'ಬಿಜೆಪಿ ಬಗ್ಗೆ ದಲಿತರು ಎಚ್ಚರದಿಂದಿರಿ'
* ಮಾಜಿ ಸಿಎಂ ಸಿದ್ದರಾಮಯ್ಯ ದಲಿತ ಪದವನ್ನೇ ಬಳಸಿಲ್ಲ, ಸುಳ್ಳು ಪ್ರಚಾರ
* ಸಿದ್ದರಾಮಯ್ಯ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಪ್ರಯತ್ನ
* ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮಗಳಲ್ಲಿನ 581 ಕೋಟಿ ಸಾಲ ಮನ್ನಾ ಮಾಡಿದ್ದ ಸಿದ್ದರಾಮಯ್ಯ
ಬಾದಾಮಿ(ನ.08): ವಿಜಯಪುರ(Vijayapura) ಜಿಲ್ಲೆ ಸಿಂದಗಿ(Sindagi) ಉಪಚುನಾವಣೆಯಲ್ಲಿ ಮಾದಿಗ ದಂಡೋರ ಸಮಾವೇಶದಲ್ಲಿ ಸಿದ್ದರಾಮಯ್ಯ(Siddaramaiah) ಅವರು ವಿರೋಧ ಪಕ್ಷದ ನಾಯಕರು ದಲಿತರ ಉದ್ದೇಶಿಸಿ ಭಾಷಣ ಮಾಡುವಾಗ ಅವರು ದಲಿತರು ಅನ್ನುವ ಪದವನ್ನೇ ಬಳಸಿಲ್ಲ. ದಲಿತ ಕೆಲ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಏಳಿಗೆ ಸಹಿಸದೆ ಬಿಜೆಪಿಯ ಮನುವಾದಿಗಳು ಅವರ ಹೇಳಿಕೆಯನ್ನು ತಿರುಚಿ ಸಿದ್ದರಾಮಯ್ಯ ಅವರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ದಲಿತ ಸಮುದಾಯದವರು ಜಾಗೃತಿಯಿಂದ ಇರಬೇಕೆಂದು ಕಾಂಗ್ರೆಸ್ ತಾಲೂಕು ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳು ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ(BJP Government) ಕೇಂದ್ರ ಮತ್ತು ರಾಜ್ಯದಲ್ಲಿ ಬಂದಾಗಿನಿಂದಲೂ ಅನಂತಕುಮಾರ ಹೆಗಡೆ ನಾವು ಸಂವಿಧಾನ(Constitution) ಬದಲಾವಣೆ ಮಾಡುವದಕ್ಕಾಗಿ ಅಧಿಕಾರಕ್ಕಾಗಿಯೇ ಬಂದಿದ್ದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ದಲಿತರಿಗೆ(Dalit) ಇದ್ದ ಮೀಸಲಾತಿ(Reservation) ತೆಗೆಯುತ್ತೇವೆ ಎಂದು ಬಹಿಂರಗವಾಗಿ ಹೇಳಿರುವುದು ಬಿಜೆಪಿಯ(BJP) ದಲಿತ ವಿರೋಧಿ ನಡೆಯಾಗಿದೆ. ಈ ಹೇಳಿಕೆಯ ಬಗೆಗೆ ಬಿಜೆಪಿಯ ದಲಿತರು ಯಾವುದೇ ಚಕಾರ ಎತ್ತಲಾರದೆ ಜಾಣಕಿವುಡರಾಗಿರುತ್ತಾರೆ. ಇದು ಬಿಜೆಪಿ ದಲಿತಪರ ಕಾಳಜಿ ಇರದ್ದನ್ನು ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
Bengaluru: ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ SC Morcha ಪ್ರತಿಭಟನೆ!
