ಮಾಜಿ ಸಿಎಂ ಹಗುರವಾಗಿ ಮಾತನಾಡಬಾರದು: ಸಿದ್ದರಾಮಯ್ಯರಿಗೆ ಬಿಜೆಪಿ ಶಾಸಕ ಕಿವಿಮಾತು

  • ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ನೀವು ಹಗುರವಾಗಿ ಮಾತನಾಡಬೇಡಿ. ನಿಮ್ಮಲ್ಲಿ ಮಾಹಿತಿ ಕೊರತೆ ಇದ್ದರೆ ಬೇರೆಯವರಿಂದ ಮಾಹಿತಿ ಪಡೆದುಕೊಳ್ಳಿ
  • ಹಿಟ್‌ ಆ್ಯಂಡ್‌ ರನ್‌ ರೀತಿಯ ವರ್ತನೆ ನಿಮಗೆ ಶೋಭೆ ತರುವುದಿಲ್ಲ - ಹರ್ಷವರ್ಧನ್
Hit and Run Like attitude Not Good for your Dignity MLA Harshvardhan slams Siddaramaiah snr

ನಂಜನಗೂಡು (ನ.12):  ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ (Former CM) ನೀವು ಹಗುರವಾಗಿ ಮಾತನಾಡಬೇಡಿ. ನಿಮ್ಮಲ್ಲಿ ಮಾಹಿತಿ ಕೊರತೆ ಇದ್ದರೆ ಬೇರೆಯವರಿಂದ ಮಾಹಿತಿ ಪಡೆದುಕೊಳ್ಳಿ. ಅದನ್ನು ಬಿಟ್ಟು ಹಿಟ್‌ ಆ್ಯಂಡ್‌ ರನ್‌ (Hit and Run) ರೀತಿಯ ವರ್ತನೆ ನಿಮಗೆ ಶೋಭೆ ತರುವುದಿಲ್ಲ ಎಂದು ನಂಜನಗೂಡು (Nanjanagudu) ಶಾಸಕ ಬಿ. ಹರ್ಷವರ್ಧನ್‌ (MLA Harshavardhan) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  (Siddaramaiah) ಅವರಿಗೆ ತಿರುಗೇಟು ನೀಡಿದ್ದಾರೆ.

ನಂಜನಗೂಡು ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೆಲ್ಲ ನಾನು ಮುಖ್ಯಮಂತ್ರಿಯಾಗಿದ್ದಾಗ (CM) ಕೊಟ್ಟಿರುವ ದುಡ್ಡಿನದ್ದು ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಹರ್ಷವರ್ಧನ್‌  ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಾರ್ಗದರ್ಶಕರಾಗಿ:  ನಿಮ್ಮ ಸರ್ಕಾರ ಇದ್ದಾಗ ಕೊಟ್ಟಅನುದಾನವನ್ನು ಈಗಲೂ ಬಳಸಲು ಸಾಧ್ಯವಿದೆಯೇ? ಶಾಸಕರಾಗಿರುವ ನಿಮ್ಮ ಮಗನೂ ನೀವು ಕೊಟ್ಟಅನುದಾನದ ಕೆಲಸವನ್ನೇ ಈಗಲೂ ಮಾಡಿಸುತ್ತಿದ್ದಾರಾ? ನಮ್ಮಂತ ಯುವ, ಉತ್ಸಾಹಿ ಶಾಸಕರಿಗೆ (MlA) ಮಾರ್ಗದರ್ಶನ ಮಾಡುವ ಬದಲು ಇಂತಹ ತೀರಾ ಕೀಳು ಮಟ್ಟದ ಹೇಳಿಕೆಗಳಿಂದ ನಿಮ್ಮ ಗೌರವಕ್ಕೂ ದಕ್ಕೆ ತಂದುಕೊಳ್ಳಬೇಡಿ, ಜನರನ್ನೂ ದಾರಿ ತಪ್ಪಿಸಬೇಡಿ. ಹೊಸದಾಗಿ ಆಯ್ಕೆಯಾಗಿರುವ ಶಾಸಕರೆಲ್ಲ ದುಡ್ಡು ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ನೀವು ಮಾತನಾಡಿದ್ದೀರಿ. ಈ ಮಾತು ನಿಮ್ಮ ಮಗನಿಗೂ ಅನ್ವಯಿಸುತ್ತಾ ಎಂದು ಪ್ರಶ್ನಿಸಿರುವ ಅವರು, ನಾವು ಯುವ ಶಾಸಕರು, ಸಮಾಜ ಸೇವೆಯ ಉದ್ದೇಶದಿಂದ ರಾಜಕೀಯಕ್ಕೆ ಬಂದವರು. ನಮ್ಮನ್ನು ಪೋತ್ಸಾಹಿಸಿ ಒಳ್ಳೆಯ ಮಾತುಗಳನ್ನಾಡಿ ಕೆಲಸಕ್ಕೆ ಮಾರ್ಗದರ್ಶನ ನೀಡಿ. ಅದನ್ನು ಬಿಟ್ಟು ಆಧಾರ ರಹಿತ ಹೇಳಿಕೆಗಳನ್ನು ಕೊಡಬೇಡಿ ಎಂದು ಸಿದ್ದರಾಮಯ್ಯ ಅವರಿಗೆ ಹರ್ಷವರ್ಧನ್‌ ಮನವಿ ಮಾಡಿದ್ದಾರೆ.

