ಗಮನಿಸಿ, ಆಗುಂಬೆ ಘಾಟ್ ನಲ್ಲಿ ಜು. 27ರಿಂದ ಸೆ. 15ರವರೆಗೆ ವಾಹನಗಳ ಸಂಚಾರ ನಿಷೇಧ

ಆಗುಂಬೆ ಘಾಟ್ ನಲ್ಲಿ ಬಾರಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಿದ ಶಿವಮೊಗ್ಗ ಡಿಸಿ ಡಾ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

heavy vehicle  movement  banned from july 27th to september 15th in Agumbe Ghat gow

ಶಿವಮೊಗ್ಗ (ಜು.27): ಆಗುಂಬೆ ಘಾಟ್ ನಲ್ಲಿ ಬಾರಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಿದ ಶಿವಮೊಗ್ಗ ಡಿಸಿ ಡಾ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ 6,7 ಮತ್ತು 11 ನೇ ತಿರುವಿನಲ್ಲಿ ರಸ್ತೆ ಕುಸಿತವಾಗಿದ್ದು, ಭಾರೀ ಮಳೆ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡು ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದರ ಜೊತೆಗೆ ಹೆಚ್ಚಿನ ಮಳೆಯಿಂದಾಗಿ ತಡೆಗೋಡೆ ಕುಸಿದಿದ್ದು ಅಪಘಾತದ ಸಂಭವವಿರುವ ಕಾರಣ. ತಾತ್ಕಾಲಿಕವಾಗಿ ಭಾರೀ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗಗಳಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಕಾಫಿನಾಡಿನಲ್ಲಿ ಮಹಾಮಳೆಗೆ 80 ಕೋಟಿ ನಷ್ಟ, ವರುಣನ ಆರ್ಭಟಕ್ಕೆ ಮೂರು ಜೀವ ಬಲಿ!

ಜು. 27ರ ಇಂದು ಸಂಜೆಯಿಂದ ಸೆ. 15ರವರೆಗೆ ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಲಾಗಿದೆ. ಭಾರೀ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಲಾಗಿದೆ. ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ಚಲಿಸುವ ಭಾರೀ ವಾಹನಗಳಿಗೆ 2 ಬದಲಿ ಮಾರ್ಗ ಗೊತ್ತು ಪಡಿಸಲಾಗಿದೆ.

WCCF ಸೇರ್ಪಡೆಗೊಂಡ ವಿಶ್ವದ 40 ನಗರಗಳಲ್ಲಿ ಸ್ಥಾನ ಪಡೆದ ದೇಶದ ಏಕೈಕ ನಗರ ಬೆಂಗಳೂರು!

ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ- ಮಾಳಾಘಾಟ್-ಕಾರ್ಕಳ-ಉಡುಪಿ ಮಾರ್ಗ,  ಮತ್ತೊಂದು ತೀರ್ಥಹಳ್ಳಿ-ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ-ಉಡುಪಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶ ಹೊರಡಿಸಲಾಗಿದೆ.

ನಿನ್ನೆ ಬ್ಯಾನ್ ಆದೇಶ ಹೊರಡಿಸಿದ್ದ ಉಡುಪಿ ಡಿಸಿ: ಆಗುಂಬೆ ಘಾಟ್‌ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆ.15ರ ತನಕ ಘಾಟ್‌ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದರು. ಭಾರಿ ಮಳೆ ಮತ್ತು ಭಾರಿ ವಾಹನ ಸಂಚಾರದಿಂದ ರಾಷ್ಟ್ರೀಯ ಹೆದ್ದಾರಿ 169ಎ ಯ ಆಗುಂಬೆ ಘಾಟಿಯ 6,7 ಮತ್ತು 11 ನೇ ತಿರುವಿನಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ರಸ್ತೆ ಕುಸಿಯುವ ಆತಂಕ ಉಂಟಾಗಿದೆ. ಹೀಗಾಗಿ ಜು.27ರಿಂದ ಸೆ.15ರ ವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಬದಲಿ ಮಾರ್ಗ 1: ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಘಾಟ್‌- ಕಾರ್ಕಳ- ಉಡುಪಿ, ಮಾರ್ಗ 2: ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ ರಸ್ತೆಯನ್ನು ಬಳಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದರು.

Latest Videos
Follow Us:
Download App:
  • android
  • ios