WCCF ಸೇರ್ಪಡೆಗೊಂಡ ವಿಶ್ವದ 40 ನಗರಗಳಲ್ಲಿ ಸ್ಥಾನ ಪಡೆದ ದೇಶದ ಏಕೈಕ ನಗರ ಬೆಂಗಳೂರು!

ವಿಶ್ವ ನಗರಗಳ ಸಂಸ್ಕೃತಿ ವೇದಿಕೆಗೆ ಸೇರ್ಪಡೆಗೊಂಡ ಮೊದಲ ಭಾರತೀಯ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.

Bengaluru becomes first Indian city to join World Cities Culture Forum gow

ಬೆಂಗಳೂರು (ಜು.27): ವಿಶ್ವ ನಗರಗಳ ಸಂಸ್ಕೃತಿ ವೇದಿಕೆ ( World Cities Culture Forum- ಡಬ್ಲ್ಯುಸಿಸಿಎಫ್) ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಈ ಮೂಲಕ ಹಲವು ಹೆಸರಿಗೆ ಮತ್ತೊಂದು ಕಿರೀಟ ಸೇರಿಕೊಂಡಿದೆ. WCCF ಒಂದು ವೇದಿಕೆಯಾಗಿದ್ದು, ಇದನ್ನು 2012 ರಲ್ಲಿ ಲಂಡನ್‌ನ ಮೇಯರ್ ಸ್ಥಾಪಿಸಿದರು. ಇದು 40 ನಗರಗಳನ್ನು ಸಂಪರ್ಕಿಸುವ ಜಾಗತಿಕ ನೆಟ್‌ವರ್ಕ್ ಆಗಿದೆ, ಇದು ಭವಿಷ್ಯದ ಸಮೃದ್ಧಿಗಾಗಿ ನಗರಗಳ ಸಾಂಸ್ಕೃತಿಕ ಮಹತ್ವವನ್ನು ಹಂಚಿಕೊಳ್ಳುತ್ತದೆ. 

ಬೆಂಗಳೂರು ಪ್ರಪಂಚದಾದ್ಯಂತ 40 ನಗರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ ಪಟ್ಟಿಯಲ್ಲಿ ನ್ಯೂಯಾರ್ಕ್, ಪ್ಯಾರಿಸ್, ಟೋಕಿಯೋ, ದುಬೈ, ಲಂಡನ್ ದೇಶದ ನಗರಗಳು ಸೇರಿವೆ.   ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್‌ನೊಂದಿಗೆ ನಗರವನ್ನು ಹೆಚ್ಚು ರೋಮಾಂಚಕವಾಗಿಸಲು ಮತ್ತು ವಿಶ್ವ ದರ್ಜೆಯ ನಗರ ಎಂಬ ಮಟ್ಟವನ್ನು ತಲುಪಲು WCCF  ಕೆಲಸ ಮಾಡುತ್ತದೆ. ಬೆಂಗಳೂರಿನ ನಾಗರಿಕರು ಮತ್ತು ಸಮುದಾಯಗಳು ತಮ್ಮ ನಗರದೊಂದಿಗೆ ಉತ್ತಮವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವ ಚಟುವಟಿಕೆಗಳನ್ನು ನಡೆಸಲು ಇದು ಸಹಾಯವಾಗುತ್ತದೆ.

ಭಾರತೀಯರಿಬ್ಬರು ಲಂಡನ್‌ ನಲ್ಲಿ ಕಟ್ಟಿದ ಕಂಪೆನಿಗೆ ಕೇವಲ 3 ತಿಂಗಳಲ್ಲಿ 9,840 ಕೋಟಿ ಮೌಲ್ಯ!

