ಧಾರವಾಡದಲ್ಲಿ ಇಸ್ಪೀಟ್ ಅಡ್ಡೆಗಳ ಹಾವಳಿ: ದಂಧೆಕೋರರಿಗೆ ಪೋಲಿಸರ ಭಯವಿಲ್ಲ?
ಮೊದಲೆ ವಿದ್ಯಾಕಾಶಿ ಧಾರವಾಡದಲ್ಲಿ ಅಕ್ರಮ ದಂದೆಗಳು ತಲೆ ಎತ್ತಿ ನಿಲ್ಲುತ್ತಿವೆ. ಅದರಲ್ಲೂ ಇಸ್ಪೀಟ್ ಆಡುವವರು, ಮತ್ತು ಆಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಅದರಲ್ಲೂ ಶಹರ ಮತ್ತು ಗ್ರಾಮೀಣ ಭಾಗದಲ್ಲಿ ಇಸ್ಪೀಟ್ ಧಂದೆ ಕೋರರ ಹಾವಳಿ ಜೋರಾಗಿದೆ.
ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಅ.31): ಮೊದಲೆ ವಿದ್ಯಾಕಾಶಿ ಧಾರವಾಡದಲ್ಲಿ ಅಕ್ರಮ ದಂದೆಗಳು ತಲೆ ಎತ್ತಿ ನಿಲ್ಲುತ್ತಿವೆ. ಅದರಲ್ಲೂ ಇಸ್ಪೀಟ್ ಆಡುವವರು, ಮತ್ತು ಆಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಅದರಲ್ಲೂ ಶಹರ ಮತ್ತು ಗ್ರಾಮೀಣ ಭಾಗದಲ್ಲಿ ಇಸ್ಪೀಟ್ ಧಂದೆ ಕೋರರ ಹಾವಳಿ ಜೋರಾಗಿದೆ. ಅದರಲ್ಲೂ ಕಳೆದ ವರ್ಷ ಇದೆ ದಿಪಾವಳಿಯ ಸಮಯದಲ್ಲಿ ಪ್ರತಿಷ್ಠಿತ ರಮ್ಯಾ ರೆಸಿಡೆನ್ಸಿ ಮೆಲೆ ದಾಳಿಯಾದ ಸಮಯದಲ್ಲಿ ಒಂದು ಕೋಟಿಗೂ ಅಧಿಕ ಹಣ ಸಿಕ್ಕಿತ್ತು. ಆದರೆ ಪೋಲಿಸ್ ಇಲಾಖೆ ತೋರಿಸಿದ್ದು ಕೇವಲ 50 ಲಕ್ಷ ಮಾತ್ರ. ಆದರೆ ಆ ಸಮಯದಲ್ಲಿ ಸಿಕ್ಕವರು ದೊಡ್ಡ ದೊಡ್ಡ ರಾಜಕಾರಣಿಗಳು,ಲಾಕ್ ಆಗಿದ್ರು.
ಆದರೆ ಒಂದು ಕಡೆ ಇಸ್ಟೆಟ್ ಆಡೋರಗಿಂತ ಹಣ ಇನ್ವೆಸ್ಟ ಮಾಡಿ ಆಡಿಸುವವರೆ ಹೆಚ್ಚಾಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ತೋಟ ಗದ್ದೆ ಗಳಲ್ಲಿ ಇಸ್ಟೆಟ್ ಗ‌್ಯಾಂಗ್ ಗಳು ತಲೆ ಎತ್ತಿವೆ. ಕಳೆದ ವಾರವಷ್ಟೆ ಹುಬ್ಬಳ್ಳಿಯ ಗ್ರಾಮಿಣ ಭಾಗದಲ್ಲಿ ಪಿ ಐ ಮುರಗೇಶ ಚನ್ನನ್ನವರ ಇಸ್ಟೆಟ್ ಧಂದೆ ಕೋರರಿಗರ ಹೆಡೆಮೂರೆ ಕಟ್ಟಿದ್ದರು. ಇನ್ನು ಧಾರವಾಡದ ಟಿಪ್ಪು ಸರ್ಕಲ್ ಬಳಿಯ ಹೊಟೆಲ್ ವೊಂದರಲ್ಲಿ ಇಸ್ಟೆಟ್ ಧಂದೆಕೋರರ ಟಿಮ್ ಪುಲ್ ಆಕ್ಡಿವ್ ಆಗಿ ಕೆಲಸ ಮಾಡುತ್ತಿದೆ ಯಾವ ಜಾಗಕ್ಕೆ ಹೋದರೆ ಸೇಪ್ ಆಗಿ ಆಡಬಹುದು ಎಂದು ಚರ್ಚೆ ಮಾಡಿ ಸ್ಥಳ ನಿಯೋಜನೆ ಮಾಡಿ ಇಸ್ಟೆಟ್ ಆಡಲಿಕ್ಕೆ ಹೋಗ್ತಾರೆ.
