Asianet Suvarna News Asianet Suvarna News

Ganesha Visarjan ಹೊಸ ದಾಖಲೆ ಬರೆದ ಬಾಲಾಪುರ ಗಣಪ, ಒಂದು ಲಡ್ಡುಗೆ 24.60 ಲಕ್ಷ ರೂ!

ದೇಶಾದ್ಯಂತ ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೀಗ ಗಣೇಶನ ವಿಸರ್ಜನೆ, ಯಾತ್ರೆಗಳು ನಡೆಯುತ್ತಿದೆ. ಪ್ರತಿ ವರ್ಷದಿಂದ ಈ ವರ್ಷವೂ ಬಾಲಾಪುರ ಗಣಪ ಮತ್ತೊಂದು ದಾಖಲೆ ಬರೆದಿದ್ದಾನೆ. ಬಾಲಾಪುರ ಗಣಪತಿ ಪ್ರಸಾದ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. 

Ganesh Visarjan Balapur Ganapati laddu auctioned for a record breaking price of Rs 24 60 lakh Hyderabad ckm
Author
First Published Sep 9, 2022, 7:50 PM IST

ಹೈದರಾಬಾದ್(ಸೆ.09): ಬಾಲಾಪುಪದ ಚೌತಿ ಹಲವು ಕಾರಣಗಳಿಂದ ವಿಶೇಷತೆಗಳನ್ನು ಪಡೆದಿದೆ. ಬಾಲಾಪುರ ಗಣಪನ ಮತ್ತೊಂದು ವಿಶೇಷತೆ ಅಂದರೆ ಲಡ್ಡು. ಇಲ್ಲಿ ಗಣೇಶ ಚೌತಿಗೆ ವಿಶೇಷ ಲಡ್ಡು ತಯಾರಿಸಲಾಗುತ್ತದೆ. ದೊಡ್ಡ ಗಾತ್ರದ ಲಡ್ಡು ಗಣೇಶ ವಿಸರ್ಜನೆಗೂ ಮೊದಲು ಹರಾಜಿಗೆ ಹಾಕಲಾಗುತ್ತದೆ. ಪ್ರತಿ ವರ್ಷ ಹೊಸ ಹೊಸ ದಾಖಲೆ ಬರೆಯುತ್ತಾ ಬಂದಿರುವ ಬಾಲಾಪುರ ಗಣಪ ಈ ಬಾರಿ ದಾಖಲೆಯ ಮೊತ್ತಕ್ಕೆ ಹರಜು ನಡಿದಿದೆ. ಬಾಲಾಪುರ ಚೌತಿ ಪ್ರಸಾದವಾಗಿರುವ ಒಂದು ಲಡ್ಡು ಬರೋಬ್ಬರಿ 24.60 ಲಕ್ಷ ರೂಪಾಯಿಗೆ ಹರಾಜಾಗಿದೆ. 9 ದಿನಗಳ ಈ ಗಣಪತಿ ಉತ್ಸವ ದೇಶಾದ್ಯಂತ ಸದ್ದು ಮಾಡುತ್ತಿದೆ.  9 ದಿನಗಳೂ ಅತೀ ವಿಜೃಂಭಣೆಯಿಂದ ಪೂಜೆಗಳು ನಡೆಯುತ್ತದೆ. ಈ ಬಾರಿ 21 ಕೆಜಿ ಗೂತ್ರದ ಬೃಹದಾಕಾರದ ಲಡ್ಡು ತಯಾರಿಸಿ ಹರಾಜಿಗೆ ಇಡಲಾಗಿತ್ತು. ಬಾಲಾಪುರ ಗಣೇಶ ಉತ್ಸವ ಕಮಿಟಿ ಸದಸ್ಯ ವಂಗೇಟಿ ಲಕ್ಷ್ಮಿ ರೆಡ್ಡಿ ದಾಖಲೆಯ ಮೊತ್ತಕ್ಕೆ ಲಡ್ಡು ಖರೀದಿಸಿದ್ದಾರೆ. 

ಕೋವಿಡ್ ಕಾರಣದಿಂದ 2020ರಲ್ಲಿ ಬಾಲಾಪುರದಲ್ಲಿ ಗಣಪತಿ(Balapur Ganapa) ಚೌತಿ ಹಬ್ಬ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇಷ್ಟೇ ಅಲ್ಲ ಲಡ್ಡು(Balapur Laddu) ಹರಾಜು ಕೂಡ ನಡೆದಿಲ್ಲ. 2021ರಲ್ಲಿ ಬಾಲಾಪುರ ಲಡ್ಡು 18.90 ಲಕ್ಷ ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿತ್ತು. 2019ರಲ್ಲಿ 17.6 ಲಕ್ಷ ರೂಪಾಯಿಗೆ ಲಡ್ಡು ಹರಾಜಾಗಿತ್ತು. ಈ ಬಾರಿ 20 ಲಕ್ಷ ರೂಪಾಯಿಗೆ ಹರಾಜಾಗುವ ವಿಶ್ವಾಸವನ್ನು ಬಾಲಾಪುರ ಗಣೇಶೋತ್ಸವ(Ganesh Festival) ಸಮಿತಿ ವ್ಯಕ್ತಪಡಿಸಿತ್ತು. ಆದರೆ ಅಂತಿಮವಾಗಿ 25.60 ಲಕ್ಷ ರೂಪಾಯಿಗೆ ಹರಾಜಾಗುವ ಮೂಲಕ ದಾಖಲೆ ಬರೆದಿದೆ.

