Heavy Rain Fall : ಚೇರ್ ಮೇಲೆ ರಾತ್ರಿ ಕಳೆದ ಆಪರೇಷನ್ ಆದ ವ್ಯಕ್ತಿ!
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಗದಗ ನಗರದ ಎಸ್ ಎಮ್ ಕೃಷ್ಣ ಬಡಾವಣೆ ಆಟೋ ಕಾಲೊನಿಯಲ್ಲಿ 50 ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ
ಗದಗ (ಆ.1) : ಕಳೆದ ಮೂರು ದಿನದಿಂದ ಗದಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದ್ದು ಅವಾಂತರ ಸೃಷ್ಟಿಯಾಗಿದೆ.. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಗದಗ ನಗರದ ಎಸ್ ಎಮ್ ಕೃಷ್ಣ ಬಡಾವಣೆ ಆಟೋ ಕಾಲೊನಿಯಲ್ಲಿ 50 ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.. ಪಂಚಮಿ ಹಬ್ಬದ ತಯಾರಿಯಲ್ಲಿರಬೇಕಿದ್ದ ಜನರು ಮಳೆ(Rain) ನೀರು ಹೊರ ಹಾಕುವಲ್ಲಿ ನಿರತರಾಗಿದ್ರು.. ರಾತ್ರಿ 9 ಗಂಟೆಯಿಂದ ಬೆಟಗೇರಿ(Betageri) ಭಾಗದಲ್ಲಿ ನಿರಂತರ ಮಳೆಯಾದ ಕಾರಣ ಕೆರೆ ತುಂಬಿದೆ.. ಉಕ್ಕಿ ಹರಿದ ನೀರು ಕಾಲುವೆ ಮೂಲಕ ಬಡಾವಣೆಗೆ ನುಗ್ಗಿತ್ತು.. ರಾತ್ರಿಯಿಡಿ ನೀರು ಹೊರ ಹಾಕಲು ಜನ ಪರದಾಡಿದ್ರು..
ಗದಗ: ಪ್ರವಾಹದಿಂದ ನಲುಗಿದವರಿಗೆ ಬೇಕಿದೆ ಪರಿಹಾರ
ತೇವವಾದ ಪಠ್ಯ ಪುಸ್ತಕ.. ಶಾಲೆಗೆ ಹೋಗಲಾರದೆ ಮಕ್ಕಳ ಪರದಾಟ:
ಬಡಾವಣೆಯ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ಹೊಕ್ಕಿದೆ.. ಎಸ್ ಎಂ ಕೃಷ್ಣ ಬಡಾವಣೆಯ ಆಟೋ ಕಾಲೊನಿ ತಗ್ಗು ಪ್ರದೇಶದಲ್ಲಿರೋದ್ರಿಂದ ಅತಿ ಹಚ್ಚು ನೀರು ಇಲ್ಲೇ ಹರಿದು ಬರುತ್ತೆ.. ರಾತ್ರಿ ಏಕಾ ಏಕಿ ನೀರು ನುಗ್ಗಿದ್ರಿಂದ ಮನೆಯಲ್ಲಿದ್ದ ಸಾಮಾನುಗಳನ್ನ ಮೇಲೆತ್ತಿಡಲಾಗ್ಲಿಲ್ಲ.. ಇದ್ರಿಂದಾಗಿ ದವಸಧಾನ್ಯ ತೊಯ್ದಿದ್ದು, ಮಕ್ಕಳ ಪಠ್ಯ ಪುಸ್ತಕಗಳೂ ತೇವಗೊಂಡಿವೆ. ಬಡಾವಣೆ ಮಕ್ಕಳು ಶಾಲೆಗೆ ಹೋಗಲಾರದೇ ಮನೆಯಲ್ಲೇ ಕೂತಿದ್ರು..
ಚೇರ್ ಮೇಲೆ ರಾತ್ರಿಕಳೆದ ಆಪರೇಷನ್ ಆದ ವ್ಯಕ್ತಿ: ರಾತ್ರಿ ಏಕಾಏಕಿ ಮಹಗುಂಡಪ್ಪ ಕಳಗಣ್ಣನವರ್(Mahagundappa kalagannavar) ಅನ್ನೋರ ಮನೆಗೂ ನೀರು ನುಗ್ಗಿತ್ತು.. ಮಹಗುಂಡಪ್ಪ ಅವರಿಗೆ ಕಳೆದ ಕೆಲ ತಿಂಗಳ ಹಿಂದೆ ಕಾಲು ಆಪರೇಷನ್ ಆಗಿದ್ರಿಂದ ವೈದ್ಯರು(Doctor) ಬೆಡ್ ರೆಸ್ಟ್ ಹೇಳಿದ್ರು.. ನೀರು ತಾಗಿಸದಂತೆ ಸಲಹೆ ನೀಡಿದ್ರಂತೆ.. ಆದ್ರೆ, ಮನೆಯಲ್ಲಿ ನೀರು ನುದ್ದಿ ಮಹಗುಂಡಪ್ಪ ಚೇರ್ ಮೇಲೆ ಕೂತು ರಾತ್ರಿ ಕಳೆದಿದ್ದಾರೆ.. ಬೆಳಗಿನ ಜಾವ ಮೂರು ಗಂಟೆಗೆ ಕೊಂಚಮಟ್ಟಿಗೆ ನೀರು ಇಳಿದಿದೆ.. ಆಗ ಸ್ವಲ್ಪ ನಿದ್ದೆ ಮಾಡಿದ್ವಿ ಅಂತಾರೆ ಮಹಗುಂಡಪ್ಪ..
\ಗದಗ: ಮನೆ ಬಿದ್ದು ವರ್ಷವಾದರೂ ಸಿಕ್ಕಿಲ್ಲ ಪರಿಹಾರ..!
ಅಸಹಾಯಕರಾಗಿ ಕಣ್ಣೀರಿಟ್ಟ ಮಹಿಳೆಯರು: ಮನೆಗೆ ನೀರು ನುಗ್ಗಿದ್ರಿಂದ ರಾತ್ರಿ ಜಾಗರಣೆ ಮಾಡಿದ ಮಹಿಳೆಯರು, ಬೆಳಗಿನಜಾವ ತಿಂಡಿ ತಿಂದಿರಲಿಲ್ವಂತೆ.. ನೀರಿನ ಮಟ್ಟ ಕಡಿಮೆ ಆದ್ಮೇಲೆ ಮನೆ ಸ್ವಚ್ಛತೆಗೊಳಿಸಲು ಮಹಿಳೆಯರು ಮುಂದಾಗಿದ್ರು.. ಅಡುಗೆ ಮನೆಯಲ್ಲಿ ನೀರು ತುಂಬಿದ್ರಿಂದ ಉಪಾಹಾರ ತಯಾರು ಮಾಡೋದಕ್ಕೂ ಸಾಧ್ಯವಾಗಿರಲಿಲ್ಲ.. ಅಸಹಾಯಕತೆಯಿಂದ ಮಹಿಳೆಯರು ಮಳೆ ಅಂಗಳದಲ್ಲೇ ನಿಂತುಕೊಂಡಿದ್ರು..
ಬೆಳಂಬೆಳಗ್ಗೆ ಫೀಲ್ಡಿಗಿಳಿದ ನಗರಸಭೆ ಅಧ್ಯಕ್ಷರು, ಸ್ವಚ್ಛತೆಗೆ ಬುಲ್ಡೊಜರ್ ನಿಯೋಜನೆ: ನಗರದ ಎಸ್ ಎಸ್ ಕೃಷ್ಣ ಬಡಾವಣೆ, ಗಂಗಿಮಡಿ, ಬೆಟಗೇರಿಯ ಮಳೆ ಹಾನಿ ಪ್ರದೇಶಕ್ಕೆ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಭೇಟಿ ನೀಡಿದ್ರು.. ಜೊತೆಗೆ ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಗಟಾರು ಸ್ವಚ್ಛತೆಗೆ ಬುಲ್ಡೊಜರ್ ನಿಯೋಜನೆ ಮಾಡಲಾಗಿದ್ದು, ವಿವಿಧೆಡೆ ತೆರಳಿ ಬುಲ್ಡೊಜರ್ ಗಳು ರಾಜಕಾಲುವೆ ಸ್ವಚ್ಛಗೊಳಿಸಿದವು.