ಸಾಮಾಜಿಕ ಸಮಾನತೆಗೆ ಜಾತಿ, ಜನಗಣತಿ ಅಗತ್ಯ: ಬಿ.ಕೆ.ಹರಿಪ್ರಸಾದ್
ಆದರೆ ಇಸ್ಟೆಟ್ ಧಂದೆ ಕೋರರಿಗೆ ಪೋಲಿಸರ ಯಾವ ಭಯವಿಲ್ಲದಂತಾಗಿದೆ. ಇವರು ಪ್ರತಿ ತಿಂಗಳು ಯಾರಿಗೆ ಎನ್ ಮುಟ್ಟಿಸಬೇಕು ಅದನ್ನ ಸರಿಯಾಗಿ ಮುಟ್ಟಿಸಿ ಜೂಜಾಟವನ್ನ ಆಡಿಸುತ್ತಿದ್ದಾರೆ ಅನ್ನೋ ಆರೋಪಗಳು ಸದ್ಯ ಕೇಳಿ ಬರುತ್ತಿವೆ.ಇಂತಹ ಇಸ್ಟೆಟ್ ಧಂದೆಯಿಂದ ಅದೆಷ್ಟೋ ಯುವಕರು ಮನೆ ಮಠ ಕಳೆದುಕ್ಕೊಂಡು ಆತ್ಮಹತ್ಯೆ ಗೆ ಯತ್ನಿಸಿದ ಉದಾಹರಣೆಗಳು ಸಾಕಷ್ಟಿವೆ. ಧಾರವಾಡದ ಒಂದು ಗ‌್ಯಾಂಗ್ ಇದೆ. ಇವರು ಪ್ರತಿನಿತ್ಯ ಜೂಜಾಟ ಆಡೊಸೋದೆ ಇವರ ಕಾಯಕ ಇವರು ಇಗಾಗಲೆ ಹಲವಾರು ಇಸ್ಟೆಟ್ ದಾಳಿಯಲ್ಲಿ ಸಿಕ್ಕು ಶಿಕ್ಷೆ ಅನುಭವಿಸಿದ್ರು. ಮತ್ತೆ ಅದೆ ಧಂದೆಯಲ್ಲಿ ಪುಲ್ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನು ಅಂತವರ ಕೆಲವೊಂದಿಷ್ಟು ಹೆಸರುಗಳನ್ನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ..ಬಿಲಾಲ್ ಖತಿಬ್ ಮುಖ್ಯವಾಗಿ ಹಣ ಫೈನಾನ್ಸ್ ಮಾಡೋದೆ ಇವರ ಕೆಲಸ ಅದರಲ್ಲಿ ಇನ್ನುಳಿದವರು ಜೂಜಾಟ ಆಡಿಸುವವರು ಸೌಖತ್ ಬೇಫಾರಿ, ಸಾಧಿಕ್ ಕುಲಗೂರು,ಅಸ್ಪಕ್ ಬೇಫಾರಿ, ಮೈನು ಕಬಾಡಿ, ಮುನ್ನಾ ಭಾಯಿ, ಲಾಲ್ ಗರಗ ಇವರೆಲ್ಲರೂ ಧಾರವಾಡದಲ್ಲಿ ಅದರಲ್ಲೂ ಶಾಸಕ ವಿನಯ ಕುಲಕರ್ಣಿ ಜೊತೆ ಪೋಟೋ ತೆಗೆಸಿಕ್ಕೊಂಡು ಅವರ ಹೇಸರಿಗೆ ಕಳಂಕ ತರುವ ಕೆಲಸವನ್ನ ಮಾಡುತ್ತಿದ್ದಾರೆ. ಆದರೆ ಇವರೆಲ್ಲ ಇಗಾಗಲೆ ಹಲವಾರು ಭಾರಿ ಜೂಜಾಟದಲ್ಲಿ ಇವರು ಧಾರವಾಡ ಶಹರ ಮತ್ತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಇವರ ಹೆಸರಿನಲ್ಲಿ ಕೇಸ್ ಗಳು ಕೂಡಾ ದಾಖಲಾಗಿವೆ.
