ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜು ಧೂಳಿ ಕೊರೋನಾ ಮಹಾಮಾರಿಯಿಂದಾಗಿ  ಶನಿವಾರ ನಿಧನರಾದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಕೋವಿಡ್‌ನಿಂದಾಗಿಯೇ ಐದು ದಿನಗಳ ಹಿಂದೆ ಅವರ ತಾಯಿ ಸಾವಿಗೀಡಾಗಿದ್ದರು.

 ಹಳಿಯಾಳ (ಮೇ.03): ತಾಲೂಕಿನ ರಾಜಕೀಯ, ಸಾಮಾಜಿಕ ಧುರೀಣ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜು ಧೂಳಿ (57) ಶನಿವಾರ ನಿಧನರಾದರು. 

ಕೋವಿಡ್‌ ಹಿನ್ನೆಲೆಯಲ್ಲಿ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಕೋವಿಡ್‌ನಿಂದಾಗಿಯೇ ಐದು ದಿನಗಳ ಹಿಂದೆ ಅವರ ತಾಯಿ ಸಾವಿಗೀಡಾಗಿದ್ದರು.

ಮೂರು ದಶಕಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ರಾಜು ಬಿಜೆಪಿಯಿಂದ 1994ರಲ್ಲಿ ಹಳಿಯಾಳ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಕೊರೋನಾರ್ಭಟ: ಬೆಂಗ್ಳೂರಲ್ಲಿ ಬೆಡ್‌ ಸಿಗದಾತನಿಗೆ ಭಟ್ಕಳದಲ್ಲಿ ಚಿಕಿತ್ಸೆ ..

ಕಳೆದ ಕೆಲ ವರ್ಷಗಳಿಂದ ಬಿಜೆಪಿಯಿಂದ ದೂರ ಉಳಿದು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona