ಹೇಮಾವತಿ ನದಿಯ ಒಡಲು ವಿಷ: ಚಿಕ್ಕಮಗಳೂರು- ಹಾಸನದ ಜೀವದಾತೆಗೆ ಕುತ್ತು
ಹೇಮಾವತಿ ನದಿಗೆ ಕಾಫಿ ಪಲ್ಪರ್ ತ್ಯಾಜ್ಯ- ಜಲಚರಗಳ ಜೀವಕ್ಕೆ ಕುತ್ತು
ದುರ್ವಾಸನೆಯಿಂದ ನಾರುತ್ತಿದೆ ಹೇಮಾವತಿ ನದಿ
ನದಿ ನೀರು ಕುಡಿದವರು ಆಸ್ಪತ್ರೆಗೆ ಸೇರುವುದು ಗ್ಯಾರಂಟಿ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.28): ರೈತರ ಪಾಲಿನ ನೆಚ್ಚಿನ ನದಿ .ನೂರಾರು ಎಕರೆಗೆ ನೀರು ಉಣಿಸಿ,ನೇಗಿಲ ಯೋಗಿಗೆ ಜೀವನ ನೀಡ್ತಿರೂ ಜೀವದಾತೆ. ಊರು ತುಂಬಾ ಹಸಿರು ತುಂಬಿ ಪ್ರಕೃತಿ ಮಾತೆಗೆ ಉಸಿರು ನೀಡ್ತಿರೋ ಜೀವನದಿ. ಆದ್ರೇ ಪ್ರಕೃತಿ ನೀಡ್ತಿರೋ ಉಪಕಾರದ ಸ್ಮರಣೆ ಮನುಷ್ಯನಿಗೆ ಎಲ್ಲಿದೆ ಹೇಳಿ.ಅವನಿಗೆ ತನ್ನ ಸ್ವಾರ್ಥದ ಬದುಕು ಬಿಟ್ರೆ ಬೇರೆನಾದ್ರು ಕಾಣೋದುಂಟ್ಟೆ. ಮನಷ್ಯನ ಸ್ವಾರ್ಥಕ್ಕೆ ಬಲಿಯಾಗ್ತಿರೋ ಈ ಜೀವದಾತೆಯ ಪರಿಸ್ಥಿತಿಯ ಜೊತೆಗೆ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.
ಹೇಮಾವತಿ ನದಿ ಚಿಕ್ಕಮಗಳೂರು ಹಾಗು ಹಾಸನ ಭಾಗದಕ್ಕೆ ಜೀವದಾತೆ ನದಿ. ಸದ್ಯ ಮನುಷ್ಯನ ಸ್ವಾರ್ಥತೆಯಿಂದ ಉಪಯೋಗಕ್ಕೂ ಬರದಾಗೆ ಆಗ್ಬಿಟಿದೆ.ಆದ್ರೇ ನದಿಯ ಕೂಗು,ನೋವು,ಆರ್ತನಾದ ಅದ್ಯಾಕೆ ಮನುಷ್ಯನಿಗೆ ಕೇಳ್ತಿಲ್ವೋ ಗೊತ್ತಿಲ್ಲ,ಹಂತ ಹಂತವಾಗಿ ಕೊಲ್ಲುತ್ತಿದಾನೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಭಾಗದಲ್ಲಿ ಹುಟ್ಟಿ ,ಈಗೆ ಕೊಳಚೆಯನ್ನ ಮೈ ತುಂಬಾ ಮೆತ್ತಿಕೊಂಡು ಹರಿಯುತ್ತಿರುವ ಹೇಮಾವತಿ ನದಿಯ ನಿಜ ದರ್ಶನವಾಗುತ್ತಿದೆ..ಸಾವಿರಾರು ಎಕರೆಗೆ,ಜನ ಜಾನುವಾರುಗಳಿಗೆ ಈಗಲೂ ಜೀವನಾಡಿಯಾಗಿರೋ ಹೇಮಾವತಿ ನದಿ ಬಳಿ ಹೋಗುತ್ತಿದಂತ್ತೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ.
Ram Sita Statue: ಗಂಡಕಿ ನದಿಯಿಂದ ತೆಗೆದ 40 ಟನ್ ತೂಕದ ಸಾಲಿಗ್ರಾಮ ಶಿಲೆ, 30ಕ್ಕೆ ಭಾರತ ಪ್ರವೇಶ!
