು, ಕೆ. ಆರ್. ಪುರಂನಲ್ಲಿ ಪದ್ಮಾವತಿ ಮತವಿದೆ. ಬೇರೆ ಕ್ಷೇತ್ರದಲ್ಲಿ ಮತವಿರೋ ಕಾರಣ ಹೊಸಕೋಟೆ ಕ್ಷೇತ್ರದಲ್ಲಿಲ್ಲ ಮತದಾನಕ್ಕೆ ಅವಕಾಶವಿಲ್ಲ.

ಸರಸದ ನಡುವೆ ಕಲಹ: ಬೆತ್ತಲೆ ಇದ್ದವನನ್ನು ಬಡಿದು ಕೊಂದಳು..!

ಪಕ್ಷೇತರ ಅಭ್ಯರ್ಥಿಗೆ ಮಾತ್ರ ತಮ್ಮ ಕ್ಷೇತ್ರದಲ್ಲಿ ತಮ್ಮ ಪರ ಮತ ಚಲಾಯಿಸಿಕೊಳ್ಳಲು ಅವಕಾಶವಿದೆ. ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮತದಾನ ಮಾಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

ಮತಗಟ್ಟೆಯ ಮುಂದೆಯೇ ಹಣ ಹಂಚಿಕೆ..! ಕಣ್ಮುಚ್ಚಿ ಕುಳಿತ ಪೊಲೀಸರು