Asianet Suvarna News Asianet Suvarna News

ಬನ್ನೇರುಘಟ್ಟದಲ್ಲಿ ಹೊಸ ಅತಿಥಿ: ಗಂಡು ಮರಿಗೆ ಜನ್ಮ ಕೊಟ್ಟ ನೀರಾನೆ..!

ಆನೇಕಲ್‌ ಬನ್ನೇರುಘಟ್ಟಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದ್ದು, ದಶ್ಯಾ(11) ಎಂಬ ನೀರಾನೆ ಶನಿವಾರ ಮುದ್ದಾದ ಗಂಡು ಮರಿಯೊಂದಕ್ಕೆ ಜನ್ಮ ನೀಡಿದೆ.

 

hippopotamus gives birth to baby hippopotamus in Bannerghatta National Park
Author
Bangalore, First Published Jul 26, 2020, 7:11 AM IST
  • Facebook
  • Twitter
  • Whatsapp

ಬೆಂಗಳೂರು(ಜು.26): ಆನೇಕಲ್‌ ಬನ್ನೇರುಘಟ್ಟಉದ್ಯಾನವನಕ್ಕೆ ನೂತನ ಅತಿಥಿಯ ಆಗಮನವಾಗಿದ್ದು, ದಶ್ಯಾ(11) ಎಂಬ ನೀರಾನೆ ಶನಿವಾರ ಮುದ್ದಾದ ಗಂಡು ಮರಿಯೊಂದಕ್ಕೆ ಜನ್ಮ ನೀಡಿದೆ.

ನಾಗಾ (17) ಈ ಮರಿಯ ತಂದೆಯಾಗಿದೆ. ದಶ್ಯಾ 2018ರ ಜನವರಿಯಲ್ಲಿ ಅಲೋಕ್‌ ಎಂಬ ಮರಿಗೆ ಜನ್ಮ ನೀಡಿತ್ತು. ಇದೀಗ ಮತ್ತೊಂದು ಮರಿಗೆ ಜನ್ಮ ನೀಡಿದ್ದು, ಪಾರ್ಕ್ನಲ್ಲಿ ನೀರಾನೆಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಬಲೆಗೆ ಬಿತ್ತು ಬೃಹತ್ ಹಕ್ಕಿ ತೊರ್ಕೆ ಮೀನು..! ಇಲ್ಲಿವೆ ಫೋಟೋಸ್

ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಾನೆಗಳಿದ್ದು, ಪ್ರಾಣಿ ವಿನಿಮಯ ಆಧಾರದಲ್ಲಿ ಇತರೆ ಝೂಗಳೊಂದಿಗೆ ವ್ಯವಹರಿಸಿ ನಮಗೆ ಬೇಕಿರುವ ಪ್ರಾಣಿ ಪಕ್ಷಿಗಳನ್ನು ತರುವ ಆಲೋಚನೆ ಇದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ.

ಬೆಂಗಳೂರಿನ ಪ್ರಸಿದ್ಧ ಉದ್ಯಾನವನ ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಪ್ರವೇಶ ಶುಲ್ಕವನ್ನು ಜನವರಿಯಲ್ಲಿ ಏರಿಕೆ ಮಾಡಲಾಗಿತ್ತು. ನೂತನ ದರ  ಜಾರಿ ಮಾಡಲಾಗಿತ್ತಾದರೂ ನಂತರದಲ್ಲಿ ಕೊರೋನಾ ವ್ಯಾಪಿಸಿದ್ದರಿಂದ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.

Follow Us:
Download App:
  • android
  • ios