2008ರಿಂದ 2013ರವರೆಗೆ ಬಿಜೆಪಿ ಸರ್ಕಾರ ಕೇವಲ 22261 ಕೋಟಿ ದಲಿತರಿಗೆ ಖರ್ಚು ಮಾಡಿದೆ. 2013ರಿಂದ 2018ರವರೆಗೆ ಎಸ್‌ಸಿಪಿಟಿಎಸ್‌ಪಿ ಜಾರಿಗೆ ತಂದು ಸಿದ್ದರಾಮ್ಯನವರ ಸರ್ಕಾರ 88,500 ಕೋಟಿಯನ್ನು ಅಭಿವೃದ್ಧಿಗಾಗಿ ಖರ್ಚು ಮಾಡಿದೆ. ಇವತ್ತು ಕರ್ನಾಟಕದ(Karnataka) ಯಾವುದಾದರೂ ದಲಿತರ ಅಭಿವೃದ್ಧಿಯಾಗಿದೆ ಅಂದರೆ ಅದು ಸಿದ್ದರಾಮಯ್ಯನವರ ಸರ್ಕಾರ. 2019-2020ನೇ ಸಾಲಿನಲ್ಲಿ ಬಿಜೆಪಿ ಸರ್ಕಾರ ಎಸ್‌ಸಿಪಿಟಿಎಸ್‌ಪಿ ಯೋಜನೆಯಲ್ಲಿ ಒದಗಿಸಿ ಬಳಕೆ ಮಾಡಲಾರದೆ ಸುಮಾರು 19000 ಕೋಟಿ ಆದರೆ ಎಸ್‌ಸಿಪಿಟಿಎಸ್‌ಪಿ ಕಾಯ್ದೆಯಲ್ಲಿ ಹಿಂಪಡೆದಿದ್ದಾರೆ ಎಂದು ಹೇಳಿದರು.
ಯೋಜನೆಯನ್ನು ದಲಿತರ ಕಾಲೋನಿಗಳಲ್ಲಿ ಕಾರ್ಯ, 30445 ಕೋಟಿಯನ್ನು ಮರಳಿ ತೆಗೆದುಕೊಂಡಿದ್ದಾರೆ. ಅಂತಹ ಕಾಯ್ದಿರಿಸಿದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ ಬಿಜೆಪಿಯವರು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ ಇದು ದಲಿತರಿಗೆ ಬಿಜೆಪಿಯವರು ಮಾಡಿದ ಅನ್ಯಾಯ. ಸಿದ್ದರಾಮಯ್ಯನವರ ಸರ್ಕಾರ ದಲಿತರಿಗೋಸ್ಕರ ಮುಂಬಡ್ತಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಅದಕ್ಕೂ ಬಿಜೆಪಿಯವರು ಅಡ್ಡಗಾಲು ಹಾಕಿದ್ದರಿಂದ ಸುಗ್ರೀವಾಜ್ಞೆ ಮುಖಾಂತರ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು ಇದು ಸಿದ್ದರಾಮ್ಯನವರು ದಲಿತರಿಗೆ ತೋರಿಸಿದ ವಿಶೇಷ ಕಾಳಜಿ ಎಂದು ಬಣ್ಣಿಸಿದರು.
ದಲಿತ ಗುತ್ತಿಗೆದಾರರಿಗೆ ಮೀಸಲಾತಿಯನ್ನು ಶೇ.18 ಜಾರಿಗೆ ತಂದಿದ್ದು ದೇಶದ ಮೊಟ್ಟಮೊದಲ ಸರ್ಕಾರ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ. ಅವರು ಅಧಿಕಾರಕ್ಕೆ ಬಂದ ತಕ್ಷಣ ಎಸ್ಸಿ, ಎಸ್ಟಿ ಅಭಿವೃದ್ಧಿ ನಿಗಮಗಳಲ್ಲಿನ . 581 ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದರು.