ಆದರೆ ಯಾವ ಕೇಸಗೂ ಬಗ್ಗದೆ ನಿರಾಳವಾಗಿ ಎಲ್ಲೆಂದರಲ್ಲಿ ಇಸ್ಟೆಟ್ ಅಡ್ಡೆಗಳನ್ನ ಆರಂಭ ಮಾಡಿ ಯುವಕರ ಬಾಳನ್ನ ಹಾಳು ಮಾಡುತ್ತಿದ್ದಾರೆ...ಇನ್ನು ಈ ಕುರಿತು ಪೋಲಿಸ್ ಇಲಾಖೆ ಇಂತವರ ಮೆಲೆ ನಿಗಾ ಇಡಬೇಕು ಇಲ್ಲದಿದ್ರೆ ಧಾರವಾಡ ಜಿಲ್ಲೆಯನ್ನ ಜೂಜಾಟದ ಜಿಲ್ಲೆಯನ್ನಾಗಿ ಮಾಡ್ತಾರೆ. ಆದರೆ ಕೇವಲ ಅವರು ಇಸ್ಟೆಟ್ ಆಟದಲ್ಲಿ ಲಾಕ್ ಆಗ್ತಾರೆ. ಬಳಿಕೆ ಬೆಲ್ ಮೆಲೆ ಹೊರಗಡೆ ಬರ್ತಾರೆ. ಇದೆಲ್ಲ ಅವರಿಗೆ ಯಾವುದು ಬಿಸಿ ಮುಟ್ಟಿಲ್ಲ..ಹೀಗೆ ಅರೆಸ್ಟ ಆಗ್ತಾರೆ ನಾಳೆ ಮತ್ತೆ ಬೆಲ್ ಮೆಲೆ ಹೊರಗೆ ಬರ್ತಾರೆ. ಇನ್ನಾದರೂ ಇಂತಹ ಇಸ್ಟೆಟ್ ಅಡಿಸುವವರು ಮತ್ತು ಆಡುವರ ವಿರುದ್ದ ಪೋಲಿಸ್ ಕಮಿಷನರ್ ಯಾವ ಕ್ರಮ ಕೈಗೊಳ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಪಕ್ಷ ಮನೆಯೊಂದು ನಾಲ್ಕು ಬಾಗಿಲು ಆಗಿದೆ: ಸಂಸದ ಮುನಿಸ್ವಾಮಿ
ಇನ್ನೂದರೂ ಶಾಸಕರಿಗಳ ಹೆಸರು ಹೇಳಿ ನಾನು ಶಾಸಕರ ಆತ್ಮಿಯ ಎಂದು ಅದೆಷ್ಟೋ ಪೋಲಿಸ್ ಪೇದೆಗಳಿಗೆ ಭಯ ಹುಟ್ಟಿಸಿ ಇವರು ಪ್ರತಿನಿತ್ಯ ಜೂಜಾಟ ಆಡಿಸುವುದೆ ಇವರ ಕೆಲಸವಾಗಿದೆ. ಈ ಕುರಿತು ನೊಂದವರು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಕೆಲವೊಂದಿಷ್ಟು ಹೆಸರುಗಳನ್ನ ಪ್ರಸ್ತಾಪ ಮಾಡಿದ್ದಾರೆ. ಇನ್ನು ಈ ಹೆಸರುಗಳನ್ನಿಟ್ಟುಕ್ಕೊಂಡು ಆಯಾ ಪೋಲಿಸ್ ಠಾಣೆಯ ಪೋಲಿಸರು, ಮತ್ತು ಕಮಿಷನರ್ ಇವರ ಮೆಲೆ ಹದ್ದಿನ ಕಣ್ಣು ಇಡುತ್ತಾ ಅಥವಾ ಇಂತವರಿಗೆ ಸುಮ್ಮನೆ ಎಲ್ಲವನ್ನೂ ನೋಡಿ ಕಣ್ಣು ಮುಚ್ಚಿ ಕೊಳ್ಳುತ್ತಾ ಎಂಬುದನ್ನ ಕಾಯ್ದು ನೋಡಬೇಕು..ಇನ್ನೋಂದಡೆ ಶಾಸಕರ ಹೆಸರಿಗೆ ಕಳಂಕ ತರೋರನ್ನ ಇಸ್ಟೆಟ್ ಧಂದೆ ಕೋರರಿಗೆ ಪೋಲಿಸ್ ಇಲಾಖೆ ಹೆಡೆಮೂರೆ ಕಟ್ಟಬೇಕಿದೆ.