ಲಂಡನ್‌ನ ಸಂಸ್ಕೃತಿ ಮತ್ತು ಸೃಜನಾತ್ಮಕ ಉದ್ಯಮಗಳ ಉಪ ಮೇಯರ್ ಮತ್ತು ವಿಶ್ವ ನಗರಗಳ ಸಂಸ್ಕೃತಿ ವೇದಿಕೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಜಸ್ಟಿನ್ ಸೈಮನ್ಸ್  ಭಾರತೀಯ ನಗರದೊಂದಿಗೆ ಕೆಲಸ ಮಾಡಲು ಉತ್ಸುಕತೆಯಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಇದು ತುಂಬಾ ವೈವಿಧ್ಯಮಯವಾಗಿದೆ ಮತ್ತು ಸಂಸ್ಕೃತಿಗೆ ದೊಡ್ಡ ಬದ್ಧತೆಯನ್ನು ಹೊಂದಿದೆ. ಸಂಸ್ಕೃತಿಯ ಕಥೆಯ ಸುತ್ತ ಬೆಂಗಳೂರಿನಲ್ಲಿ ನಿಜವಾದ ಮಹತ್ವಾಕಾಂಕ್ಷೆ ಮತ್ತು ಚಾಲನೆ ಇದ್ದಂತೆ ಭಾಸವಾಗುತ್ತಿದೆ. ಇದು ಪ್ರಪಂಚದ ಇತರ ಭಾಗಗಳಲ್ಲಿ ಟೆಕ್ ಸಿಟಿ ಎಂದು ಕರೆಯಲ್ಪಡುತ್ತದೆ. ಟೆಕ್ ಕಥೆಯ ಜೊತೆಗೆ ಸಾಂಸ್ಕೃತಿಕ ಕಥೆಯನ್ನು ತರಲು ಮತ್ತು ಅದರ ಆರ್ಥಿಕತೆ ಮತ್ತು ಜಾಗತಿಕ ನಗರವಾಗಿ ಅದರ ಸ್ಥಾನಮಾನವನ್ನು ನಿಜವಾಗಿಯೂ ಬೆಳೆಸಲು ಬೆಂಗಳೂರಿಗೆ ಇದು ಅದ್ಭುತ ಅವಕಾಶವಾಗಿದೆ ಎಂದಿದ್ದಾರೆ.

ಈ ಸಾಧನೆಗೆ ಪ್ರತಿಕ್ರಿಯಿಸಿದ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಫೌಂಡೇಶನ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಬೆಂಗಳೂರು ಹೊಸ ಮಹತ್ವಾಕಾಂಕ್ಷೆಯ ಭಾರತದ ಸೂಕ್ಷ್ಮ ರೂಪವಾಗಿದೆ ಎಂದು ಹೇಳಿದ್ದಾರೆ. ಭಾರತದ ಅತ್ಯುತ್ತಮ ಪ್ರತಿಭೆಗಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದರು.

ಲಾಕ್‌ಡೌನ್ ವೇಳೆ ಚಾಕೊಲೇಟ್ ಕಂಪನಿ ತೆರೆದು ಕೋಟ್ಯಧಿಪತಿಯಾದ

ನಗರವು ಹಲವಾರು ವಸ್ತುಸಂಗ್ರಹಾಲಯಗಳು ಮತ್ತು ಕಾಸ್ಮೋಪಾಲಿಟನ್ ಆಹಾರ ಸಂಸ್ಕೃತಿಯನ್ನು ಒಳಗೊಂಡಂತೆ ರೋಮಾಂಚಕ ವಿನ್ಯಾಸ ಮತ್ತು ನಾಟಕ ಸಮುದಾಯವನ್ನು ಒಳಗೊಂಡಿದೆ. WCCF ಗೆ ರಚನಾತ್ಮಕ ರೀತಿಯಲ್ಲಿ ಈ ಅಂಶಗಳನ್ನು ಹೈಲೈಟ್ ಮಾಡಲು ಪ್ರತಿಷ್ಠಾನವು ಗಮನಹರಿಸುತ್ತದೆ ಎಂದು ಅವರು ಹೇಳಿದರು. 

ಈ ನಡುವೆ, ಬೆಂಗಳೂರು ಡಬ್ಲ್ಯುಸಿಸಿಎಫ್ ಫೋರಂಗೆ ಸೇರ್ಪಡೆಗೊಳ್ಳುವ ಸಂದರ್ಭಕ್ಕಾಗಿ ಮತ್ತು ಸಾಂಸ್ಕೃತಿಕ ಕಲಿಕೆಯ ವಿನಿಮಯಕ್ಕಾಗಿ ಡಿಸೆಂಬರ್‌ನಲ್ಲಿ ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಂಸ್ಥಾಪಕ ಪ್ರಶಾಂತ್ ಪ್ರಕಾಶ್ ಮತ್ತು ಮಾಲಿನಿ ಗೋಯಲ್ ಅವರಿಂದ 'ಸಿಟಿ ಫೆಸ್ಟಿವಲ್' ಆಯೋಜಿಸುವ ನಿರೀಕ್ಷೆಯಿದೆ. 

Latest Videos
Follow Us:
Download App:
  • android
  • ios