Asianet Suvarna News Asianet Suvarna News

ವಿಜಯಪುರಕ್ಕೆ ಬಾಹ್ಯಾಕಾಶ ವಿಜ್ಞಾನಿ ಭೇಟಿ: ಶಾಲಾ-ಮಕ್ಕಳೊಂದಿಗೆ ಸಂವಾದ ನಡೆಸಿದ ಶ್ರೀನಿವಾಸನ್

ವಿದ್ಯಾರ್ಥಿಗಳು ಮೂಲ ವಿಜ್ಞಾನದಡೆಗೆ ಬರಬೇಕು. ಜಗತ್ತಿನಲ್ಲಿ ನೂರಾರು ಸಮಸ್ಯೆ ಗ್ರಹಿಸಿ ಸೂಕ್ಷ್ಮಮತಿಗಳಾಗಬೇಕು. ಆಗ ವಿಶೇಷ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯವೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಖ್ಯಾತ ವಿಜ್ಞಾನಿ ಎಂ.ಎಸ್.ಶ್ರೀನಿವಾಸನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

Space scientist MS Srinivasan visit to Vijayapura gvd
Author
First Published Sep 13, 2023, 10:03 PM IST

ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.13): ವಿದ್ಯಾರ್ಥಿಗಳು ಮೂಲ ವಿಜ್ಞಾನದಡೆಗೆ ಬರಬೇಕು. ಜಗತ್ತಿನಲ್ಲಿ ನೂರಾರು ಸಮಸ್ಯೆ ಗ್ರಹಿಸಿ ಸೂಕ್ಷ್ಮಮತಿಗಳಾಗಬೇಕು. ಆಗ ವಿಶೇಷ ವ್ಯಕ್ತಿಯಾಗಿ ರೂಪಗೊಳ್ಳಲು ಸಾಧ್ಯವೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಖ್ಯಾತ ವಿಜ್ಞಾನಿ ಎಂ.ಎಸ್.ಶ್ರೀನಿವಾಸನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಹೊರವಲಯದ ಎಕ್ಸಲೆಂಟ್ ಹಾಗೂ ವೇದ್ ಅಕಾಡೆಮಿ ಸಹಯೋಗದಲ್ಲಿ ವಿದ್ಯಾರ್ಥಿ-ವಿಜ್ಞಾನಿ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. 

ಮಕ್ಕಳ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರಿಸಿದ ವಿಜ್ಞಾನಿ: ಚಂದ್ರಯಾನ-3 ಯಶಸ್ವಿ ಉಡಾವಣೆ ಕುರಿತು ವಿದ್ಯಾರ್ಥಿಗಳ ಕೇಳಿದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ಭಾರತ ದೇಶ ಎಲ್ಲ ರೀತಿಯಲ್ಲಿ ತಂತ್ರಜ್ಞಾನದಲ್ಲಿಹಲವು ಮುಂದುವರೆದ ದೇಶಗಳಿಗೆ ಪೈಪೋಟಿ ನೀಡುತ್ತಿವೆ. ಚಂದ್ರಯಾನ 3 ಉಡಾವಣೆಗೆ ಹಲವು ವಿಜ್ಞಾನಿಗಳ ಹಗಲಿರುಳು ಪರಿಶ್ರಮ ಅಡಗಿದೆ. ಮೊದಲು ಚಂದ್ರಯಾನ 2 ಅಷ್ಟಾಗಿ ಯಶಸ್ವಿ ಕಾಣದಾಗ ಹಲವು ವಿಜ್ಞಾನಿಗಳು ನಿರಾಸೆ ಅನುಭವಿಸಿದ್ದರು ಎಂದರು. ನಂತರ ಸತತ ಪ್ರಯತ್ನದಿಂದ ಚಂದ್ರಯಾನ-3 ಉಡಾವಣೆಗೆ ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದ ನಾವು ಯಶಸ್ವಿಗೊಂಡಿದೆ. ಈಗ ಚಂದ್ರಯಾನ ಚಂದಿರನ ಅಂಗಳದಲ್ಲಿ ತನ್ನ ಕೆಲಸ ಮಾಡುತ್ತಿದೆ. ಇದರ ಜತೆ ಸೂರ್ಯ ಅಂಗಳಕ್ಕೂ ಹೋಗಲು ವಿಜ್ಞಾನಿಗಳು ಪರಿಶ್ರಮ ವಹಿಸುತ್ತಿದ್ದಾರೆ ಅದು ಸಹ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.

