Asianet Suvarna News Asianet Suvarna News

ಇನ್ಮುಂದೆ ತಿಂಗಳಿಗೆ 2 ಬಾರಿ ಜನತಾ ದರ್ಶನ; ಸಚಿವ ಸುಧಾಕರ್

ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣÜ ಸಚಿವ ಡಾ.ಕೆ.ಸುಧಾಕರ್‌ ಆರಂಭಿಸಿರುವ ಜನತಾ ದರ್ಶನಕ್ಕೆ ಶನಿವಾರ ಕ್ಷೇತ್ರದ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಾಲುಗಟ್ಟಿನಿಂತು ತಮ್ಮ ಆಹವಾಲು ಸಲ್ಲಿಸಿದರು. ನಿರೀಕ್ಷೆಗೂ ಮೀರಿ ಜನ ಸ್ಪಂದನಕ್ಕೆ ಆಗಮಿಸಿದ್ದರಿಂದ ಸಚಿವ ಸುಧಾಕರ್‌ ಕೆಲಕಾಲ ದಂಗಾದರು.

Henceforth Janata Darshan 2 times a month says Minister Sudhakar rav
Author
First Published Nov 20, 2022, 1:15 PM IST

ಚಿಕ್ಕಬಳ್ಳಾಪುರ (ನ.20) : ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣÜ ಸಚಿವ ಡಾ.ಕೆ.ಸುಧಾಕರ್‌ ಆರಂಭಿಸಿರುವ ಜನತಾ ದರ್ಶನಕ್ಕೆ ಶನಿವಾರ ಕ್ಷೇತ್ರದ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಾಲುಗಟ್ಟಿನಿಂತು ತಮ್ಮ ಆಹವಾಲು ಸಲ್ಲಿಸಿದರು. ನಿರೀಕ್ಷೆಗೂ ಮೀರಿ ಜನ ಸ್ಪಂದನಕ್ಕೆ ಆಗಮಿಸಿದ್ದರಿಂದ ಸಚಿವ ಸುಧಾಕರ್‌ ಕೆಲಕಾಲ ದಂಗಾದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನತಾದರ್ಶನದಲ್ಲಿ ಮಾತನಾಡಿದ ಅವರು, ಮೊದಲ ಜನತಾದರ್ಶನ ಆದ ಕಾರಣ ಇಂದು ಹೆಚ್ಚು ಅರ್ಜಿಗಳು ಬಂದಿವೆ. ಮುಂದಿನ ಕಾರ್ಯಕ್ರಮಗಳಲ್ಲಿಯೂ ಇದೇ ರೀತಿಯಲ್ಲಿ ಅರ್ಜಿಗಳು ಬಂದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ ಎಂದೇ ಅರ್ಥ. ಕಡಿಮೆಯಾದರೆ ಆಡಳಿತ ವೇಗ ಪಡೆದಿದೆ ಎಂದು ಅರ್ಥವೆಂದು ಅಧಿಕಾರಿಗಳಿಗೆ ಸಚಿವ ಡಾ.ಕೆ.ಸುಧಾಕರ್‌ ಪರೋಕ್ಷ ಎಚ್ಚರಿಕೆ ನೀಡಿದರು.

ಯಾರಿಗೂ ತೊಂದರೆ ಆಗದಂತೆ ಹಾಲಿನ ದರ ಏರಿಕೆ: ಸಚಿವ ಸುಧಾಕರ್‌

ಮೂಲ ಸೌಕರ್ಯಕ್ಕೆ ಮನವಿ:

ಸಚಿವರ ಜನತಾ ದರ್ಶನದಲ್ಲಿ ಚರಂಡಿ ನಿರ್ಮಾಣ, ಬೀದಿ ದೀಪ, ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ, ವಸತಿ, ನಿವೇಶನ, ಪಡಿತರ ಚೀಟಿ, ಸಾರಿಗೆ, ರಸ್ತೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೆ ಇನ್ನೂ ಕೆಲವರು ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕುವಂತೆ ಸಚಿವರ ಗಮನ ಸೆಳೆದರು. ಜೊತೆಗೆ ಸರ್ಕಾರದ ಸಾಲ, ಸೌಲಭ್ಯ, ಕೊಳವೆ ಬಾವಿ ಕೊರೆಸಿ ಕೊಡುವಂತೆ ಕೋರಿದರು. ಇನ್ನೂ ಕೆಲವರು ಪೌತಿ ಖಾತೆ, ಖಾತೆ ಬದಲಾವಣೆ, ಜಮೀನು ಸರ್ವೆ, ಖಾಸಗಿ ರಂಗದಲ್ಲಿ ಉದ್ಯೋಗ ಕಲ್ಪಿಸುವಂತೆ ಕೋರಿ ಸಚಿವರಿಗೆ ಮನವಿ ಸಲ್ಲಿಸಿದರು.

ಒಟ್ಟು 342 ಅರ್ಜಿ ಸಲ್ಲಿಕೆ

ಆರೋಗ್ಯ ಸಚಿವರ ಜನತಾ ದರ್ಶನದಲ್ಲಿ ಒಟ್ಟು 342 ಅರ್ಜಿಗಳು ಸಲ್ಲಿಕೆಯಾಗಿವೆ. ಜನತಾ ದರ್ಶನದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಕುರಿತು ಶಾಸಕರ ಕಚೇರಿಯಿಂದಲೂ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳು ಚಿಕ್ಕಬಳ್ಳಾಪುರ ನಗರದಲ್ಲಿ ಎರಡು ಮತ್ತು ಮಂಚೇನಹಳ್ಳಿ ತಾಲೂಕಿನಲ್ಲಿ ಒಂದು ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದರು.

ಸಚಿವ ಜನತಾದರ್ಶನದಲ್ಲಿ ಜಿಲ್ಲಾಕಾರಿ ಎನ್‌.ಎಂ.ನಾಗರಾಜ್‌, ಜಿಪಂ ಸಿಇಒ ಪಿ.ಶಿವಶಂಕರ್‌, ಎಸ್ಪಿ ಡಿ.ಎಲ್‌.ನಾಗೇಶ್‌, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಇದ್ದರು.

ಜಾತಿಗಣತಿ ವರದಿ ಕಾಂಗ್ರೆಸ್‌ ಸೋರಿಕೆ ಮಾಡಿರಲಿಲ್ಲವೇ?: ಸುಧಾಕರ್‌ ವಾಗ್ದಾಳಿ

ಜನಸ್ನೇಹಿ ಆಡಳಿತ ನೀಡುವ ಉದ್ಧೇಶದಿಂದ ಜನತಾದರ್ಶನ ನಡೆಸುತ್ತಿದ್ದು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು. ಸರ್ಕಾರದ ಎಲ್ಲ ಸೇವೆಗಳನ್ನು ಕ್ಷೇತ್ರದ ಜನರ ಮನೆ ಬಾಗಿಲಿಗೆ ಒದಗಿಸುವ ದೃಷ್ಟಿಯಿಂದ ಜನತಾದರ್ಶನ ಕಾರ್ಯಕ್ರಮವನ್ನು ಪುನರಾರಂಭಿಸಲಾಗಿದೆ.

ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವ.

Follow Us:
Download App:
  • android
  • ios