ಮಂಡ್ಯ(ನ.26): ನಿಮ್ಮ ಕಷ್ಟ ಸುಖ ಕೇಳೋ ಸಿಎಂ ಬೇಕಾ,ಕಣ್ಣೀರು ‌ಹಾಕೊ ಸಿಎಂ ಬೇಕಾ ನೀವೇ ನಿರ್ಧಿರಿಸಿ ಎಂದು ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಹೇಳಿದ್ದಾರೆ.

ಮಂಡ್ಯದ ಮುರುಕನ‌ಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಮನೆ ಬಳಿಗೆ ಕಾರ್ಯಕರ್ತರು ಹೋದರೆ ಕರೆದು ಮೊದಲು ತಿಂಡಿ ಕೊಟ್ಟು ಕಷ್ಟ ಸುಖ ಕೇಳ್ತಾರೆ. ಅಂಥವರು ಬೇಕಾ ಕಣ್ಣೀರು ಹಾಕೋರು ಬೇಕಾ ಎಂದು ಹೇಳೊ ಮೂಲಕ ಎಚ್‌ಡಿಕೆಗೆ ನಾರಾಯಣಗೌಡ ಟಾಂಗ ಕೊಟ್ಟಿದ್ದಾರೆ.

ಪಕ್ಷ ಕಷ್ಟದಲ್ಲಿದೆ, ದಯಮಾಡಿ ಜೆಡಿಎಸ್ ಉಳಿಸಿಕೊಡಿ ಎಂದ ನಿಖಿಲ್ ಕುಮಾರಸ್ವಾಮಿ

ಹಾಸನವನ್ನು ಹೋಗಿ ನೋಡಿ, ನಮ್ಮ ಭಾಗವನ್ನೂ ನೋಡಿ ಹೇಗೆ ಅಭಿವೃದ್ದಿಯಾಗಿದೆ ಗೊತ್ತಾಗುತ್ತೆ. ಹೇಳೋಕೆ ಮಾತ್ರ ಕೆ.ಆರ್. ಪೇಟೆ ನನಗೆ ಎರಡನೇ ಕಣ್ಣು ಅಂತಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಧೋರಣೆಯನ್ನು ಅನುಸರಿಸುತ್ತಾರೆ. ನಾವು ನೀವೆಲ್ಲ ಮರುಗುವುದೇ ಆಯಿತು ಎಂದು ಹೇಳಿದ್ದಾರೆ.

ಶಾಸಕ ಪ್ರೀತಮ್ ಗೌಡ ಹಾಸನದಲ್ಲಿ ಗಾರ್ಮೆಂಟ್ ಫ್ಯಾಕ್ಟರಿ ಮಾಡಿದರೆ ಕಿರುಕುಳ ಕೊಡ್ತಾರೆ ಅಂತ ಇಲ್ಲಿಗೆ ತಂದು ಮಾಡಿದ್ದಾರೆ. ಅಲ್ಲಿ ಈಗಾಗಲೇ 2 ಸಾವಿರ ಜನರಿಗೆ ಕೆಲಸ ಸಿಕ್ಕಿದೆ. ಫುಡ್ ಪಾರ್ಕ್ ನಿರ್ಮಾಣವಾಗುತ್ತಿದ್ದು ಅಲ್ಲೂ ಸಾವಿರಾರು ಜನರಿಗೆ ಕೆಲಸ‌‌ ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ.

ಕೆ. ಆರ್‌. ಪೇಟೆಯಲ್ಲಿ ಸಿಎಂ ಮತಬೇಟೆ, JDS ಪರ ನಿಖಿಲ್ ಪ್ರಚಾರ