Asianet Suvarna News Asianet Suvarna News

Shourya sanchalan: ಜ.8ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಬಜ​ರಂಗ​ದ​ಳ​ದಿಂದ ‘ಶೌರ್ಯ ಸಂಚಲನ’!

  • 8ರಂದು ಬಜ​ರಂಗ​ದ​ಳ​ದಿಂದ ‘ಶೌರ್ಯ ಸಂಚಲನ’
  • ಹಿಂದೂ ಸಮಾಜ ಸಂಘಟನೆ ದೃಷ್ಟಿಯಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆಯೋ​ಜನೆ
  • ಪ್ರತಿ ವರ್ಷ ಗೀತಾ ಜಯಂತಿಯಂದು ನಡೆಸಲು ನಿರ್ಧಾರ
For the first time in the state, 'Shaurya Sanchanalan' from Bajrang Dal at shivamogga rav
Author
First Published Jan 4, 2023, 8:39 AM IST

ವಿಶೇಷ ವರದಿ

 ಶಿವಮೊಗ್ಗ (ಜ.4) : ಹಿಂದುತ್ವದ ಪ್ರಯೋಗ ಶಾಲೆಯಾಗಿ ಗುರುತಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಜನವರಿ 8ರಂದು ‘ಶೌರ್ಯ ಸಂಚಲನ’ ನಡೆಯಲಿದೆ. ಸಂಘ ಪರಿವಾರದ ಅಂಗ ಸಂಸ್ಥೆಯಾದ ಬಜರಂಗದಳದ ನೇತೃತ್ವದಲ್ಲಿ ಈ ಸಂಚಲನ ನಡೆಯಲಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಸಂಚಲನ ನಡೆಸಲು ಉದ್ದೇಶಿಸಿದ್ದು, ಶಿವಮೊಗ್ಗದಲ್ಲಿಯೇ ಮೊದಲಿಗೆ ಸಂಚಲನ ನಡೆಯುವುದು ವಿಶೇಷ. ಈ ಸಂಚಲನ ಯಶಸ್ವಿಯಾಗಿ ನಡೆಸಲು ಈಗಾಗಲೇ ಎಲ್ಲ ಸಿದ್ಧತೆಗಳು ಆರಂಭಗೊಂಡಿದೆ.

ಕಳೆದ ವಾರವಷ್ಟೇ ಹಿಂದೂ ಜಾಗರಣ ವೇದಿಕೆ(Hindu jagarana vedike)ಯ ದಕ್ಷಿಣ ಪ್ರಾಂತದ ತ್ರೈ ವಾರ್ಷಿಕ ಸಮ್ಮೇಳನ ಹಾಗೂ ಶೋಭಾಯಾತ್ರೆ ಹಾಗೂ ಆರ್‌ಎಸ್‌ಎಸ್‌(RSS) ವರಿಷ್ಠ ಮೋಹನ್‌ ಭಾಗವತ್‌(Mohan Bhagwat) ಅವರ ಭೇಟಿಗೆ ಸಾಕ್ಷಿ ಆಗಿರುವ ಶಿವಮೊಗ್ಗ ಇದೀಗ ಮತ್ತೊಂದು ಸಂಚಲನವನ್ನು ಎದುರು ನೋಡುತ್ತಿದೆ.

ಹೊಸವರ್ಷದಂದು ಪಾಶ್ಚಾತ್ಯ ನೃತ್ಯ ಆಚರಣೆಗೆ ಭಜರಂಗದಳ ವಿರೋಧ

ಏನಿದು ಶೌರ್ಯ ಸಂಚಲನ?:

