ಅಥಣಿ(ಡಿ.05): ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರು ಮತದಾರರಿಗೆ ಮಂಡಕ್ಕಿ ಹಾಗೂ ಬಾಳೆ ಹಣ್ಣು ವ್ಯವಸ್ಥೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. 

ಇಂದು(ಗುರುವಾರ) ಅಥಣಿ ಉಪಚುನಾವಣೆಗೆ ಮತದಾನ ನಡೆಯುತ್ತಿದೆ. ಈ ವೇಳೆ ಮತದಾರರನ್ನು ಸೆಳೆಯಲು ಗಜಾನನ ಮಂಗಸೂಳಿ ಮತಕ್ಷೇತ್ರದ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಡಕ್ಕಿ ಹಾಗೂ ಬಾಳೆ ಹಣ್ಣು ವ್ಯವಸ್ಥೆಯನ್ನು ಮಾಡಿದ್ದಾರೆ. 

ಪೋಲಿಸರು ಹಾಗೂ ಚುನಾವಣಾ ಅಧಿಕಾರಿಗಳ ಮುಂದೆಯೇ ಮಂಡಕ್ಕಿ ವ್ಯವಸ್ಥೆ ಮಾಡಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಥಣಿ ಕ್ಷೇತ್ರದ ಉಪಚುಣಾವನೆಯಲ್ಲಿ ಬಿಜೆಪಿಯಿಂದ ಮಹೇಶ್ ಕುಮಟಳ್ಳಿ ಹಾಗೂ ಕಾಂಗ್ರೆಸ್ ನಿಂದ ಗಜಾನನ ಮಂಗಸೂಳಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ಹೀಗಾಗಿ ಮತದಾರರನ್ನು ಸೆಳೆಯಲು ಗಜಾನನ ಮಂಗಸೂಳಿ ಅವರಿ ಮಂಡಕ್ಕಿ ಹಾಗೂ ಬಾಳೆ ಹಣ್ಣು ವಿತರಣೆ ಮಾಡಿದ್ದಾರೆ. 

ಇಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.