ಶ್ವೇತ ಪತ್ರ ತಂದೇ ಜನರ ಮುಂದೆ ಹೋಗುತ್ತೇನೆ:  ನಾನು ಮುಂದಿನ ಚುನಾವಣೆಗೆ (election) ಹೋಗುವ 6 ತಿಂಗಳ ಮೊದಲು, ನನ್ನ ಅವಧಿಯಲ್ಲಿ ಎಷ್ಟು ಹಣ ತಂದಿದ್ದೇನೆ? ಯಾವ ಇಲಾಖೆಯಿಂದ ತಂದಿದ್ದೇನೆ? ಎಲ್ಲಿ ಖರ್ಚು ಮಾಡಿದ್ದೇನೆ ಎನ್ನುವ ಎಲ್ಲವುಗಳ ಕುರಿತು ಶ್ವೇತ ಪತ್ರ ತಂದೇ ಜನರ ಮುಂದೆ ಹೋಗುತ್ತೇನೆ. ಸುಮ್ಮನೇ ಮತ ಕೇಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ (HD kumaraswamy) ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಹಾಗೂ ಬೇರೆ ಬೇರೆ ಮಂತ್ರಿಗಳನ್ನು ಭೇಟಿಯಾಗಿ ನಾನು 120 ಕೋಟಿ ರು. ಗಳಿಗಿಂತ ಹೆಚ್ಚು ಅನುದಾನ ತಂದಿದ್ದೇನೆ. ನುಗು ಯೋಜನೆಗೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಬಜೆಟ್‌ನಲ್ಲಿ (Budget) ಮಂಜೂರಾತಿ ನೀಡಿದ್ದರು. ನಂತರ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರು ಮುಖ್ಯಮಂತ್ರಿಗಳಾಗಿದ್ದಾಗ ಹಣ ಬಿಡುಗಡೆ ಮಾಡಿದ್ದಾರೆ. ಇದಲ್ಲದೆ ಯಡಿಯೂರಪ್ಪನವರು ಕ್ಷೇತ್ರದ ಇನ್ನೂ ಹಲವಾರು ಯೋಜನೆಗಳಿಗೆ ಅನುದಾನ ಒದಗಿಸಿದ್ದಾರೆ. ವಿಶೇಷವಾಗಿ, ಒಳಚರಂಡಿಯಂತಹ ಮೂಲಭೂತ ಸಮಸ್ಯೆಗಳಿಗೆ ಒತ್ತು ನೀಡಿ ನಾನು ಕೆಲಸ ಮಾಡಿಸುತ್ತಿದ್ದೇನೆ. ಕ್ಷೇತ್ರದಲ್ಲಿ ಜ್ವಲಂತವಾಗಿದ್ದ ಈ ಸಮಸ್ಯೆಗಳು ಬಹುತೇಕ ಪರಿಹಾರವಾಗಿವೆ. ಇದರಿಂದಾಗಿಯೇ ನಂಜನಗೂಡು ಕ್ಷೇತ್ರ ಇಂದು ಮಾದರಿಯಾಗಿ ಅಭಿವೃದ್ಧಿಗೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಕುಮಾರಸ್ವಾಮಿಯವರ ಸರ್ಕಾರ ಮಂಜೂರಾತಿ ನೀಡಿದೆ. ಇದ್ಯಾವುದೂ ಉಪಚುನಾವಣೆ ವೇಳೆ ಬಂದಿರುವುದಲ್ಲ. ಇದಕ್ಕೆ ಎಲ್ಲ ಅಂಕಿ ಅಂಶಗಳು ನನ್ನ ಬಳಿ ಇವೆ. ನಿಮ್ಮ ಸರ್ಕಾರದ ಯಾವ ಕೆಲಸವನ್ನೂ ಉಳಿಸಿಕೊಂಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  ನಂಜನಗೂಡು ಕಲೆಕ್ಷನ್‌ ಸೆಂಟರ್‌ ಎಂದು ಹೇಳಿದ್ದೀರಿ. ನಿಮ್ಮ ಸರ್ಕಾರವಿರುವಾಗ ಮೈಸೂರಿನಲ್ಲಿ ಎಲ್ಲಿ ಕಲೆಕ್ಷನ್‌ ಸೆಂಟರ್‌ ಮಾಡಿಕೊಂಡಿದ್ರಿ ಎನ್ನುವುದು ನಮಗೆ ಗೊತ್ತಿರುವ ಸಂಗತಿ ಎಂದು ಅವರು ಚಾಟಿ ಬೀಸಿದ್ದಾರೆ.

