ಮಂಡ್ಯ(ನ.26): ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು ಎಲ್ಲ ಕಡೆ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಕಾರ್ ಡ್ರೈವರ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಗೃಹ ಮಂತ್ರಿ 'ಕಾರುಬಾರು' ಪ್ರಕರಣ ನಡೆದಿದ್ದು, ಗೃಹ ಸಚಿವರ ಕಾರು ಚಾಲಕನ ವಿರುದ್ಧ FIR ದಾಖಲಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದ್ದು, ಗೃಹಸಚಿವರ ಕಾರು ಚಾಲಕ ಚೆಕ್ ಪೋಸ್ಟ್ ಬಳಿ ಕಾರು ತಪಾಸಣೆಗೆ ಒಳಪಡಿಸದೆ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ನ.20ರಂದು ನಿಡಘಟ್ಟ ಚೆಕ್ ಪೋಸ್ಟ್ ಬಳಿ ನಡೆದಿದ್ದ ಘಟನೆ‌ ನಡೆದಿದೆ.

'ಕಣ್ಣೀರ್ ಹಾಕೋ ಸಿಎಂ ಬೇಕಾ, ಕಷ್ಟ ಸುಖ ಕೇಳೋ ಸಿಎಂ ಬೇಕಾ..'?

ಬೆಂಗಳೂರು ಮೈಸೂರು ಹೆದ್ದಾರಿಯ ನಿಡಘಟ್ಟ ಚೆಕ್ ಪೋಸ್ಟ್ ಬಳಿ ಈ ಘಟನೆ ಸಂಭವಿಸಿದ್ದು, ತಪಾಸಣೆ ವೇಳೆ ಕಾರು ನಿಲ್ಲಿಸಲು ಸೂಚಿಸಿದ್ದರು. ಆದರೆ ಗೃಹ ಸಚಿವರ ಚಾಲಕ ಕಾರು ನಿಲ್ಲಿಸದೆ ಹೋಗಿದ್ದ. ಆ ದಿನ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಸತೀಶ್ ಎಂಬವರು ಈ ಬಗ್ಗೆ ಗೃಹ ಸಚಿವರ KA 03 G518 ನಂಬರಿನ ಕಾರು ಚಾಲಕನ ವಿರುದ್ದ ದೂರು ದಾಖಲಿಸಿದ್ದಾರೆ.

ತಪಾಸಣೆಗೆ ಸಹಕರಿಸದೆ ಹೋಗಿದ್ದ ಚಾಲಕನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಲಾಗಿದ್ದು, ಅಧಿಕಾರಿ ದೂರಿನ ಮೇರೆಗೆ ಮದ್ದೂರು ಪೊಲೀಸರು ಕೊನೆಗೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಷ ಕಷ್ಟದಲ್ಲಿದೆ, ದಯಮಾಡಿ ಜೆಡಿಎಸ್ ಉಳಿಸಿಕೊಡಿ ಎಂದ ನಿಖಿಲ್ ಕುಮಾರಸ್ವಾಮಿ