ಉಪ್ಪಿನಂಗಡಿ: ಭಾರಿ ಮಳೆಗೆ ಹೆದ್ದಾರಿ ತಡೆಗೋಡೆ ಕುಸಿತ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರಣಕ್ಕೆ ನಿರ್ಮಿಸಲಾದ 20 ಅಡಿಗಿಂತಲೂ ಎತ್ತರದ ತಡೆಗೋಡೆ ಮಗುಚಿ ಬಿದ್ದಿದ್ದು, ವ್ಯಾಪಕ ಹಾನಿಯುಂಟಾಗಿದೆ.

Highway barrier collapsed due to heavy rains in uppinangadi rav

ಉಪ್ಪಿನಂಗಡಿ (ಜು.24) :  ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಸತತ ಮಳೆಗೆ ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರಣಕ್ಕೆ ನಿರ್ಮಿಸಲಾದ 20 ಅಡಿಗಿಂತಲೂ ಎತ್ತರದ ತಡೆಗೋಡೆ ಮಗುಚಿ ಬಿದ್ದಿದ್ದು, ವ್ಯಾಪಕ ಹಾನಿಯುಂಟಾಗಿದೆ.

ಇಲ್ಲಿನ ನಟ್ಟಿಬೈಲು ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಸಂಸ್ಥೆಯ ತಂತ್ರಜ್ಞರು ನಿರ್ಮಿಸುತ್ತಿದ್ದ ತಡೆಗೋಡೆಯ ಬಗ್ಗೆ ಆರಂಭದಿಂದಲೇ ಸ್ಥಳೀಯರು ಅಪಾಯ ಸಂಭವಿಸುವ ಎಚ್ಚರಿಕೆಯನ್ನು ವ್ಯಕ್ತಪಡಿಸಿದ್ದರು. ಈಗ ಒಂದೆರಡು ದಿನದ ಬಿರುಸಿನ ಮಳೆಗೆ ಕಾಂಕ್ರೀಟ್‌ನಿಂದ ನಿರ್ಮಾಣವಾಗಿದ್ದ ತಡೆಗೋಡೆಗಳು ಧರೆಗುರುಳಿದ್ದು, ಪರಿಣಾಮ ಹೆದ್ದಾರಿ ಅಗಲೀಕರಣದ ವೇಳೆ ಅಳವಡಿಸಲಾದ ಬೃಹತ್‌ ಗಾತ್ರದ ವಿದ್ಯುತ್‌ ಕಂಬಗಳು, ಹೆದ್ದಾರಿ ಮೇಲ್ಭಾಗದಲ್ಲಿ ನಿರ್ಮಿಸಿದ ಚರಂಡಿ ವ್ಯವಸ್ಥೆಗಳು ಪತನಗೊಂಡಿದೆ.

 

ಭಾರೀ ಮಳೆ: ಅಪಾಯಮಟ್ಟದಲ್ಲಿ ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು!

ಇದರಿಂದಾಗಿ ನೀರು ಸರಾಗವಾಗಿ ಹರಿಯಲಾಗದೆ ನಟ್ಟಿಬೈಲು ಪ್ರದೇಶದ ಕೃಷಿ ಭೂಮಿ ನೆರೆ ನೀರಿನಿಂದ ಜಲಾವೃತವಾಗಿದೆ. ಅದೃಷ್ಟವಶಾತ್‌ ಯಾವುದೇ ಜೀವ ಹಾನಿ ಸಂಭವಿಸದಿದ್ದರೂ ವಿದ್ಯುತ್‌ ಕಂಬದಲ್ಲಿನ ತಂತಿಗಳಲ್ಲಿ ವಿದ್ಯುತ್‌ ಪ್ರಹರಿಸುತ್ತಿದ್ದರೆ ಹೆಚ್ಚಿನ ಅಪಾಯವುಂಟಾಗುವ ಸಾಧ್ಯತೆ ಇತ್ತು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ಹೆದ್ದಾರಿ ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ವೇಳೆ ನಿರ್ಲಕ್ಷ್ಯವಹಿಸಿರುವ ನಡೆ ಕಂಡು ಬರುತ್ತಿದ್ದು, ಎಲ್ಲೆಲ್ಲಿ ತಡೆಗೋಡೆಗಳು ನಿರ್ಮಿಸಲ್ಪಟ್ಟಿದೆಯೋ ಅಲ್ಲೆಲ್ಲಾ ಸಮರ್ಪಕ ಕಾಮಗಾರಿ ನಡೆದಿರುವ ಬಗ್ಗೆ ಪರಿಶೀಲನೆ ನಡೆಸಲು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಡೆಕ್ಕಲ್‌ನಲ್ಲಿ ರಸ್ತೆಗೆ ಗುಡ್ಡ ಜರಿತ:

ಸತತ ಮಳೆಯಿಂದಾಗಿ ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್‌ ಸಂಪರ್ಕ ರಸ್ತೆಯಲ್ಲಿ ಎರಡು ಭಾಗದಲ್ಲಿ ಗುಡ್ಡ ಜರಿದು ರಸ್ತೆ ಸಂಪೂರ್ಣ ಸಂಚಾರಕ್ಕೆ ತಡೆ ಹಿಡಿಯಲ್ಪಟ್ಟಿದ್ದು, ಜನ ಸಂಚಾರಕ್ಕೆ ಅಡಚನೆಯನ್ನುಂಟು ಮಾಡಿದೆ. ಘಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ ನೀಡಿ ರಸ್ತೆಯಲ್ಲಿರುವ ಗುಡ್ಡದ ಮಣ್ಣನ್ನು ತೆರವುಗೊಳಿಸಲು ನಿರ್ದೇಶನ ನೀಡಿದ್ದಾರೆ.

Chikkamagaluru floods: ವರುಣನ ಆರ್ಭಟ: ಕಾಫಿಯ ನಾಡು ತತ್ತರ; ಜಮೀನುಗಳೆಲ್ಲ ಜಲಾವೃತ!

Latest Videos
Follow Us:
Download App:
  • android
  • ios