ಪ್ರತಿ ಹೋಬಳಿಯಲ್ಲಿ ಎಸ್ಸಿ, ಎಸ್ಟಿ(SC,ST) ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು ಮತ್ತು 200 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿದ್ದು ಇದರಿಂದ 74300 ವಿದ್ಯಾರ್ಥಿಗಳಿಗೆ(Students) ಹೆಚ್ಚುವರಿಯಾಗಿ ಪ್ರವೇಶ ಸಿಕ್ಕಂತಾಗಿದೆ ಇದು ಸಿದ್ದರಾಮಯ್ಯನವರ ದಳಿತರ ಬಗೆಗೆ ಇದ್ದ ಕಾಳಜಿ ತೋರಿಸುತ್ತದೆ. ವಿವಿಧ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ದಲಿತರಿಗೆ ಸುಮಾರು 5 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಕೇವಲ 1 ಲಕ್ಷ ಸಹಾಯ ಧನವನ್ನು ನೀಡುತ್ತಿದೆ ಇದು ದಲಿತ ಪರ ಕಾಳಜಿಯೇ?. ಇದಕ್ಕೆ ಬಿಜೆಪಿ ಸರ್ಕಾರ ಉತ್ತರಿಸಬೇಕು ಎಂದು ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ದಲಿತ ಸಿಎಂ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ
ಪ್ರಸಕ್ತ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಡಿಸಿಎಂ ಸ್ಥಾನವನ್ನು ಗೋವಿಂದ ಕಾರಜೋಳ(Govind Karjol) ಅವರಿಗೆ ನೀಡಿತ್ತು. ಮರಳಿ ತೆಗೆದುಕೊಳ್ಳಲಾಯಿತು. ಶ್ರೀರಾಮುಲುಗೆ(Sriramulu) ಡಿಸಿಎಂ ಸ್ಥಾನ ನೀಡುತ್ತೇವೆಂದು ಅಧಿಕಾರಕ್ಕೆ ಬಂದು ಡಿಸಿಎಂ ಸ್ಥಾನ ನೀಡಲಿಲ್ಲ.
ಕಾಂಗ್ರೆಸ್ ಸರ್ಕಾರದಲ್ಲಿ ಜಗಜೀವನರಾಮ ಮತ್ತು ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ, ಡಾ.ಬಿ.ಆರ್.ಅಂಬೇಡ್ಕರ ಭವನಗಳನ್ನು ಸಿದ್ದರಾಮಯ್ಯನವರ ಸರ್ಕಾರ ನಿರ್ಮಿಸಿತ್ತು. 1494 ಕೋಟಿ ವೆಚ್ಚದಲ್ಲಿ ಎಸ್ಸಿ, ಎಸ್ಟಿವಿದ್ಯಾರ್ಥಿ ನಿಲಯಗಳ ಸ್ವಂತ ಕಟ್ಟಡ, 129 ವಸತಿ ಶಾಲಾ ಸಂಕೀರ್ಣ ನಿರ್ಮಿಸಿದೆ. ಇದು ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ಸಾಧನೆ.
ನ್ಯಾ. ಎ.ಜೆ. ಸದಾಶಿವ ವರದಿಯನ್ನು ಜಾರಿ ಮಾಡುತ್ತೇವೆಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಇಲ್ಲಿಯವರೆಗೆ ಆ ವರದಿ ಬಗೆಗೆ ಯಾವುದೇ ಚಕಾರ ಎತ್ತಿಲ್ಲ ಎಂದು ಬಿಜೆಪಿ ವಿರುದ್ಧ ದೂರಿದರು.
ಕರ್ನಾಟಕದ ದಲಿತರು ಮೇಲಿನ ಎಲ್ಲ ವಿಷಯಗಳನ್ನು ಗಮನಿಸಿ ದಲಿತರ ವಿರೋಧಿ ಯಾರು ದಲಿತ ಪರ ಕಾಳಜಿಯುಳ್ಳವರು ಯಾರು ಎಂದು ನೀವೇ ಯೋಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಿ. ಮನುವಾದಿಗಳ ಕುತಂತ್ರವನ್ನು ಅರಿತುಕೊಳ್ಳಿ ಎಂದು ಘಟಕದ ಅಧ್ಯಕ್ಷ ಸುರೇಶ ಮಾದರ, ಶಿವಾನಂದ ಕೊಪ್ಪದ, ಗಂಗಾಧರ ವಡ್ಡರ, ಪ್ರವೀಣ ಜ್ಯೋತಿ, ರಂಗನಾಥ ಕಾತರಕಿ, ಬಸವರಾಜ ಗಿಡ್ಡನಾಯ್ಕನಾಳ, ರಾಜು ಪೂಜಾರ, ಶರಣು ಹಾದಿಮನಿ, ಗದಿಗೆಪ್ಪ ಹಾಗನೂರ, ರವಿ ಮಣ್ಣೇರಿ, ಶಿವಾನಂದ ಉಗಲವಾಟ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.