ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ, ಮುಸ್ಲಿಂ ಭಾಂದವರಿಂದ ಪೂಜೆ
ತುಮಕೂರು ನಗರದಲ್ಲಿ ಅದ್ಧೂರಿಯಾಗಿ ಹಿಂದೂ ಮಹಾಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ. ನಗರದ ಟೌನ್ ಹಾಲ್ ವೃತ್ತದಲ್ಲಿನ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಯಿಂದ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿತ್ತು.
ತುಮಕೂರು (ಸೆ.17): ನಗರದಲ್ಲಿ ಇಂದು ಅದ್ಧೂರಿಯಾಗಿ ಹಿಂದೂ ಮಹಾಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ. ನಗರದ ಟೌನ್ ಹಾಲ್ ವೃತ್ತದಲ್ಲಿನ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಯಿಂದ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿತ್ತು. ಗಣಪತಿ ದಿನದಿಂದ ಹಿಡಿದು ಪ್ರತಿದಿನ ವಿಶೇಷ ಪೂಜೆ ಮಾಡಿ ಗಣಪತಿಯನ್ನು ಪೂಜಿಸಲಾಗಿತ್ತು. ಇಂದು ತುಮಕೂರು ನಗರದ ಕಾಲ್ ಟಾಕ್ಸ್ ಸರ್ಕಲ್, ಹಳೇ ಮಾರುಕಟ್ಟೆ ರಸ್ತೆ ಹೀಗೆ ಹಲವು ರಸ್ತೆಯಲ್ಲಿ ಮೆರವಣಿಗೆ ಮಾಡಲಾಯ್ತು. ಬೆಳಗ್ಗೆಯಿಂದ ಟೌನ್ ಸರ್ಕಲ್ ಬಳಿ ಸಾವಿರಾರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು, ಮೆರವಣಿಗೆಯಲ್ಲಿ ವೀರಸಾವರ್ಕರ್ ಸೇರಿದಂತೆ ರಾಜ್ಯದ ಸ್ವತಂತ್ರ ಹೋರಾಟಗಾರರ ಭಾವಚಿತ್ರಗಳು ಮೆರವಣಿಗೆಯಲ್ಲಿ ರಾರಾಜಿಸಿದವು.., ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಹಾಗೂ ಪ್ರವೀಣ್ ನೆಟ್ಟ್ಯಾರು ಭಾವಚಿತ್ರಗಳು ಕಂಡ ಬಂದವು, ಅಲ್ಲದೆ ಆಂಜನೇಯ ಮೂರ್ತಿ, ಶಿವಾಜಿ ಮೂರ್ತಿಗಳನ್ನು ಕೂಡ ಮೆರವಣಿಗೆ ಮಾಡಲಾಯ್ತು. ಮಹಾರಾಷ್ಟ್ರದಿಂದ ಬಂದ ಕಲಾವಿದರು ಡೋಳ್ಳು ಕುಣಿತ, ವೀರಗಾಸೆ, ಆನೆ ಮೆರವಣಿಗೆ ಸೇರಿದ್ದಂತೆ ಹಲವು ಜಾನಪದ ಕಲಾತಂಡಗಳು ಗಣಪತಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸೇರಿದ್ದ ಜನರಿಗೆ ವೀರ ಸಾವರ್ಕರ್ ಅವರ ಕುರಿತಾದ ಪುಸ್ತಕಗಳನ್ನು ಹಂಚಲಾಗುತ್ತಿತ್ತು.
