ಚಿಕ್ಕಮಗಳೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ, ಡಿಜೆಗೆ ಸ್ಟೆಪ್ ಹಾಕಿದ ಸಿಟಿ ರವಿ

ಓಂಕಾರೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ  ಗಣಪತಿ ವಿಸರ್ಜನಾ ಮೆರವಣಿಗೆ . ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ. ಮೆರವಣಿಗೆಯಲ್ಲಿ ಡಿಜೆ ಸೌಂಡ್ ಗೆ  ಕುಣಿದು ಕುಪ್ಪಳಿದ ಯುವಕ, ಯುವತಿಯರು
 

Hindu Mahasabha's grand ganesha procession in Chikkamagaluru gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಸೆ.11): ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ಚಿಕ್ಕಮಗಳೂರು ನಗರದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ರಾತ್ರಿ ವರೆಗೆ ವಿವಿಧ ಬೀದಿಗಳಲ್ಲಿ ಸಂಚರಿಸಿತು. ವರ್ಷ ವರ್ಷಕ್ಕೂ ಮೆರಗು ಹೆಚ್ಚಿಸಿಕೊಳ್ಳುತ್ತಿರುವ ಹಿಂದೂ ಮಹಾ ಗಣಪತಿ ಮೆರವಣಿಗೆಗೆ ಈ ಬಾರಿಯೂ ನಿರೀಕ್ಷೆಗೆ ಮೀರಿ ಜನರು ಸೇರಿ ಭಕ್ತಿ ಸಮರ್ಪಿಸಿದರು. ಕಳೆದ 9 ವರ್ಷಗಳಿಂದ ಚಿಕ್ಕಮಗಳೂರು ನಗರದ ಪ್ರತಿಷ್ಟಾಪನೆ ಮಾಡುತ್ತಿರುವ  ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಕ್ಕಳು, ಯುವಕ, ಯುವತಿಯರಾದಿಯಾಗಿ ವಯಸ್ಕರೆಲ್ಲರೂ ಕಲೆತು ಕುಣಿದು, ಕುಪ್ಪಳಿಸಿ ಗಣಪನಿಗೆ ಸಂಭ್ರಮದ ಬೀಳ್ಕೊಡುಗೆ ನೀಡಿದರು. ಮೆರವಣಿಗೆಯುದ್ದಕ್ಕೂ ನಿವಾಸಿಗಳು ಪೂಜೆ, ಮಂಗಳಾರತಿ ಮಾಡಿಸಿ ಲಂಬೋದರನಿಗೆ ವಂದಿಸಿದರು. ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದ ವರೆಗೆ ತೆರಳಿ ಹಿಂದಿರುಗಿ ಬಂದು ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಬಸವನಹಳ್ಳಿ ಕೆರೆ ತಲುಪಿತು. 

ಅಲಂಕೃತ ಪ್ರಭಾವಳಿಯಲ್ಲಿ ವಿನಾಯಕ ವಿರಾಜಮಾನನಾಗುತ್ತಿದ್ದಂತೆ ಮಂಗಳವಾದ್ಯದೊಂದಿಗೆ ಮೆರವಣಿಗೆ ಆರಂಭಗೊಂಡಿತು. ಬಿಳಿ ಬಣ್ಣದ ಸಾಂಪ್ರದಾಯಿಕ ದಿರಿಸು ಧರಿಸಿದ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಮೆರವಣಿಗೆಗೆ ವಿಶೇಷ ಕಳೆ ತಂದಿದ್ದರು. ಅಲ್ಲದೆ ಸಂಭ್ರಮದ ಮೆರವಣಿಗೆಗೆ ಭಕ್ತಿ, ಭಾವವನ್ನು ತುಂಬಿದರು.

ಮೆರವಣಿಗೆಯಲ್ಲಿ ವೀರ ಸಾವರ್ಕರ್ ಭಾವಚಿತ್ರ 
ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಜೊತೆಗೆ ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ಆಕರ್ಷಕ ಭಾವಚಿತ್ರ ಗಮನ ಸೆಳೆಯಿತು. ನೂರಾರು ಭಕ್ತರು ಭಾವಚಿತ್ರದೊಂದಿಗೆ ಫೊಟೋ ತೆಗೆಸಿಕೊಂಡರು. ಮೆರವಣಿಗೆ ಮುಂಚೂಣಿಯಲ್ಲಿ ಸಾಗಿಬಂದ ಬೃಹತ್ ಹನುಮಂತನ ಸ್ತಬ್ಧ ಚಿತ್ರ ವಿಶೇಷವಾಗಿತ್ತು.