ಪಾಪ ಹೇಮಾವತಿ ನದಿಯ ಒಡಲು ಅದೆಷ್ಟೂ ನೊಂದಿದಿಯೋ ಗೊತ್ತಿಲ್ಲ. ಆದರೆ ಮನಷ್ಯನ ಸ್ವಾರ್ಥಕ್ಕೆ ಜಲಚರಗಳು ಬಲಿಯಾಗ್ತಿರೋದಕ್ಕೆ ಜೀವನಾಡಿ ಆಗ್ಬೇಕಿದ್ದ ಹೇಮಾವತಿ ನದಿ ವಿಷವಾಗುತ್ತಿರುವುದು ಅಷ್ಟೇ ಸತ್ಯ. ಒಂದ್ ಕಾಲದಲ್ಲಿ ದಾಹ ನೀಗಿಸೋಕೆ ನೀರು ಕುಡಿಯುತ್ತಿದ್ದ ಜನರು ಈಗೇನಾದರೂ ನೀರು ಕುಡಿದರೆ ಆಸ್ಪತ್ರೆ ಸೆರೋದು ಗ್ಯಾರಂಟಿ. ಹೇಮಾವತಿ ನದಿಗೆ ಕಾಫಿ ಪಲ್ಪರ್ ತ್ಯಾಜ್ಯ ನೀರು ಬಿಟ್ಟ ಪರಿಣಾಮ ನದಿ ನೀರು ಕಲುಷಿತವಾಗಿ ಹರಿಯುತ್ತಿದೆ.
ಕಪ್ಪು ಬಣ್ಣಕ್ಕೆ ತಿರುಗಿದ ನದಿ ನೀರು: ಮೂಡಿಗೆರೆ ಮತ್ತು ಸಕಲೇಶಪುರ ತಾಲ್ಲೂಕುಗಳ ಗಡಿಭಾಗದಲ್ಲಿರುವ ಚಕ್ಕುಡಿಗೆ ಗ್ರಾಮದಲ್ಲಿ ಕುಡಿಯುವ ನೀರು ಕಾಫಿ ಪಲ್ಪರ್ ವಾಸನೆ ಬರುತ್ತಿದ್ದು ಕುಡಿಯುವ ನೀರಿನ ಮೂಲವಾದ ಹೇಮಾವತಿ ನದಿ ನೀರು ಕಪ್ಪುಬಣ್ಣದಲ್ಲಿ ಹರಿಯುತ್ತಿದೆ. ಇದನ್ನು ಗಮನಿಸಿದ ಸ್ಥಳೀಯರಾದ ಪೂರ್ಣೇಶ್, ಸಂದೇಶ್ ಹಾಗೂ ಸಂತೋಷ್ ಈ ಬಗ್ಗೆ ಅಧಿಕಾರಿಗಳ ಗಮನಸೆಳೆದಿದ್ದಾರೆ. ರಾತ್ರಿ ಸಮಯದಲ್ಲಿ ಕಾಫಿ ಪಲ್ಪರ್ ತ್ಯಾಜ್ಯ ನೀರನ್ನು ಹೇಮಾವತಿ ನದಿಗೆ ಬಿಡುತ್ತಿದ್ದು, ಇದರಿಂದ ನದಿ ನೀರು ಕಪ್ಪುಬಣ್ಣಕ್ಕೆ ತಿರುಗಿದ್ದು, ಕೊಳೆತ ವಾಸನೆ ಬರುತ್ತಿದೆ. ಇದರಿಂದ ಜಲಚರಗಳ ಜೀವಕ್ಕೆ ಕುತ್ತಾಗಿದ್ದು, ಈ ನೀರನ್ನು ಸೇವಿಸುವ ಜಾನುವಾರುಗಳು ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಹೇಮಾವತಿ ನದಿ ನೀರನ್ನು ಅನೇಕ ಕಡೆ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿದ್ದು ಈ ನೀರನ್ನು ಸೇವಿಸಿದರೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ.
ಮಗನ ಸಾವಿಗೆ ಇಷ್ಟೊಂದು ದೊಡ್ಡ ಸೇಡು: ಭೀಮಾ ನದಿಯಲ್ಲಿ 7 ಜನರ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್
ಎಸ್ಟೇಟ್ ಮಾಲೀಕರ ವಿರುದ್ದ ಕ್ರಮಕ್ಕೆ ಒತ್ತಾಯ : ನದಿಯ ದಡದಲ್ಲಿ ಸಾಗಿದರೆ ಪಲ್ಪರ್ ನೀರಿನ ಕೆಟ್ಟ ವಾಸನೆ ಮೂಗಿಗೆ ಹೊಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಯುವಕರು ವಿಡಿಯೋ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ. ಈ ರೀತಿ ನದಿಗೆ ಕಲುಷಿತ ನೀರನ್ನು ಬಿಡುತ್ತಾ ಅನಾಗರೀಕ ಬೇಜವಾಬ್ದಾರಿ ವರ್ತನೆ ತೋರುತ್ತಿರುವ ಎಸ್ಟೇಟ್ ಮಾಲೀಕರನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.ಲಕ್ಷಾಂತರ ಜನರಿಗೆ ಜೀವನಾಡಿಯಾಗಿರುವ, ಜನ ಜಾನುವಾರುಗಳಿಗೆ ಜೀವಸೆಲೆಯಾಗಿರುವ ಹೇಮಾವತಿ ನದಿಗೆ ಈ ರೀತಿ ಪಲ್ಪರ್ ನೀರು ಬಿಡುವುದು ವರ್ಷಂಪ್ರತಿ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗಳು, ತಹಸೀಲ್ದಾರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.