ಮುಸ್ಲಿಂ ಭಾಂದವರಿಂದ ಪೂಜೆ ಸಲ್ಲಿಕೆ : ಆಂಜನೇಯ ವೇಷಧಾರಿಗೆ ಹೂ ಮಾಲೆ ಅರ್ಪಣೆ
ತುಮಕೂರು ಟೌನ್ ಹಾಲ್ ನಲ್ಲಿ ಒಂದು ಕಡೆ ನಾಗರಕಟ್ಟೆ ಮತ್ತೊಂದು ಕಡೆ ದರ್ಗಾ ಎರಡು ಇರುವುದರಿಂದ ಈ ಪ್ರದೇಶ ಧಾರ್ಮಿಕ ಸೂಕ್ಷ್ಮ ಸ್ಥಳವಾಗಿದೆ. ಸಾಕಷ್ಟು ಬಾರಿ ಧಾರ್ಮಿಕ ಸಂಘರ್ಷ ಸನ್ನಿವೇಶಗಳು ಇದೇ ಸ್ಥಳದಿಂದ ಹುಟ್ಟಿಕೊಂಡ ಉದಾಹರಣೆಗಳಿವೆ. ಹೀಗಾಗಿ ಟೌನ್ ಹಾಲ್ ವೃತ್ತದ ನಾಗರಕಟ್ಟೆಯಲ್ಲಿ ಸ್ಥಾಪಿಸಲಾಗಿದ್ದ ಹಿಂದೂ ಮಹಾಗಣಪತಿ ಸಾಕಷ್ಟು ಕಾವು ಪಡೆದುಕೊಂಡಿತ್ತು.
ಹೊಸಪೇಟೆ: ಗಣಪತಿ ವಿಸರ್ಜನೆ ವೇಳೆ ಭಾರೀ ದುರಂತ, ಕಾಲುವೆಗೆ ಬಿದ್ದ ಕ್ರೇನ್!
ಈ ಮಧ್ಯೆ ಇಂದು ಈ ಮೆರವಣಿಗೆಯಿಂದಾಗಿ ಪೊಲೀಸ್ ಭದ್ರತೆಯನ್ನು ಕೂಡ ಹೆಚ್ಚಲಾಗಿತ್ತು. ಆದರೆ ದರ್ಗಾ ಎದುರು ಗಣಪತಿ ಉತ್ಸವ ಬರುತ್ತಿದ್ದಂತೆ ಮುಸ್ಲಿಂ ಸಮುದಾಯದ ಮುಖಂಡರು ಸ್ವಯಂ ಪ್ರೇರಣೆಯಿಂದ ಬಂದು ಹಿಂದೂ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಭಾವ ಮೆರೆದರು. ಅಲ್ಲದೆ ಆಂಜನೇಯ ವೇಷಧಾರಿಗೆ ಹೂ ಮಾಲೆ ಕೂಡ ಹಾಕಿ ಸಂಭ್ರಮಿಸಿದ್ರು. ಅಲ್ಲದೆ ಮಠಾಧೀಶರಿಗೆ ಹಾಗೂ ರಾಜಕೀಯ ಮುಖಂಡರಿಗೂ ಕೂಡ ಹೂವಿನ ಮಾಲೆ ಹಾಕಿದರು. ಈ ಬೆಳವಣಿಗೆಯಿದ ಪೊಲೀಸರು ನಿಟ್ಟೂಸಿರು ಬಿಡುವಂತಾಯ್ತು.
ಚಿತ್ರದುರ್ಗ ಹಿಂದೂ ಮಹಾಗಣಪತಿ ಶೋಭಾಯಾತ್ರೆ: ಸಿಟಿ ಫುಲ್ ಕೇಸರಿ, ಶಾಲೆ-ಕಾಲೇಜುಗಳಿಗೆ ರಜೆ
ಮೆರವಣಿಗೆಯಲ್ಲಿ ಕಾಣಿಸಿಕೊಂಡ ಸ್ವಾಮೀಜಿಗಳು ಹಾಗೂ ರಾಜಕಾರಣಿಗಳು:
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ತುಮಕೂರು ಶಾಸಕ ಜ್ಯೋತಿಗಣೆಶ್, ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮಿ, ಬೆಳ್ಳಾವಿ ಕರದ ಮಠದ ಶ್ರೀಗಳು ಸೇರಿದಂತೆ ಹಲವು ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಜೊತೆಗೆ ಮರೆವಣಿಗೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೂಬಸ್ತ್ ಹಾಕಲಾಗಿತ್ತು. ಎಸ್.ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾರ್ಗದರ್ಶನದ ಮೆರೆಗೆ ಎಎಸ್‌ಪಿ ಉದೇಶ್ ಭದ್ರತೆ ಉಸ್ತುವಾರಿ ವಹಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣಪತಿ ಮೆರವಣಿಗೆ ಪೂರ್ಣಗೊಂಡಿತ್ತು.