ಅದರೊಂದಿಗೆ ವೀರಗಾಸೆ, ಡೊಳ್ಳು ತಂಡಗಳು ಮೆವಣಿಗೆಗೆ ರಂಗು ತುಂಬಿದವು. ದಾರಿಯುದ್ಧಕ್ಕೂ ಡಿಜೆ ಸದ್ದಿಗೆ ಸಹಸ್ರಾರು ಮಂದಿ ಏಕ ಕಾಲದಲ್ಲಿ ಹೆಜ್ಜೆ ಹಾಕಿದ ದೃಶ್ಯ ಆಕರ್ಷಕವಾಗಿತ್ತು. ಯುವತಿಯರ ಗುಂಪು ನೃತ್ಯ ಮಾಡಿ, ಕುಣಿದು ಕುಪ್ಪಳಿಸಿದರು. ಗಣಪತಿ ಬಪ್ಪ ಮೋರೆಯಾ, ವಿನಾಯಕನಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.

Ganesha Visarjan ಹೊಸ ದಾಖಲೆ ಬರೆದ ಬಾಲಾಪುರ ಗಣಪ, ಒಂದು ಲಡ್ಡುಗೆ 24.60 ಲಕ್ಷ ರೂ!

ಡಿಜೆಗೆ ಸ್ಟೇಪ್ ಹಾಕಿದ ಸಿ.ಟಿ ರವಿ 
ಹಿಂದೂ ಮಹಾಸಭಾ ಗಣಪತಿ ವಿರ್ಸಜನೆಯಲ್ಲಿ ಡಿಜೆಗೆ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಯುವಕರೊಂದಿಗೆ ಸ್ಟೇಪ್ ಹಾಕಿದರು. ಬೆಂಗಳೂರಿನಿಂದ ಆಗಮಿಸಿದ ಸಿ.ಟಿ ರವಿ ಮೆರವಣಿಗೆಯಲ್ಲಿ ಭಾಗಿಯಾಗಿದ್ರು ಅಲ್ಲದೆ ಯುವಕರೊಂದಿಗೆ  ಕುಣಿಯುವ ಮೂಲಕ ಗಮನಸೆಳೆದರು. ಇದೇ ವೇಳೆಯಲ್ಲಿ ಯುವಕರು ಸಿ.ಟಿ ರವಿಯನ್ನ ಹೊತ್ತು ಡ್ಯಾನ್ಸ್ ಮಾಡಿದ್ರು. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮೆರವಣಿಗೆಯಲ್ಲಿ ಭಾಗವಹಿಸಿ ಹಿಂದೂ ಗಣಪತಿ ಸಮಿತಿ ಸದಸ್ಯರ ಜೊತೆ ವಾದ್ಯಕ್ಕೆ ಹೆಜ್ಜೆ ಹಾಕಿದರು.

ಗಣೇಶನ ಕಳ್ಸೋದು ಬ್ಯಾಡ... ಬಪ್ಪನ ತಬ್ಬಿ ಅಳಲಾರಂಭಿಸಿದ ಪುಟ್ಟ ಮಗು : ವಿಡಿಯೋ ವೈರಲ್

 ಮೆರವಣಿಗೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆಯುದ್ಧಕ್ಕೂ ಇಕ್ಕೆಲಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಮುಂಜಾಗ್ರತೆಯಾಗಿ ಮಧ್ಯಾಹ್ನವೇ ಮೆರವಣಿಗೆ ಸಾಗಿ ಬರುವ ಬೀದಿಗಳಲ್ಲಿ ಪೊಲೀಸ್ ಪಥಸಂಚಲನ ನಡಸಲಾಗಿತ್ತು. 300 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.

Latest Videos
Follow Us:
Download App:
  • android
  • ios