ಚಿಕ್ಕಬಳ್ಳಾಪುರ (ಆ.17):  ಮ್ಯಾಟ್ರಿಮೊನಿ ಆ್ಯಡ್‌ ಮೂಲಕ ಹಣವಂತ ಯುವಕರನ್ನು ಬಲೆಗೆ ಬೀಳಿಸಿ ಮದುವೆಯಾಗುವುದಾಗಿ ನಂಬಿಸಿ ತನ್ನ ಸಹಚರನ ಜೊತೆ ಸೇರಿ ಹನಿಟ್ರ್ಯಾಪ್‌ ನಡೆಸುತ್ತಿದ್ದ ಜಿಲ್ಲೆಯ ವಿವಾಹಿತ ಮಹಿಳೆಯೊಬ್ಬಳು ಸೇರಿದಂತೆ ಆಕೆಯ ಸಹಚರನನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿಯ ಮಹಿಳೆ (32) ಹಾಗೂ ಆಕೆಯ ಸಹಚರ ಕೋಲಾರ ನಗರ ನಿವಾಸಿ ಶಿವ ಬಿನ್‌ ಅಮರನಾರಾಯಣಸ್ವಾಮಿ (32) ಎಂದು ಗುರುತಿಸಲಾಗಿದೆ.

ಫೇಸ್‌ಬುಕ್‌ ಮೇಲೆ ಹದ್ದಿನ ಕಣ್ಣು: ಇಂತಹ ಪೋಸ್ಟ್ ಹಾಕಿದ್ರೆ ಹುಷಾರ್..!..

ಮಹಿಳೆ ಹಾಗೂ ಶಿವ ಇವರ ಬಲೆಗೆ ಬಿದ್ದು ವಂಚನೆಗೆ ಒಳಗಾದ ಹಾಸನ ಮೂಲದ ಪರಮೇಶ್‌ ಎಂಬಾತ ಇವರಿಬ್ಬರ ಹನಿಟ್ರ್ಯಾಪ್‌ ಬಗ್ಗೆ ಹಾಸನ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಮಹಿಳೆ ಹಾಗೂ ಆಕೆಯ ಸಹಚರ ಶಿವ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರ ತನಿಖೆ ನಡೆಸಿದಾಗ ಹನಿಟ್ರ್ಯಾಪ್‌ ದಂದೆ ಬಯಲಾಗಿದೆ. ಮಹಿಳೆ ತನಗೆ ಹಣ ಕೊಡದ ಯುವಕರಿಗೆ ಬಂಧಿತ ಆರೋಪಿ ಶಿವ ಮೂಲಕ ಬೆದರಿಕೆ ಹಾಕಿಸುತ್ತಿದ್ದಳು ಎನ್ನಲಾಗಿದೆ.

ಸಂಸ್ಥೆ ಸಿಬ್ಬಂದಿಯಿಂದಲೇ ಎಟಿಎಂ ಕೇಂದ್ರದಿಂದ ಹಣ ಲೂಟಿ...

ಆರೋಪಿ ಶಿವ ತಾನೊಬ್ಬ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಹಾಗೂ ಮಾನವ ಹಕ್ಕುಗಳ ಸಂಘಟನೆ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಮಹಿಳೆ ವ್ಯವಹಾರದಲ್ಲಿ ಭಾಗಿಯಾಗುತ್ತಿದ್ದ ಯುವಕರಿಗೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ದೂರುದಾರ ಪರಮೇಶ್‌ನಿಂದ 10 ಸಾವಿರ ರು, ಕಸಿದುಕೊಂಡು ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ರೋಸಿ ಹೋದ ಪರಮೇಶ್‌ ಹಾಸನ ಪೊಲೀಸರಿಗೆ ದೂರು ನೀಡಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರಿಂದ 10 ಸಾವಿರ ರೂ, ನಗದು ಹಾಗೂ ಇನೋವಾ ಕಾರನ್ನು ಹಾಸನ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.