Asianet Suvarna News Asianet Suvarna News

ಜಾತಿಗಣತಿ ವರದಿ ಕಾಂಗ್ರೆಸ್‌ ಸೋರಿಕೆ ಮಾಡಿರಲಿಲ್ಲವೇ?: ಸುಧಾಕರ್‌ ವಾಗ್ದಾಳಿ

ಚುನಾವಣೆ ಹತ್ತಿರವಾದಂತೆ ಕ್ಷುಲ್ಲಕ ವಿಚಾರಗಳನ್ನೆತ್ತಿ ಸುಳ್ಳು ಆರೋಪ ಮಾಡುವುದನ್ನು ಕಾಂಗ್ರೆಸ್‌ ನಾಯಕರು ಕರಗತ ಮಾಡಿಕೊಂಡಿದ್ದಾರೆಂದು ಟೀಕಿಸಿದ ಸುಧಾಕರ್‌ 

Minister Dr K Sudhakar Slams Congress grg
Author
First Published Nov 19, 2022, 3:30 AM IST

ಚಿಕ್ಕಬಳ್ಳಾಪುರ(ನ.19): ಹಿಂದುಳಿದ ವರ್ಗಗಳ ಆಯೋಗದಿಂದ ಹಿಂದಿನ ಸರ್ಕಾರದಲ್ಲಿ ನಡೆಸಿದ ಜಾತಿ ಗಣತಿಯ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದ ಕಾಂಗ್ರೆಸ್‌ ನಾಯಕರು, ಪ್ರತಿ ಜಿಲ್ಲೆಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ವರದಿಯನ್ನು ಸೋರಿಕೆ ಮಾಡಿದ್ದರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಆರೋಪಿಸಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸರ್‌.ಎಂ.ವಿಶ್ವೇಶ್ವರಯ್ಯ ಎಂಪಿಸಿಎಸ್‌ ನೌಕರರ ಭವನ ನಿರ್ಮಾಣಕ್ಕೆ ಎಪಿಎಂಸಿ ಮಾರುಕಟ್ಟೆಬಳಿ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಮಾಹಿತಿಯನ್ನು ಸರ್ಕಾರ ಕಳವು ಮಾಡುತ್ತಿದೆಯೆಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಚುನಾವಣೆ ಹತ್ತಿರವಾದಂತೆ ಕ್ಷುಲ್ಲಕ ವಿಚಾರಗಳನ್ನೆತ್ತಿ ಸುಳ್ಳು ಆರೋಪ ಮಾಡುವುದನ್ನು ಕಾಂಗ್ರೆಸ್‌ ನಾಯಕರು ಕರಗತ ಮಾಡಿಕೊಂಡಿದ್ದಾರೆಂದು ಟೀಕಿಸಿದರು.

ಸಿದ್ದರಾಮಯ್ಯ ಬಾದಾಮಿ ‘ಕೈ’ ಬಿಟ್ರಾ?

ಪ್ರಕರಣದ ತನಿಖೆಗೆಗೆ ಸಿದ್ಧತೆ

ಕಾಂಗ್ರೆಸ್‌ ನಾಯಕರು ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ಮಾತನಾಡಿ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ಅವರು ಉತ್ಪ್ರೇಕ್ಷೆ ಮಾಡಿ ಮಾತನಾಡುತ್ತಾರೆ. ಆದರೆ ಮುಖ್ಯಮಂತ್ರಿಗಳು ಈಗಾಗಲೇ ತನಿಖೆಗಾಗಿ ಕಾನೂನಿನ ಸಲಹೆ ಪಡೆಯಲು ಸೂಚಿಸಿದ್ದಾರೆ. ಕಾನೂನು ಸಲಹೆಯಂತೆ ಸರ್ಕಾರ ಕ್ರಮ ವಹಿಸಲಿದೆ. ಈ ರೀತಿಯ ರಾಜಕೀಯ ಹುನ್ನಾರ ಮಾಡುವುದು ಬಿಜೆಪಿಯ ಇತಿಹಾಸದಲ್ಲೇ ಇಲ್ಲ. ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆಯುತ್ತಿರುವುದರಿಂದ ಇಂತಹ ವಿಷಯಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಜನರ ಮುಂದೆ ಹೋಗುತ್ತಿದೆ ಎಂದರು.

