Asianet Suvarna News Asianet Suvarna News

Dharwad; ಲಂಚದಿಂದ ಮುಕ್ತವಾಗಲು ಹೋಮ ಮಾಡಿಸಿದ್ರಾ ಆರೋಗ್ಯ ಅಧಿಕಾರಿಗಳು?

ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಹೋಮ ಹವನ ಮಾಡಿದ್ದಾರೆ. ಡಿಎಚ್ ಓ ಕಚೇರಿಯಲ್ಲಿ ಯಾರ  ಅನುಮತಿನ್ನು ‌ಪಡೆಯದೆ  ತಮಗೆ ಬೇಕಾದ ರೀತಿಯಲ್ಲಿ ಡಿಎಚ್ ಓ ಹೋಮ ಮಾಡಿಸಿ ಮೂಡ ನಂಬಿಕೆಗೆ ಬಲಿಯಾಗಿದ್ದಾರೆ.

Homa Havan at Dharwad District Health  office gow
Author
First Published Sep 10, 2022, 4:45 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್  ಸುವರ್ಣ ನ್ಯೂಸ್

ಧಾರವಾಡ (ಸೆ.10) : ಸಾಮಾನ್ಯವಾಗಿ ಸರಕಾರಿ ಕಚೇರಿಗಳಲ್ಲಿ ಹೋಮ ಹವನ ಮಾಡಬಾರದು, ಆದರೆ ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಹೋಮ ಹವನ ಮಾಡಿದ್ದಾರೆ. ಡಿಎಚ್ ಓ ಕಚೇರಿಯಲ್ಲಿ ಯಾರ  ಅನುಮತಿನ್ನು ಕೂಡ ‌ಪಡೆಯದೆ  ತಮಗೆ ಬೇಕಾದ ರೀತಿಯಲ್ಲಿ ಡಿಎಚ್ ಓ ಹೋಮ ಮಾಡಿಸಿದ್ದಾರೆ. ಸರಕಾರಿ ಕಚೇರಿಗಳನ್ನ ಹೊಸದಾಗಿ ನಿರ್ಮಾಣ ಮಾಡಿದಾಗ ಹೋಮ ಹವನ ಮಾಡೋದನ್ನ ನಾವು ನೀವೆಲ್ಲ ಕೇಳಿದ್ದೇವೆ ನೋಡಿದ್ದೇವೆ, ಆದರೆ ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿ ಕರಿಗೌಡರ್ ಅವರು ತಮ್ಮ ಕಚೇರಿಯಲ್ಲಿ ಹೋಮ ಹವನ  ಮಾಡಿದ್ದಾರೆ . ಆದರೆ ಸರಕಾರಿ ಹಳೆಯ ಕಟ್ಟಡದಲ್ಲಿ ಹೋಮ ಮಾಡುವುದಕ್ಕೂ ಒಂದು ಮುಖ್ಯವಾದ ಕಾರಣವಿದೆಯಂತೆ, ಇತರ ಕೆಳಗಿನ ಅಧಿಕಾರಿಗಳು ಈ ಬಗ್ಗೆ ಮಾತನಾಡಿಕ್ಕೊಳ್ಳುತ್ತಿದ್ದಾರೆ.  ಧಾರವಾಡ ಡಿಎಚ್‌ಒ ಬಸನಗೌಡ ಕರಿಗೌಡರ, ಅವರ ಮೆಲೆ ಈ ಹಿಂದೆ ಲಂಚದ ಆರೋಪ ಕೇಳಿಬಂದಿತ್ತು. ಅಧಿಕಾರವನ್ನ ವಹಿಸಿಕ್ಕೊಂಡ ಬಳಿಕ ಆದರೆ ಈ ಕುರಿತು ಆರೋಗ್ಯ ಇಲಾಖೆಗೆ ಇವರ ಮೆಲೆ ಅಕ್ರಮದ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪತ್ರವೊಂದನ್ನ ಬರೆದಿದ್ದರು. ಹೀಗಾಗಿ ತಮ್ಮ ಮೇಲೆ ಬಂದ ಲಂಚದ ಆರೋಪದಿಂದ ಮುಕ್ತರಾಗಲು ಹೋಮ ಹವನದ ಮೊರೆ ಹೋಗಿದ್ದಾರೆಂಬ ಮಾತು ಕೇಳಿ ಬರುತ್ತಿದೆ.