123 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮಿನಿ ವಿಧಾನಸೌಧ, ಹೈಟೆಕ್‌ ಬಸ್‌ ನಿಲ್ದಾಣ, ಪ್ರಥಮ ದರ್ಜೆ ಕಾಲೇಜು (College) ಇವೆಲ್ಲ 2008ರಲ್ಲೇ ಮಂಜೂರಾಗಿತ್ತು. ಇದಕ್ಕೆ ಸಂಸದ ವಿ. ಶ್ರೀನಿವಾಸ ಪ್ರಸಾದ್‌ (Shrinivas Prasad) ಅವರು ನಿಮ್ಮ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡಿಸಿದರು. ಈ ವಿಷಯವಾಗಿ ಬಹಿರಂಗವಾಗಿ ನಿಮ್ಮ ಜೊತೆಗೆ ಚರ್ಚೆಗೆ ನಾನು ಸಿದ್ದನಿದ್ದೇನೆ. ಇವೆಲ್ಲವುಗಳ ಕ್ರೆಡಿಟ್‌ (credit) ಶ್ರೀನಿವಾಸ ಪ್ರಸಾದ ಅವರಿಗೆ ಸಲ್ಲುತ್ತದೆ. ಹಾಗಾಗಿ ನೀವು ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ.

ನಂಜನಗೂಡಿನ ಜನರು ಬುದ್ದಿವಂತರಿದ್ದಾರೆ. ಎಲ್ಲವನ್ನೂ ಗಮನಿಸುತ್ತಾರೆ. ನೀವು ಸಾಕಷ್ಟು ತಿಳಿದಿರುವವರು, ತಿಳಿದುಕೊಂಡೇ ಸಾರ್ವಜನಿಕರ ಮುಂದೆ ಬರುವವರು. ಆದರೆ ಈ ವಿಷಯದಲ್ಲಿ ಯಾಕೆ ಈ ರೀತಿ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿದ್ದೀರಿ ಅರ್ಥವಾಗುತ್ತಿಲ್ಲ. ಯಾರಾದರೂ ತಮ್ಮ ದಾರಿ ತಪ್ಪಿಸಿದ್ದಾರೋ ಗೊತ್ತಾಗುತ್ತಿಲ್ಲ. ಈ ವಿಷಯದಲ್ಲಿ ಸರಿಯಾದ ಮಾಹಿತಿ ಸಂಗ್ರಹಿಸಿ ಹೇಳಿಕೆಗಳನ್ನು ನೀಡುವುದು ಒಳಿತು. ನಾನು ಮೀಸಲು ಕ್ಷೇತ್ರದಿಂದ ಬಂದಿದ್ದೇನೆ ಎನ್ನುವ ಕಾರಣಕ್ಕೆ ನೀವು ನನ್ನನ್ನು ಈ ರೀತಿ ಟಾರ್ಗೆಟ್‌ ಮಾಡುತ್ತಿರುವುದು ಎಷ್ಟುಸರಿ? ಎಂದು ಅವರು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios