ವಿಜಯಪುರ: ಬಿಡಾಡಿ ದನಗಳ ಹಾವಳಿ, ಬಸ್, ಲಾರಿ ಕೆಳಗೆ ಸಿಕ್ಕು ಸಾಯ್ತಿವೆ ಜಾನುವಾರುಗಳು!

ಗುಮ್ಮಟನಗರಿ ವಿಜಯಪುರದಲ್ಲಿ ಜನರು ರಸ್ತೆಗಳಲ್ಲಿ ಅಡ್ಡಾಡೋದಕ್ಕೂ ಭಯಪಡ್ತಿದ್ದಾರೆ. ನಗರದ ರಸ್ತೆಗಳಲ್ಲಿ ಬೈಕ್‌ ಮೇಲೆ ಹೋಗುವಾಗ ಯಾವಾಗ ಏನಾಗುತ್ತೊ ಅನ್ನೋ ಆತಂಕ ಸವಾರರನ್ನ ಕಾಡ್ತಿದೆ. ಇನ್ನು ಒಂಟಿಯಾಗಿ ಮನೆಯಿಂದ ಹೊರಗೆ ಹೆಜ್ಜೆ ಇಡೋದಕ್ಕು ಹಿಂದೇಟು ಹಾಕ್ತಿದ್ದಾರೆ. ಕಾರಣ ಏನಂದ್ರೆ ಡೆಂಜರ್‌ ಬುಲ್‌ಗಳ ಡೆಂಜುರಸ್‌ ಅಟ್ಯಾಕ್. 

Stray cattle problem in Vijayapur trafficing rav

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಆ.29) : ಗುಮ್ಮಟನಗರಿ ವಿಜಯಪುರದಲ್ಲಿ ಜನರು ರಸ್ತೆಗಳಲ್ಲಿ ಅಡ್ಡಾಡೋದಕ್ಕೂ ಭಯಪಡ್ತಿದ್ದಾರೆ. ನಗರದ ರಸ್ತೆಗಳಲ್ಲಿ ಬೈಕ್‌ ಮೇಲೆ ಹೋಗುವಾಗ ಯಾವಾಗ ಏನಾಗುತ್ತೊ ಅನ್ನೋ ಆತಂಕ ಸವಾರರನ್ನ ಕಾಡ್ತಿದೆ. ಇನ್ನು ಒಂಟಿಯಾಗಿ ಮನೆಯಿಂದ ಹೊರಗೆ ಹೆಜ್ಜೆ ಇಡೋದಕ್ಕು ಹಿಂದೇಟು ಹಾಕ್ತಿದ್ದಾರೆ. ಕಾರಣ ಏನಂದ್ರೆ ಡೆಂಜರ್‌ ಬುಲ್‌ಗಳ ಡೆಂಜುರಸ್‌ ಅಟ್ಯಾಕ್. ವಿಜಯಪುರ ನಗರದ ಮುಖ್ಯ ರಸ್ತೆಗಳಲ್ಲಿ ಜಾನುವಾರಗಳ ಹಾವಳಿ ಜೋರಾಗಿದ್ದು, ವಾಹನ ಸವಾರರು ಪೀಕಲಾಟ ಅನುಭವಿಸುತ್ತಿದ್ದಾರೆ.

ಬಿಡಾಡಿ ದನಗಳ ಹಾವಳಿಗೆ ಬೆಚ್ಚಿಬಿದ್ದ ಗುಮ್ಮಟನಗರಿ ಜನ!

ವಿಜಯಪುರ ನಗರದಲ್ಲಿ ಬಿಡಾಡಿ ದನಗಳ(Stray cattle) ಹಾವಳಿಗೆ ಸ್ವತಃ ಜನರೇ ಬೆಚ್ಚಿ ಬಿದ್ದಿದ್ದಾರೆ. ಗುಂಪು-ಗುಂಪಾಗಿ ಜಾನುವಾರುಗಳು ರಸ್ತೆ ಸೇರಿ ಬಡಾವಣೆಗಳಲ್ಲಿ ಓಡಾಡುತ್ತಿದ್ದು ಜನರು ಮನೆಗಳಿಂದ ಹೊರಗೆ ಬರೋದಕ್ಕು ಹಿಂದೆಟು ಹಾಕುವಂತಾಗಿದೆ. ಸುಮ್ಮನೆ ಹೊರಟಿದ್ದರು ಅಂತವರ ಮೇಲೆ ಜಾನುವಾರುಗಳು ದಾಳಿ ಮಾಡ್ತಿವೆ. ಬೆನ್ನಟ್ಟಿ ಇರಿಯೋಕೆ ಬರ್ತಿವೆ. ಇದರಿಂದ ವಾಹನ ಸವಾರರು ರಸ್ತೆಗಳ ಮೇಲೆ ಓಡಾಡಲು ಭಯ ಪಡ್ತಿದ್ದಾರೆ. 

ಬಿಡಾಡಿ ದನಗಳ ದಾಳಿಗೆ ಮಹಿಳೆ ಸಾವು

ರಸ್ತೆಗಳ ಮೇಲೆಯೆ ಜಾನುವಾರುಗಳ ಗುಂಪು!

ಇನ್ನು ನಗರದ ಮುಖ್ಯ ರಸ್ತೆಗಳಲ್ಲೆ ಜಾನುವಾರುಗಳು ಗುಂಪು ಸೇರಿ ನಿಲ್ತಿವೆ. ಗೋಳಗುಮ್ಮಟ, ಗಾಂಧಿ ವೃತ್ತ, ಶಿವಾಜಿ ಸರ್ಕಲ್‌, ಗೋದಾವರಿ ಸೇರಿದಂತೆ ಆಯಕಟ್ಟಿನ ರಸ್ತೆಗಳ ತುಂಬೆಲ್ಲ ದನಗಳೆ ನಿಲ್ತಿದ್ದು, ವಾಹನ ಸವಾರರು ಓಡಾಡೋದಕ್ಕು ಪರದಾಡುತ್ತಿದ್ದಾರೆ. ಏಕಾಏಕಿ ಜಾನುವಾರುಗಳು ಬೈಕ್‌, ವಾಹನಗಳಿಗೆ ಅಡ್ಡ ಬರೋದ್ರಿಂದ ಸವಾರರು ರಸ್ತೆಗಳಲ್ಲಿ ಬೀಳುವ ಪರಿಸ್ಥಿತಿ ಎದುರಾಗಿದೆ. ಅದೆಷ್ಟೋ ಜನ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.

ಪ್ರಾಣ ಕಳೆದುಕೊಳ್ತಿರೊ ಜಾನುವಾರುಗಳು

ಕೇವಲ ಬೈಕ್ ಸವಾರರು, ವಾಹನ ಸವಾರರು ಮಾತ್ರ ಗಾಯಗೊಂಡು ಆಸ್ಪತ್ರೆ ಪಾಲಾಗುತ್ತಿಲ್ಲ. ಜಾನುವಾರುಗಳು ಸಹ ಬೈಕ್ ಡಿಕ್ಕಿ, ಬಸ್, ಲಾರಿ, ಆಟೋ ಡಿಕ್ಕಿಗೆ ಪ್ರಾಣವನ್ನೆ ಕಳೆದುಕೊಳ್ತಿವೆ. ಮೊನ್ನೆಯಷ್ಟೆ ಬಿಡಾಡಿದ ದನದ ಮೇಲೆ ಸರ್ಕಾರಿ ಬಸ್ ಹರಿದು ದನ ಸ್ಥಳದಲ್ಲೆ ಅಸುನೀಗಿದೆ. ಇನ್ನು ರಸ್ತೆಗಳ‌ ಮೇಲೆಯೆ ದನಗಳು ಕಾಲುಚಾಚಿ‌‌ ಮಲಗುವುದರಿಂದ ಗಮನಿಸದ ಲಾರಿ ಚಾಲಕರು, ಬಸ್ ಚಾಲಕರು ದನ-ಕರುಗಳ ಕಾಲಿನ ಮೇಲೆ ವಾಹನ ಹರಿಸಿಕೊಂಡು ಹೋಗ್ತಿದ್ದಾರೆ‌. ಇದರಿಂದ ಗಂಭೀರವಾಗಿ ಗಾಯಗೊಂಡ ಜಾನುವಾರುಗಳು ನಡೆಯಲಾಗದೆ ನರಕಯಾತನೆ ಅನುಭವಿಸುತ್ತಿವೆ.

