ನೆಲಮಂಗಲ [ಡಿ.02]:  ನೆಲಮಂಗಲ ಟಿಬಿ ಬಸ್‌ ನಿಲ್ದಾಣದ ಸಮೀಪವಿರುವ ಎಸ್‌ಬಿಐನ ಎಟಿಎಂನಲ್ಲಿ ಸೋಮವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಸ್ಟೇಟ್‌ಮೆಂಟ್‌ ಪಡೆಯಲು ಮೂವರು ಮಿತ್ರರು ತೆರಳಿದ್ದಾರೆ. 

ಮಿತ್ರಯ ತೆರಳಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಎಟಿಎಂನಿಂದ 100, 200 ರು. ಮುಖಬೆಲೆಯ ಸುಮಾರು 4900 ರು. ಹೊರ ಬಂದಿದೆ.

ಗಡಿ ವಿವಾದ: ಬೆಳಗಾವಿಯಲ್ಲಿ ನಾಡದ್ರೋಹಿಗಳಿಗೆ ಪೊಲೀಸರ ರಕ್ಷಣೆ...  

ಇದನ್ನು ನೋಡಿದ ಯುವಕರು, ಹಣವನ್ನು ಸಂಗ್ರಹಿಸಿಕೊಂಡು ಮನೆಗೆ ತೆರಳಿದ್ದಾರೆ. ಬ್ಯಾಂಕ್‌ ಸಮಯ ಮುಗಿದಿದ್ದದ್ದೇ ಇದಕ್ಕೆ ಕಾರಣವಾಗಿತ್ತು. ಮಂಗಳವಾರ ಬೆಳಗ್ಗೆ ಸ್ನೇಹಿತರಾದ ಉಮಾ ಮಹೇಶ್‌, ಉಮೇಶ್‌, ಪ್ರದೀಪ್‌ ಬ್ಯಾಂಕ್‌ಗೆ ಹಣವನ್ನು ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ಯಾಂಕಿನ ಸಿಬ್ಬಂದಿ ಯುವಕರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆಲಮಂಗಲ ಪಟ್ಟಣದ ಎಸ್‌ ಬಿ ಐ ಬ್ಯಾಂಕ್‌ ಎಟಿಎಂ ನಲ್ಲಿ ದೊರಕಿದ್ದ ಹಣವನ್ನು ವಾಪಸ್‌ ನೀಡಿದ್ದ ಗ್ರಾಹಕರು.