ಬೆಳಗಾವಿ(ಜ.02): ನಾಡದ್ರೋಹಿ ಮಹಾರಾಷ್ಟ್ರದ ಕೊಲ್ಲಾಪುರ ಜಿ.ಪಂ. ಸದಸ್ಯರಿಗೆ ಬೆಳಗಾವಿ ಪೊಲೀಸರು ರಕ್ಷಣೆ ನೀಡಿದ್ದಾರೆ. ಹೌದು, ಕೊಲ್ಲಾಪುರ ಜಿ‌.ಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆಯಲ್ಲಿ NCP, ಶಿವಸೇನಾ,‌ ಕಾಂಗ್ರೆಸ್ ಜಿ.ಪಂ ಸದಸ್ಯರು ಬುಧವಾರದಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. 

"

ಬುಧವಾರ ರಾತ್ರಿ ಇಂದು ಬೆಳಗ್ಗೆ ಬೆಳಗಾವಿ ಎಂಇಎಸ್, ಶಿವಸೇನೆ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಗಡಿ ವಿವಾದ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ ಬೆಳಗಾವಿ ಆಗಮನ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಚರ್ಚೆಯ ಬಳಿಕ ನಂತರ ಜಿ.ಪಂ ಸದಸ್ಯರು ಮತ್ತು ಮುಖಂಡರು ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಎಸ್‌ಆರ್‌ಟಿಸಿ ಐರಾವತ್ ಬಸ್‌ನಲ್ಲಿ .ಪಂ ಸದಸ್ಯರು ಮತ್ತು ಮುಖಂಡರು ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ನಾಡದ್ರೋಹಿಗಳ ಪ್ರಯಾಣ ಬೆಳೆಸಿದ್ದಾರೆ. 

ಮಹಾರಾಷ್ಟ್ರ ಸಚಿವ ಹಸನ್ ಮುಶ್ರೀಫ್ ಆಗಮನಕ್ಕೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಕಿಡಿಕಾರಿದ್ದರು. ಹೀಗಾಗಿ ಹಸನ್ ಮುಶ್ರೀಫ್ ರಾತ್ರೋರಾತ್ರಿ ಬೆಳಗಾವಿಯಿಂದ ಕಾಲ್ಕಿತ್ತಿದ್ದಾರೆ.  ಹಸನ್ ಮುಶ್ರೀಫ್‌ಗೆ ಚಂದಗಡ ಶಾಸಕ ರಾಜೇಶ್ ಪಾಟೀಲ್ ಸಾಥ್ ನೀಡಿದ್ದರು.