ಹುಬ್ಬಳ್ಳಿ ಗಣಪನಿಗೆ 3 ಸಾವಿರ ಪೊಲೀಸರಿಂದ ಭದ್ರತೆ!

ಲಡ್ಡು ಹರಾಜಿನಲ್ಲಿ(Balapaur Laddu Auction) ಪಾಲ್ಗೊಳ್ಳುವವರು 2,100 ರೂಪಾಯಿ ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬೇಕಿತ್ತು. ತೆಲಂಗಾಣ, ಆಂಧ್ರ ಪ್ರದೇಶದಿಂದ ಜನರು, ಉದ್ಯಮಿಗಳು ಈ ಹರಾಜಿಗೆ ಆಗಮಿಸಿದ್ದರು. ಬಾಲಾಪುರದಲ್ಲಿ ಲಡ್ಡು ಹರಾಜು ಮಾಡುವ ಸಂಪ್ರದಾಯ 1994ರಿಂದ ಆರಂಭಗೊಂಡಿತು. ಬಳಿಕ ಪ್ರತಿ ವರ್ಷ ದಾಖಲೆಯ ಮೊತ್ತಕ್ಕೆ ಲಡ್ಡು ಹರಾಜಾಗುತ್ತಲೆ ಬಂದಿದೆ. 1994ರಲ್ಲಿ ಮೊದಲ ಲಡ್ಡು ಹರಾಜಿನಲ್ಲಿ ಕೋಲನ್ ಮೊಹನ್ ರೆಡ್ಡಿ ಅನ್ನೋ ರೈತ 450 ರೂಪಾಯಿಗೆ ಹರಾಜು ಗೆದ್ದುಕೊಂಡಿದ್ದರು.

ಇದೀಗ ಇದೇ ಲಡ್ಡು ಹರಾಜು 24.60 ಲಕ್ಷ ರೂಪಾಯಿಗೆ ಬಂದಿದೆ. ಹರಾಜಿನಿಂದ ಬಂದ ಹಣವನ್ನು ಬಾಲಾಪುರ ಗಣಪತಿ ದೇವಸ್ಥಾನ ಅಭಿವೃದ್ಧಿ ಹಾಗೂ ಇತರ ದೇವಾಲಯದ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ದೇಶಾದ್ಯಂತ ಬಾಲಾಪುರ ಲಡ್ಡು ಎಂದೇ ಖ್ಯಾತಿಗೊಂಡಿದ್ದರೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಂಗಾರು ಲಡ್ಡು ಎಂದೇ ಹೆಸರುವಾಸಿಯಾಗಿದೆ.

 

ಇಂದು ಹಿಂದೂ ಗಣಪತಿ ಮೆರವಣಿಗೆ: ಕೇಸರಿಮಯವಾದ ಶಿವಮೊಗ್ಗ, ಪೊಲೀಸ್‌ ಸರ್ಪಗಾವಲು..!

28 ವರ್ಷಗಳೇ ದಾಖಲೆ ಮೊತ್ತ!
ಪ್ರಸಿದ್ಧ ಬಾಲಾಪುರ ಗಣಪತಿಯ 21 ಕೆ.ಜಿ ಲಡ್ಡು ಪ್ರಸಾದ ದಾಖಲೆಯ 25 ಲಕ್ಷಕ್ಕೆ ಶುಕ್ರವಾರ ಹರಾಜಾಗಿದೆ. ಬಾಲಾಪುರ ಗ್ರಾಮದ ನಿವಾಸಿ ವಿ.ಲಕ್ಷ್ಮಾ ರೆಡ್ಡಿ ಎಂಬ ಮಹಿಳೆ ಲಡ್ಡು ಪ್ರಸಾದವನ್ನು ಖರೀದಿಸಿದ್ದಾರೆ. ಕಳೆದ 28 ವರ್ಷಗಳಲ್ಲೇ ಮೊದಲ ಬಾರಿ ಅತೀ ಹೆಚ್ಚು ಹಣಕ್ಕೆ ಪ್ರಸಾದ ಹರಾಜಾಗಿದೆ. ಹರಾಜಿನಲ್ಲಿ ಗೆದ್ದವರಿಗೆ ಪ್ರಸಾದ ಆಯುರಾರೋಗ್ಯ ಹಾಗೂ ಯಶಸ್ಸು ತಂದುಕೊಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಕಳೆದ ಬಾರಿ ಲಡ್ಡು ಪ್ರಸಾದವನ್ನು 18.9 ಲಕ್ಷಕ್ಕೆ ಮಾರಾಟವಾಗಿತ್ತು. ಹರಾಜಿನಿಂದ ಬಂದ ಹಣದಿಂದ ದೇವಸ್ಥಾನ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.

Follow Us:
Download App:
  • android
  • ios