ಪ್ರಸ್ತುತ ಸಂದರ್ಭದಲ್ಲಿ ಹಿಂದೂ ಸಮಾಜದ ಮುಂದಿರುವ ಸವಾಲು ಎದುರಿಸುವ ನಿಟ್ಟಿನಲ್ಲಿ ಹಿಂದೂಗಳನ್ನು ಸಜ್ಜುಗೊಳಿಸಲು ಸಂಘ ಪರಿವಾರ ತೀರ್ಮಾನಿಸಿದೆ. ಅದಕ್ಕಾಗಿ ತನ್ನ ಅಂಗ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಹಿಂದೂ ಸಮಾಜವನ್ನು ಜಾಗೃತಗೊಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆ- ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಕೂಡ ಇದೆ. ಈ ಹಿನ್ನೆಲೆಯಲ್ಲಿ ಬಜರಂಗದಳದ ವತಿಯಿಂದ ಶೌರ್ಯ ಸಂಚಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಇದರ ಮೊದಲ ಕಾರ್ಯಕ್ರಮ ಜನವರಿ 8ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಈ ಸಂಚಲನದಲ್ಲಿ ಗಣವೇಶ ಧರಿಸಿದ 1 ಸಾವಿರಕ್ಕೂ ಹೆಚ್ಚು ಬಜರಂಗದಳದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪ್ರತಿ ವರ್ಷ ಗೀತಾ ಜಯಂತಿಯಂದು ಶೌರ್ಯ ಸಂಚಲನ ನಡೆಸಲು ನಿರ್ಧರಿಸಲಾಗಿದೆ. ಆದರೆ ಈ ಬಾರಿ ಗೀತಾ ಜಯಂತಿ ಮುಗಿದುಹೋಗಿದ್ದು, ಜ.8ರಂದು ನಡೆಯಲಿದೆ. ಮುಂದಿನ ದಿನಗಳಲ್ಲಿ ಮಾತ್ರ ಗೀತಾ ಜಯಂತಿಯಂದೇ ನಡೆಯಲಿದೆ.

ರಾಜ್ಯದ ಮೊದಲ ಶೌರ್ಯ ಸಂಚಲನ(Shourya sanchalana) ಇದಾಗಿರುವ ಕಾರಣ ಕಾರ್ಯಕ್ರಮ ಯಶಸ್ವಿಗೊಳಿಸಲು ಸಿದ್ಧತೆ ನಡೆದಿದೆ. ಅಂದು ಫ್ರೀಡಂ ಪಾರ್ಕ್ನಿಂದ ಬೆಳಗ್ಗೆ 10 ಗಂಟೆಗೆ ಹೊರಡುವ ಬಜರಂಗದಳದ ಕಾರ್ಯಕರ್ತರ ಶೌರ್ಯ ಸಂಚಲನ ಜೈಲು ರಸ್ತೆ, ದುರ್ಗಿಗುಡಿ, ನೆಹರು ರಸ್ತೆ, ಸಾವರ್ಕರ್‌ ವೃತ್ತ, ಗಾಂಧಿ ಬಜಾಸ್‌ ಮೂಲಕ ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿ ಕೊನೆಗೊಳ್ಳಲಿದೆ.

ಚಿಕ್ಕಮಗಳೂರು: ದತ್ತಜಯಂತಿ ಉತ್ಸವಕ್ಕೆ ಇಂದು ಚಾಲನೆ; ಬಿಗಿ ಪೊಲೀಸ್ ಬಂದೋಬಸ್ತ್

ಅನಂತರ ಮಧ್ಯಾಹ್ನ 1.30ಕ್ಕೆ ಕೋಟೆ ರಸ್ತೆಯ ವಾಸವಿ ಪಬ್ಲಿಕ್‌ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಜರಂಗದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್‌ ಹಾಗೂ ರಾಜ್ಯ ಸಂಘಟಕ ಸುನೀಲ್‌ ಕುಮಾರ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಶಿವಮೊಗ್ಗ ಕಾರ್ಯಕ್ರಮದ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಬೇರೆ ಬೇರೆ ದಿನಾಂಕದಂದು ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವರ್ಷದಿಂದ ಗೀತಾ ಜಯಂತಿಯಂದು ದೇಶಾದ್ಯಂತ ಶೌರ್ಯ ಸಂಚಲನ ಹಮ್ಮಿಕೊಳ್ಳಲು ಪರಿವಾರದ ಮುಖಂಡರು ನಿರ್ಧರಿಸಿದ್ದಾರೆ.

Follow Us:
Download App:
  • android
  • ios