ಗಣೇಶ ಮಂಡಳಗಳಿಂದ ಹೊಸ ಬೇಡಿಕೆ: ಗಣೇಶನಿಗೂ ಫ್ರೀ ಕರೆಂಟ್ ಕೊಡಿ ಎಂದ ಹಿಂದೂ ಸಂಘಟನೆಗಳು!
ಗಣೇಶ ಪ್ರತಿಷ್ಠಾಪನೆಗೆ ಎಲ್ಲೆಡೆ ಭರ್ಜರಿ ತಯಾರಿಗಳು ನಡೆದಿವೆ. ಇತ್ತ ಗಣೇಶ ಉತ್ಸವಕ್ಕೆ ಪರ್ಮಿಶನ್ ಪಡೆಯಬೇಕೋ ಹೇಗೋ ಎನ್ನುವ ಬಗ್ಗೆ ಗೊಂದಲ ಸಹ ಇವೆ. ಈ ನಡುವೆ ಗಣೇಶ ಮಂಡಗಳು ಹೊಸ ಬೇಡಿಕೆಯೊಂದನ್ನ ಸರ್ಕಾರದ ಮುಂದೆ ಇಟ್ಟಿವೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಸೆ.16): ಗಣೇಶ ಪ್ರತಿಷ್ಠಾಪನೆಗೆ ಎಲ್ಲೆಡೆ ಭರ್ಜರಿ ತಯಾರಿಗಳು ನಡೆದಿವೆ. ಇತ್ತ ಗಣೇಶ ಉತ್ಸವಕ್ಕೆ ಪರ್ಮಿಶನ್ ಪಡೆಯಬೇಕೋ ಹೇಗೋ ಎನ್ನುವ ಬಗ್ಗೆ ಗೊಂದಲ ಸಹ ಇವೆ. ಈ ನಡುವೆ ಗಣೇಶ ಮಂಡಗಳು ಹೊಸ ಬೇಡಿಕೆಯೊಂದನ್ನ ಸರ್ಕಾರದ ಮುಂದೆ ಇಟ್ಟಿವೆ. ರಾಜ್ಯದ ಜನರಿಗೆ 200 ಯುನಿಟ್ ಪ್ರೀ ವಿದ್ಯುತ್ ಕೊಡ್ತಿರೋ ಕಾಂಗ್ರೆಸ್ ಸರ್ಕಾರ ಗಣೇಶ ಹಬ್ಬಕ್ಕು ಉಚಿತವಾಗಿ ಕರೆಂಟ್ ನೀಡಬೇಕು ಎಂದು ಮನವಿ ಮಾಡ್ತಿವೆ.. ಗೌರಿಗಣೇಶ ಹಬ್ಬ ಹಿನ್ನೆಲೆ ಅಧಿಕಾರಿಗಳು ನಡೆಸುತ್ತಿರೋ ಸಭೆಗಳಲ್ಲು ಇದು ಚರ್ಚೆಯ ವಿಷಯವಾಗಿದೆ..
ಕಾಂಗ್ರೆಸ್ ಸರ್ಕಾರದ ಎದುರು ಹೊಸ ಸವಾಲು: ರಾಜ್ಯದಲ್ಲಿ ಗೌರಿಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಗಣೇಶನ ಪ್ರತಿಷ್ಠಾಪನೆಗೆ ಯುವಕ ಮಂಡಳಗಳು ಸಜ್ಜಾಗಿವೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಗಣೇಶನ ಪ್ರತಿಷ್ಠಾಪನೆಗೆ ತಯಾರಿ ಮಾಡಿಕೊಂಡಿದ್ದಾರೆ. ಆದ್ರೆ ಈ ನಡುವೆ ಸರ್ಕಾರಕ್ಕೆ ಸವಾಲೊಂದು ಎದುರಾಗಿದೆ. ರಾಜ್ಯದಲ್ಲಿ ಶಾಂತಿಯುವವಾಗಿ ಗಣೇಶ ಹಬ್ಬ ನಡೆದರೆ ಸಾಕು ಎನ್ನುವಾಗ ಹೊಸ ಸವಾಲು ಕಾಂಗ್ರೆಸ್ ಸರ್ಕಾರ ಮುಂದೆ ಬಂದಿದೆ. ಗಣೇಶ ಮಂಡಳಗಳಿಗು ಸರ್ಕಾರ ಪ್ರೀ ಕರೆಂಟ್ ನೀಡುವಂತೆ ಗಜಾನನ ಯುವಕ ಮಂಡಳಗಳು ಮನವಿ ಮಾಡ್ತಿವೆ..