ವಿಜಯಪುರದಲ್ಲಿ ಹೊಟೇಲ್‌ ಉದ್ಯಮಿಯನ್ನ ಯಾಮಾರಿಸಿದ ಸೈಬರ್‌ ಕಳ್ಳರು: 8 ಅಕೌಂಟ್‌ಗೆ ಕನ್ನ!

ಇಸ್ರೋ ತೆರೆದ ಪುಸ್ತಕ ಇದ್ದ ಹಾಗೇ: ಇಸ್ರೋ ಸಂಸ್ಥೆಯೊಂದು ತೆರದ ಪುಸ್ತಕವಿದ್ದ ಹಾಗೆ. ಇಲ್ಲಿ ವಿಜ್ಞಾನದಲ್ಲಿ ಆಸಕ್ತಿ ಇರುವ ಯುವ ವಿಜ್ಞಾನಿಗಳು ಕೆಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇಸ್ರೋ ಸಂಸ್ಥೆ ಸೇರಿಕೊಳ್ಳಬಹುದು.  ಕಲಿಕೆಗೆ ಇಸ್ರೋ ಉತ್ತಮ ವೇದಿಕೆಯಾಗಿದೆ. ಜಗತ್ತಿನಲ್ಲಿ ಭಾರತವನ್ನು ಉನ್ನತ ಸ್ಥಾನದಲ್ಲಿ ನೋಡಬೇಕು ಎನ್ನುವ ಗುರಿ ಹೊಂದಿದ್ದೇವೆ. ಅದಕ್ಕೆ ತಕ್ಕಂತೆ ಪ್ರಧಾನಿ ನರೇಂದ್ರ ಮೋದಿ ಸಹ ಉತ್ತೇಜನ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ ಎಂದರು. 

ಇಸ್ರೋಗೆ ಜನರ ಪ್ರೋತ್ಸಾಹ ಅಗತ್ಯ: ಜಗತ್ತಿನ ಭೂ ಪುಟದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸುತ್ತ ಹೆಜ್ಜೆ ಹಾಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಸಂಶೋಧನೆಗಳನ್ನು ಇಸ್ರೋ ಮಾಡಲಿದೆ. ಇದಕ್ಕೆ ಜನರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು. ಯಾವುದೇ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಿರಂತರ ಪ್ರಯತ್ನ, ಸಮಾಜಮುಖಿ ಚಿಂತನೆ, ವೈಲ್ಯಗಳನ್ನು ಮರೆತು ಸಾಧನೆಯೆಡೆಗೆ ಗಮನ ಕೇಂದ್ರಿಕರಿಸಬೇಕೆಂದು ಹೇಳಿದರು. ಚಂದ್ರಯಾನ ಕುರಿತು ನಾಲ್ಕಾರು ಪ್ರಾತ್ಯಕ್ಷಿಗಳನ್ನು ಸಹ ಮಕ್ಕಳಿಗೆ ತೋರಿಸಿದರು.

ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುವ ಬಗ್ಗೆ ಶೆಟ್ಟರ್‌ ಮಾಡಿರುವ ಆರೋಪ ಸುಳ್ಳು: ಕೆ.ಎಸ್‌.ಈಶ್ವರಪ್ಪ

ಕಾರ್ಯಕ್ರಮದಲ್ಲಿ ಬಿಇಓ ಭಾಗಿ: ಕಾರ್ಯಕ್ರಮದಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳುಲಮಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿದ್ದು, ಜ್ಞಾನಸಂಪಾದನೆ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ,  ವಿದ್ಯಾರ್ಥಿಗಳು ಸದಾ ಓದಿನಲ್ಲಿ ತೊಡಗುವುದರ ಮೂಲಕ ಸಮಸ್ಯೆಗಳ ಆಳಕ್ಕೆ ಇಳಿದು, ಸೂಕ್ಷ್ಮವಾಗಿ ಗಮನಿಸಿ ಯಾವುದು, ಏಕೆ, ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸದಾ ಪ್ರಯತ್ನಶೀಲರಾಗಬೇಕು. ಸಮಸ್ಯೆಗಳನ್ನು ಗುರುತಿಸುವುದು ಒಂದು ಕಲೆಯಾಗಿದೆ. ಅದನ್ನು ಅರಿತಾಗ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯ. ಆ ದಿಸೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಎಂದರು. ಸಂಸ್ಥೆಯ ಎಲ್ಲ ಅಧ್ಯಾಪಕ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios