ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿ, ನೆರೆದವರಲ್ಲಿ ಗೃಹ ಸಚಿವರ ಬಗ್ಗೆ ಅಭಿಮಾನದ ಮೆಚ್ಚುಗೆ ಉಂಟಾಯಿತು. 

ವರದಿ: ರಾಜೇಶ್ ಕಾಮತ್‌, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ(ಜ.04):  ಕಾರ್ಕಳದಲ್ಲಿ ಪರೀಕ್ಷೆ ಬರೆಯಲು ಹೊರಟಿದ್ದ ವಿದ್ಯಾರ್ಥಿ ಹಾಗೂ ಕುಟುಂಬದ ಸದಸ್ಯರಿದ್ದ ಕಾರು ರಸ್ತೆ ಅಪಘಾತದಲ್ಲಿ ಗುಂಡಿಗೆ ಬಿದ್ದಿತ್ತು. ರಸ್ತೆಯ ನಿರ್ಜನ ರಸ್ತೆಯಲ್ಲಿ ಕಾರು ರಸ್ತೆಯಿಂದ ಪಕ್ಕದಲ್ಲಿದ್ದ ಭಾರಿ ಗಾತ್ರದ ಗುಂಡಿಯಲ್ಲಿ ಇಳಿದಿತ್ತು. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ದಾರಿಹೋಕರು ಅಯ್ಯೋ ಪಾಪ ಎಂದು ಮುಂದೆ ಸಾಗುತ್ತಿದ್ದರು.

ಹೀಗಾಗಿ ಯುವಕರ ವಿದ್ಯಾರ್ಥಿಯ ಕುಟುಂಬ ಕಂಗಾಲಾಗಿ ಮುಂದೇನು ಎಂದು ಚಿಂತೆಗೀಡಾಗಿ ರಸ್ತೆಯ ಮೇಲೆ ನಿಂತಿತ್ತು. ವಿದ್ಯಾರ್ಥಿಯೂ ಕೂಡ ತಾನು ಪರೀಕ್ಷೆ ಬರೆಯುವುದು ಮರೆತು ಬಿಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಆಗ ರಸ್ತೆಯ ಮೇಲೆ ಆಪತ್ ಬಾಂಧವರಂತೆ ಪ್ರತ್ಯಕ್ಷರಾದವರೇ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು. ತೀರ್ಥಹಳ್ಳಿಯಿಂದ ಶಿವಮೊಗ್ಗದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಗುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ರಸ್ತೆ ಬದಿಯಲ್ಲಿ ಗುಂಡಿಗೆ ಬಿದ್ದಿದ್ದ ಕಾರು ಮತ್ತು ಆ ಕುಟುಂಬದ ಸದಸ್ಯರು ಕಂಡಿದ್ದರು. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಏನಾಯಿತು ಎಂದು ಆ ಕುಟುಂಬದವರನ್ನು ವಿಚಾರಿಸಿದ್ದಾರೆ. ಕಾರು ಚಲಾವಣೆ ಮಾಡುವಾಗ ನಿಯಂತ್ರಣ ತಪ್ಪಿ ನೇರವಾಗಿ ಗುಂಡಿಗಿಳಿತು ಎಂದು ತಮ್ಮ ಸಮಸ್ಯೆಯನ್ನು ವಿವರಿಸಿದ್ದರು. 

SHOURYA SANCHALAN: ಜ.8ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಬಜ​ರಂಗ​ದ​ಳ​ದಿಂದ ‘ಶೌರ್ಯ ಸಂಚಲನ’!

ಶಿವಮೊಗ್ಗದಿಂದ ಕಾರ್ಕಳಕ್ಕೆ ಹೋಗುವಾಗ ನಡೆದ ಅಪಘಾತ 

ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರು. ಕೊನೆಗೆ ಗೃಹ ಸಚಿವರು ತಮ್ಮ ಬೆಂಗಾಲು ಪಡೆಯ ಪೊಲೀಸರು ಹಾಗೂ ತಮ್ಮ ಜೊತೆಗಿದ್ದವರ ನೆರವಿನೊಂದಿಗೆ ಅಪಘಾತಕ್ಕೊಳಗಾಗಿದ್ದ ಕಾರಿನ ಪ್ರಯಾಣಿಕರನ್ನು ಸಂತೈಸಿ ಕಾರನ್ನು ಎಲ್ಲರ ಸಹಾಯದಿಂದ ಮೇಲೆತ್ತಿಸಿದರು. ಅಲ್ಲದೆ ಕಾರಿನಲ್ಲಿದ್ದ ಕುಟುಂಬದ ವಿದ್ಯಾರ್ಥಿ ಪರೀಕ್ಷೆ ಬರೆಯಲು ಕಾರ್ಕಳ ತೆರಳಲು ಅವಕಾಶ ಮಾಡಲಾಯಿತು. ಕಾರು ಅಪಘಾತಕ್ಕೆ ಒಳಗಾದ ಹಿನ್ನೆಲೆ ಪರೀಕ್ಷೆ ಬರೆಯುವುದು ಹೇಗೆ ಎಂದು ಚಿಂತೆಗೀಡಾಗಿದ್ದ ವಿದ್ಯಾರ್ಥಿ. ಯಾವಾಗ ಗೃಹ ಸಚಿವರ ವಾಹನ ಚಾಲಕರು, ಪೈಲೆಟ್ ವಾಹನದವರು ಮತ್ತು ಪ್ರಯಾಣಿಕರಿಂದ ಕಾರು ಮೇಲೆತ್ತಿ ಚಾಲನೆಗೆ ಸಿದ್ಧವಾಯಿತೋ.. ಇದರಿಂದ ಸಂತಸ ಗೊಂಡ ಕುಟುಂಬ ಗೃಹ ಸಚಿವರಿಗೆ ಕೈ ಮುಗಿದು ಧನ್ಯವಾದ ಅರ್ಪಿಸಿದರು. ಇನ್ನು ವಿದ್ಯಾರ್ಥಿ ಕೂಡ ಗೃಹ ಸಚಿವರ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದ್ದು ನೆರೆದವರಲ್ಲಿ ಗೃಹ ಸಚಿವರ ಬಗ್ಗೆ ಅಭಿಮಾನದ ಮೆಚ್ಚುಗೆ ಉಂಟಾಯಿತು.