ಕಾಂಗ್ರೆಸ್‌ನಿಂದ ಜನಗಣತಿ ಸೋರಿಕೆ

ಚುನಾವಣಾ ಆಯೋಗದ ಮೂಲಕ ನಗರ ಪಾಲಿಕೆಗಳು ಎನ್‌ಜಿಒಗೆ ಕೆಲವು ಕೆಲಸಗಳನ್ನು ನೀಡುವುದು ನಿರಂತರವಾಗಿ ನಡೆದುಕೊಂಡು ಬಂದಿದೆ. ಕಾನೂನಿನ ಪರಿಮಿತಿಯಲ್ಲೇ ಈ ಕೆಲಸ ನಡೆಯುತ್ತದೆ. ನಿಯಮ ಪಾಲಿಸದೇ ಇದ್ದಲ್ಲಿ ಆ ಸಂಸ್ಥೆ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಅಷ್ಟಕ್ಕೇ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಲಾಗುತ್ತಿದೆ. ಹಾಗಾದರೆ ಜಾತಿ ಗಣತಿ ವರದಿಯ ಸೋರಿಕೆಗಾಗಿ ವಿರೋಧ ಪಕ್ಷಗಳ ನಾಯಕರು ಎಷ್ಟುಬಾರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ ಸೋಲಿನ ಭಯದಿಂದ ಆರೋಪ ಮಾಡುತ್ತಿದೆ: ಯಡಿಯೂರಪ್ಪ ಕಿಡಿ

ಈ ಸಂದರ್ಭದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌, ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದರೆಡ್ಡಿ, ಸರ್‌.ಎಂ.ವಿಶ್ವೇಶ್ವರಯ್ಯ ಎಪಿಎಂಸಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣಾರೆಡ್ಡಿ, ಮುಖಂಡರಾದ ನಾರಾಯಣಸ್ವಾಮಿ, ಮುನಿರಾಜು, ದ್ಯಾವಣ್ಣ, ಕೃಷ್ಣಮೂರ್ತಿ, ಅವುಲುಕೊಂಡಾಯಪ್ಪ ಸೇರಿದಂತೆ ಮತ್ತಿತರರು ಇದ್ದರು

ಜಾತಿ ಗಣತಿ ಸೋರಿಕೆ

ಕಾಂಗ್ರೆಸ್‌ ಸರ್ಕಾರ ಇದ್ದಾಗ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, 130 ಕೋಟಿ ರು.ಗಳನ್ನು ಖರ್ಚು ಮಾಡಿ ಜಾತಿ ಗಣತಿ ಮಾಡಲಾಗಿತ್ತು. ಆದರೆ ಆ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದೆ ಕಾಂಗ್ರೆಸ್‌ ಅಭ್ಯರ್ಥಿಗಳ ಬಳಿ ಮಾತ್ರ ಹಂಚಿಕೊಳ್ಳಲಾಗಿತ್ತು. ಇದನ್ನು ನಾನು ಬೇಕಿದ್ದರೆ ಈ ಬಗ್ಗೆ ದಾಖಲೆ ಕೊಡುತ್ತೇನೆ. ಜಾತಿ ಗಣತಿಯನ್ನು ಗೌಪ್ಯವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅವರಿಗೆ ಬೇಕಾದವರಿಗೆ ಸೋರಿಕೆ ಮಾಡಲಾಗಿದೆ. ಇದರ ಹೊಣೆಗಾರಿಕೆಯನ್ನು ಕಾಂಗ್ರೆಸ್‌ ನಾಯಕರು ಹೊರುತ್ತಾರೆಯೇ ಎಂದು ಸಚಿವ ಡಾ.ಕೆ.ಸುಧಾಕರ್‌ ಪ್ರಶ್ನೆ ಮಾಡಿದರು.
 

Follow Us:
Download App:
  • android
  • ios