ವಿಜಯಪುರಕ್ಕೆ ಬಾಹ್ಯಾಕಾಶ ವಿಜ್ಞಾನಿ ಭೇಟಿ: ಶಾಲಾ-ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀನಿವಾಸನ್
ವಿಜಯಪುರದಲ್ಲಿ ಮೊದಲು ಶುರುವಾದ ಪ್ರೀ ಕರೆಂಟ್ ಬೇಡಿಕೆ: ಗುಮ್ಮಟನಗರಿ ವಿಜಯಪುರದಲ್ಲಿ ಗಣೇಶ ಹಬ್ಬದವನ್ನ ಅದ್ದೂರಿಯಾಗಿ ಆಚರಿಸೋದಕ್ಕೆ ಗಣೇಶ ಮಂಡಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಈ ನಡುವೆ ಗಣೇಶ ಯುವಕ ಮಂಡಳ, ಹಿಂದೂ ಸಂಘಟನೆಗಳು ಕಾಂಗ್ರೆಸ್ ಸರ್ಕಾರದ ಎದುರು ಹೊಸ ಬೇಡಿಕೆಯೊಂದನ್ನ ಇಟ್ಟಿವೆ. ಜನರಿಗೆ ಪ್ರೀ ಗ್ಯಾರಂಟಿ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಈ ಬಾರಿ ಗಣೇಶ ಹಬ್ಬಕ್ಕು ಪ್ರೀ ಕರೆಂಟ್ ಭಾಗ್ಯ ನೀಡಬೇಕು ಎಂದು ಆಗ್ರಹ ಮುಂದಿಟ್ಟಿವೆ. ಈಗ ರಾಜ್ಯದಲ್ಲಿ ಜನರಿಗೆ 200 ಯೂನಿಟ್ ವರೆಗು ವಿದ್ಯುತ್‌ನ್ನ ಸರ್ಕಾರ ಪ್ರೀಯಾಗಿ ನೀಡ್ತಿದೆ. ಗಣೇಶ ಹಬ್ಬಕ್ಕು ವಿದ್ಯೂತ್ ಉಚಿತವಾಗಿ ನೀಡಬೇಕು ಬೇಡಿಕೆ ಇಟ್ಟಿವೆ..
ಶಾಂತಿ ಸಭೆಗಳಲ್ಲು ಮನವಿ ಮುಂದಿಟ್ಟ ಗಣಪತಿ ಭಕ್ತರು: ಗಣೇಶ ಹಬ್ಬಕ್ಕು ಮುನ್ನ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿ ಅಧಿಕಾರಿಗಳು ನಡೆಸುವ ಸಭೆಗಳಲ್ಲಿ ಗಜಾನನ ಮಂಡಳ ಜೊತೆಗಿನ ಸಭೆಯಲ್ಲು ಕಾರ್ಯಕರ್ತರು ಪ್ರೀ ಕರೆಂಟ್ ಗೆ ಬೇಡಿಕೆ ಇಟ್ಟಿದ್ದಾರೆ. ವಿಜಯಪುರ ನಗರ, ಮುದ್ದೇಬಿಹಾಳ, ಚಡಚಣ, ಬಸವನ ಬಾಗೇವಾಡಿ ಪಟ್ಟಣಗಳಲ್ಲಿ ನಡೆದ ಸಭೆಗಳಲ್ಲು ಇದೆ ಬೇಡಿಕೆಯನ್ನ ಗಣೇಶ ಮಂಡಳಿಗಳು ಇಟ್ಟಿವೆ..