 ಇನ್ನು ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮಂಜುನಾಥ, ಡಿ ಎಚ್ ಓ ಬಸನಗೌಡ ಕರಿಗೌಡರ್ ಸೇರಿದಂತೆ ಅಧಿಕಾರಿಗಳು ಸೇರಿ ಹೋಮ ಮಾಡಿಸಿದ್ದು ಸದ್ಯ ಡಿ ಎಚ್ ಓ ಕಚೇರಿ ಮತ್ತು ತಮ್ಮನ್ನು ಕಾಪಾಡು ಭಗವಂತ ಎಂದು ಹೋಮ ಮಾಡಿಸಿದ್ದಾರೆ. ಇನ್ನು ಈ ಕುರಿತು ಆರೋಗ್ಯ ಇಲಾಖೆಯಲ್ಲಿ ನಿನ್ನೆಯಿಂದ ಬಹಳ ಚರ್ಚೆಯಾಗುತ್ತಿದ್ದು. ಡಿಎಚ್ ಓ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಡಿ ಆರೋಗ್ಯ ಇಲಾಖೆಗೆ ಮಾದರಿಯಾಗಬೇಕಿದ್ದ ಡಿ ಎಚ್ ಓ ಅವರು ಈ ರೀತಿ ಮಾಡಿರೋದನ್ನ ನೋಡಿದ್ರೆ ಇನ್ನು ಕೆಳಮಟ್ಟದ ಅಧಿಕಾರಿಗಳು ಯಾವ ರೀತಿ ಆಸ್ಪತ್ರೆಗಳನ್ನ ನಡೆಸಿಕ್ಕೊಂಡು ಹೋಗುತ್ತಾರೆ ಎಂಬುದನ್ನ ಆ ದೇವರೇ ಕಾಪಾಡಬೇಕು.

ಉಡುಪಿ ಜಿಲ್ಲಾಸ್ಪತ್ರೆಗೆ ಹೈಕೋರ್ಟ್ ಜಡ್ಜ್ ದಿಢೀರ್ ಭೇಟಿ; ಇನ್ನು ಕುಡಿಯಲ್ಲವೆಂದು 

ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ಸುದರ್ಶನ ಹೋಮ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಧಾರವಾಡ ಡಿಎಚ್‌ಒ ಬಸನಗೌಡ ಕರಿಗೌಡರ "ಇದು ಅತ್ಮಶಾಂತಿ ಪ್ರಾಪ್ತಿ ಮುಕ್ತವಾಗಲು ನಡೆಸಿದ ಹೋಮ, ಕಳೆದ ಒಂದೂವರೆ ವರ್ಷದ ಹಿಂದೆ ವ್ಯಕ್ತಿಯೊಬ್ಬ  ಸುಸೈಡ್ ಮಾಡಿಕ್ಕೊಂಡಿರುವ ಹಿನ್ನೆಲೆ,  ಕಚೇರಿಯನ್ನು  ರಿನಿವೇಶನ್ ಮಾಡಲಾಗಿತ್ತು. ಅದಕ್ಕೆ ಹೋಮ ಮಾಡಿ ಶಾಂತಿ ಮಾಡಿಸಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ.

ಹವನದ ಭಸ್ಮ ಬಳಸಿ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಿವಾರಿಸಿ 

ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಕಚೇರಿಯಲ್ಲಿ 4 ಘಂಟೆಗಳ ಕಾಲ  ಹೋಮ ನಡೆದಿತ್ತು. ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಮಂಜುನಾಥ, ಡಿ ಎಚ್ ಓ ಬಸನಗೌಡ ಕರಿಗೌಡರ ನೇತೃತ್ವದಲ್ಲಿ ಈ  ಸುದರ್ಶನ ಹೋಮ ನಡೆದಿತ್ತು. ಈ ಮೂಲಕ ಸರ್ಕಾರಿ ಕಚೇರಿಯಲ್ಲಿ ಹೋಮ ನಡೆಸುವ ಮೂಲಕ ಶಿಷ್ಟಾಚಾರ ಮುರಿಯಲಾಗಿದೆ. ಇದು ಈಗ ವಿವಾದಕ್ಕೂ ಕಾರವಾಗಿದೆ,

Follow Us:
Download App:
  • android
  • ios