ಏನಾಯ್ತು ಸರ್ಕಾರಿ ಗೋಶಾಲೆ ಕಥೆ ; ಪಾಲಿಕೆ ನಿರ್ಲಕ್ಷ್ಯ ಯಾಕೆ

ವಿಜಯಪುರ ನಗರದ ಭುರಣಾಪೂರದಲ್ಲಿ ಸರ್ಕಾರದಿಂದ ಜಿಲ್ಲೆಗೊಂದು ಗೋಶಾಲೆ ಪ್ರಾರಂಭ ಮಾಡಿದ ಸಂದರ್ಭದಲ್ಲಿ ಇಲ್ಲೂ ಸಹಿತ ಒಂದು ಗೋ ಶಾಲೆ ಆರಂಭಿಸಲಾಗಿದೆ. ಅಲ್ಲಿಗೂ ನಾಮಕಾವಸ್ಥೆ ಅನ್ನುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಾಂತರಿಸಿ ಕೈತೊಳೆದುಕೊಂಡು ಬಿಡ್ತಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೂರಾರು ಬಿಡಾಡಿ ದನಗಳಿವೆ. 

 

ಬಿಡಾಡಿ ದನಗಳಿಗೂ ಒಕ್ಕರಿಸಿದ ಚರ್ಮಗಂಟು ರೋಗ, ಆತಂಕ

ದನಗಳ ಮಾಲಿಕರ ನಿರ್ಲಕ್ಷ್ಯ

ವಿಜಯಪುರ ನಗರದಲ್ಲಿ ಕೆಲವರು ದನಗಳ ಸಾಕಿ ಅವುಗಳನ್ನ ಸರಿಯಾಗಿ ನೋಡಿಕೊಳ್ಳದೆ ರಸ್ತೆಗಳಿಗೆ ಬಿಡ್ತಿದ್ದಾರೆ. ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ರಸ್ತೆ ಬದಿಗೆ ಪ್ಲಾಸ್ಟಿಕ್, ತ್ಯಾಜ್ಯಗಳನ್ನ ತಿಂದು ದನಗಳು ಬದುಕುತ್ತಿವೆ. ಹೀಗೆ ರಸ್ತೆಗೆ ದನಗಳನ್ನ ಬಿಟ್ಟು ನಿರ್ಲಕ್ಷ್ಯ ಮೆರೆಯುತ್ತಿರುವವರ  ಮೇಲೆ‌ ಕಠಿಣ ಕ್ರಮ ಕೈಗೊಳ್ಳಬೇಕಾದ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿ ಸುಮ್ಮನಾಗ್ತಿದ್ದಾರೆ. ರಸ್ತೆಗಳ ಮನಬಂದತೆ ಅಡ್ಡಾಡೋ ಜಾನುವಾರುಗಳನ್ನ ಗೋಶಾಲೆಗಳಿಗೆ ಕಳುಹಿಸೋ ಕೆಲಸವನ್ನ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡಬೇಕಿದೆ. ಇನ್ನು ಜಾನುವಾರುಗಳನ್ನ ರಸ್ತೆಗೆ ಬಿಡೋರ ಮೇಲೆ ಕ್ರಮ ಜರುಗಿಸಬೇಕಿದೆ.

Latest Videos
Follow Us:
Download App:
  • android
  • ios