3 ರಿಂದ 5 ಸಾವಿರ ಕರೆಂಟ್ ಕಟ್ಟುತ್ತಿದ್ದ ಗಣೇಶ ಮಂಡಳಗಳು: ಇನ್ನು ಪ್ರತಿ ವರ್ಷ ಗಣೇಶನನ್ನ ಕೂರಿಸುವ ಒಂದು ಸಾರ್ವಜನಿಕ ಗಜಾನನ ಮಂಡಳಿ ಸಾಮಾನ್ಯವಾಗಿ 3 ರಿಂದ 5 ಸಾವಿರ ರೂಪಾಯಿ ವಿದ್ಯುತ್ ಶುಲ್ಕವನ್ನು ಹೆಸ್ಕಾಂಗೆ ಭರಿಸುತ್ತಾರೆ. ಇದಕ್ಕಾಗಿ ಹೊರಗೆ ದೇಣಿಗೆ ಸಂಗ್ರಹವನ್ನು ಗಣೇಶ ಮಂಡಳಿಗಳು ಮಾಡಬೇಕಾಗುತ್ತೆ. ಗ್ರಾಮೀಣ ಪ್ರದೇಶಗಳಲ್ಲು ಗಣೇಶನನ್ನ ಕೂರಿಸುವ ಯುವಕರು ತಾವೇ ಒಂದಿಷ್ಟು ಪುಡಗಾಸು ಸಂಗ್ರಹಿಸಿ ಹಬ್ಬ ಆಚರಣೆ ಮಾಡ್ತಾರೆ. ಹೀಗಾಗಿ ಸರ್ಕಾರ ರಾಜ್ಯಾದ್ಯಂತ ಗಣೇಶನನ್ನ ಪ್ರತಿಷ್ಠಾಪಿಸುವ ಮಂಡಳಿಗಳಿಗೆ ಕರೆಂಟ ಬಿಲ್ ಪ್ರೀ ಮಾಡಿದ್ರೆ ಒಳ್ಳೆಯದು ಎನ್ತಿದ್ದಾರೆ ಗಣೇಶನ ಭಕ್ತರು.
ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್ ಮಾಡಿರುವ ಆರೋಪ ಸುಳ್ಳು: ಕೆ.ಎಸ್.ಈಶ್ವರಪ್ಪ
ಸರ್ಕಾರ ಮನವಿಗೆ ಸ್ಪಂದಿಸುತ್ತಾ?: ಗುಮ್ಮಟನಗರಿ ವಿಜಯಪುರದಲ್ಲಿ ಶುರುವಾಗಿರೋ ಗಣೇಶ ಮಂಟಪಗಳಿಗೆ ಪ್ರೀ ಕರೆಂಟ್ ಬೇಡಿಕೆ ವಿಚಾರ ಈಗ ಬೇರೆ ಜಿಲ್ಲೆಗಳಲ್ಲು ಶುರುವಾಗಿದೆ. ಈ ನಡುವೆ ಸರ್ಕಾರ ಗಣೇಶ ಮಂಡಳಿಗಳ ಬೇಡಿಕೆಗೆ ಅಸ್ತು ಎನ್ನುತ್ತಾ ಎನ್ನುವ ಪ್ರಶ್ನೆಗಳಿವೆ. ಜನರಿಗೆ ಪ್ರೀ ಕರೆಂಟ್ ನೀಡ್ತಿರೋ ಸರ್ಕಾರ ಗಣೇಶನಿಗು ಕೊಡಲಿ ಎನ್ತಿದ್ದಾರೆ ಭಕ್ತರು. ಈ ಮೂಲಕ ಗಣೇಶ ಹಬ್ಬದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹೊಸ ಸವಾಲು ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಕಾದು ನೋಡಬೇಕಿದೆ.